ರಾಜ್ಯ ಮಟ್ಟದ ವಿಶೇಷ ತರಬೇತಿ ಶಿಬಿರ
State level special training camp
ಗದಗ 02: ಸಹಕಾರ ಇಲಾಖೆ, ಗದಗ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ, ಹಾಗೂ ಕೆ.ಸಿ.ಸಿ. ಬ್ಯಾಂಕ್ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯ ಕೆ.ಸಿ.ಸಿ. ಬ್ಯಾಂಕ್ ಶಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಶಿಬಿರವನ್ನು ರವಿವಾರ ರಂದು ಲೋಟಸ್-ಇನ್ ಹೊಟೇಲ್, ಹೊಸ ಬಸ್ಟ್ಯಾಂಡ ಹತ್ತಿರ, ಮುಂಡರಗಿ ರಸ್ತೆ, ಗದಗ ತಾ.ಜಿ.ಗದಗ ಇದರ ಸಭಾಭವನದಲ್ಲಿ ಜರುಗಿತು.
ಕೆ.ಸಿ.ಸಿ. ಬ್ಯಾಂಕ ಲಿ., ಧಾರವಾಡ ಅಧ್ಯಕ್ಷರು ಹಾಗೂ ಯೂನಿಯನ್ನಿನ ನಿರ್ದೇಶಕರಾದ ಮಾನ್ಯ ಶಿವಕುಮಾರಗೌಡ ಎಸ್. ಪಾಟೀಲರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ” ಎಂಬ ಬಸವಾದಿ ಶರಣರ ವಚನವನ್ನು ಉಲ್ಲೇಖ ಮಾಡುತ್ತಾ ತರಬೇತಿಯಿಂದ ನಮ್ಮಲ್ಲಿರುವ ಜ್ಞಾನವನ್ನು ಹೆಚ್ಚಿಸಿಕೊಂಡು ಅಜ್ಞಾನವನ್ನು ಹೋಗಲಾಡಿಸಿ ವೃತ್ತಿ ಕೌಶಲ್ಯಗಳನ್ನು ಬಳಸಿಕೊಂಡು ಬ್ಯಾಂಕಿನ ಸೌಲಭ್ಯಗಳನ್ನು ಗ್ರಾಹಕರಿಗೆ ಸಂಪೂರ್ಣವಾಗಿ ತಲುಪಿಸಬೇಕು. ಈ ಹಿಂದೆ ನಾವು ಏನು ಕೆಲಸ ಮಾಡಿದ್ದೇವೆ ಹಾಗೂ ಗುರಿ ನಿಗದಿ ಪಡಿಸಿದ ಅನ್ವಯ ಮುಂದೆ ಏನು ಮಾಡಬೇಕಾಗಿದೆ ಎಂಬುದನ್ನು ಅರಿತು ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡುವುದು ಬ್ಯಾಂಕಿ ಪ್ರಗತಿಗೆ ಪೂರಕವಾಗುತ್ತದೆ. ಕೆಲಸ ನಿರ್ವಹಿಸುವಾಗ ಸಹಕಾರಿ ಕಾನೂನು, ಆರ್.ಬಿ.ಐ. ಮತ್ತು ನಬಾರ್ಡ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೇಳಿದರು.
ಮುಂದುವರೆದು ಮಾತನಾಡುತ್ತಾ ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿ ಒಟ್ಟು 559 ಸಂಘಗಳಿದ್ದು ಅದರಲ್ಲಿ 1,82,500 ರೈತರಿಗೆ ಇಲ್ಲಿಯವರೆಗೆ ಬ್ಯಾಂಕಿನಿಂದ 58,453 ರೈತರಿಗೆ ಕೃಷಿ ಸಾಲ ರೂ. 447.37 ಕೋಟಿ, 850 ರೈತರಿಗೆ ರೂ. 50.87 ಕೋಟಿ ಮಧ್ಯಮಾವಧಿ ಸಾಲ, ರೂ. 585.55 ಕೋಟಿ ಕೃಷಿಯೇತರ ಸಾಲ ನೀಡಲಾಗಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಬ್ಯಾಂಕು ರೂ. 1,228 ಕೋಟಿ ಠೇವಣಿ ಹೊಂದಿದ್ದು, ರೂ. 1,617 ಕೋಟಿ ಸಾಲ ನೀಡಲಾಗಿದ್ದು ಮಾರ್ಚ 2026 ರ ಅಂತ್ಯದ ವೇಳೆಗೆ ಕನಿಷ್ಠ ರೂ. 20 ಕೋಟಿ ಲಾಭ ಹೊಂದುವ ಗುರಿ ಇಟ್ಟುಕೊಂಡಿದ್ದೇವೆ. ಆದ ಕಾರಣ ಇಂದು ಆಗಮಿಸಿದ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಹಕರನ್ನು ಖುದ್ದಾಗಿ ಭೇಟಿ ನೀಡಿ ಈ ಮೇಲಿನಂತೆ ಬ್ಯಾಂಕು ನೀಡಿರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ ಪ್ರಚಾರ ಕೈಕೊಂಡು ಕನಿಷ್ಠ ರೂ. 100 ಕೋಟಿ ಠೇವಣಿ ಸಂಗ್ರಹಿಸುವುದು ಮತ್ತು ರೂ. 100 ಕೋಟಿ ಹೊಸ ಸಾಲ ನೀಡಲು ಗುರಿ ಹೊಂದಿದ್ದು ಅದನ್ನು ತಾವೆಲ್ಲರು ಶ್ರಮವಹಿಸಿ ಗುರಿ ಸಾಧಿಸಲು ಸೂಚಿಸಿದರು.
ಕೆ.ಸಿ.ಸಿ. ಬ್ಯಾಂಕ ಲಿ., ಧಾರವಾಡ ನಿರ್ದೇಶಕರಾದ ಗೋವಿಂದಗೌಡ ವ್ಹಿ. ಪಾಟೀಲ ರವರು ಮಾತನಾಡುತ್ತಾ "ಬದಲಾವಣೆಯೊಂದಿಗೆ ಬದಲಾಯಿಸಿ, ಇಲ್ಲದಿದ್ದರೆ ಬದಲಾವಣೆಯು ನಿಮ್ಮನ್ನು ಬದಲಾಯಿಸುತ್ತದೆ." ಇಂದಿನ ಕ್ರಿಯಾತ್ಮಕ ವಾತಾವರಣದಲ್ಲಿ, ಈ ಸಂದೇಶವು ಎಂದಿಗಿಂತಲೂ ಹೆಚ್ಚು ನಿಜವಾಗಿದೆ. ಸಹಕಾರಿ ಸಂಸ್ಥೆಗಳು ತಮ್ಮ ಕಾರ್ಯತಂತ್ರಗಳು, ಪ್ರಕ್ರಿಯೆಗಳು ಮತ್ತು ಕಾನೂನಾತ್ಮಕ ವಿಷಯಗಳನ್ನು ಅರಿತುಕೊಂಡು ನಮ್ಮನ್ನು ನಾವು ಮರು ಮೌಲ್ಯಮಾಪನ ಮಾಡಲು ಇದು ಉತ್ತಮ ಸಮಯಎಂದು ಹೇಳಿದರು.
ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಇದರ ಅಧ್ಯಕ್ಷರಾದ ಸಿ.ಎಂ.ಪಾಟೀಲ ರವರು ಮಾತನಾಡುತ್ತಾ ಇಂದಿನ ವೇಗದ ಜಗತ್ತಿನಲ್ಲಿ, ಆಜೀವ ಕಲಿಕೆಯ ಮನಸ್ಥಿತಿಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ನಮ್ಮ ಕೌಶಲ್ಯ ಮತ್ತು ಜ್ಞಾನವನ್ನು ನಿರಂತರವಾಗಿ ನವೀಕರಿಸುವ ಮೂಲಕ, ನಾವು ಹೀಗೆ ಮಾಡಬಹುದು, ವೇಗವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಸ್ತುತವಾಗಿರಿ, ನಮ್ಮ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಿ, ನಮ್ಮ ಸಮಸ್ಯೆಯನ್ನು ಪರಿಹರಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳನ್ನು ಸುಧಾರಿಸಿ, ನಮ್ಮ ವೃತ್ತಿಪರ ನೆಟ್‌ವರ್ಕ್‌ಗಳು ಮತ್ತು ಅವಕಾಶಗಳನ್ನು ವಿಸ್ತರಿಸಿಗ್ರಾಹಕರು, ಸಹೋದ್ಯೋಗಿಗಳು ಮತ್ತು ಸೃಷ್ಟಿಕರ್ತ (ದೇವರು) ಅವರೊಂದಿಗೆ ಸಾಮರಸ್ಯಪೂರ್ಣ ಸಂಬಂಧವನ್ನು ನಿರ್ಮಿಸುವುದು ಸಹಕಾರ ಹಾಗೂ ಇತರೆ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಅತ್ಯಗತ್ಯ. ಎಂದು ಹೇಳಿದರು.
ತರಬೇತಿ ಕಾರ್ಯಾಗಾರದಲ್ಲ್ಲಿ “ಮಾನವ ಸಂಪನ್ಮೂಲ ನೀತಿ, ಪಾರದರ್ಶಕ ನೇಮಕಾತಿ, ಸಿಬ್ಬಂದಿ ತರಬೇತಿ, ಕಾರ್ಯಕ್ಷಮತಾ ಮೌಲ್ಯಮಾಪನ ಶಿಸ್ತು ಹಾಗೂ ಸಿಬ್ಬಂದಿ ಕಲ್ಯಾಣ” ಹಾಗೂ “ಸಮಯಕ್ಕೆ ಸರಿಯಾಗಿ ವಸೂಲಾತಿ, ಸಾಲಗಾರರೊಂದಿಗೆ ನಿರಂತರ ಸಂಪರ್ಕ ಹಾಗೂ ಅಗತ್ಯವಿದ್ದಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳುವ” ಕುರಿತು. ಕರ್ನಾಟಕ ಗ್ರಾಮೀಣ ಬ್ಯಾಂಕ್, ಮೈಸೂರು ಇದರ ನಿವೃತ್ತ ಪ್ರಾದೇಶಿಕ ವ್ಯವಸ್ಥಾಪರದಾದ ಸಿದ್ದರಾಮೇಗೌಡ, ಇವರು “ಡಿಜಿಟಲ್ ಬ್ಯಾಂಕಿಂಗ್” ಹಾಗೂ “ಡಿ.ಸಿ.ಸಿ. ಬ್ಯಾಂಕುಗಳಲ್ಲಿ ಬೇಸಿಕ್ಸ್ ಆಫ್ ಸೈಬರ್ ಸೆಕ್ಯೂರಿಟಿ ಹಾಗೂ ಪ್ರಾಡ್ ಕಂಟ್ರೋಲ್” ಕುರಿತು. ಕರ್ನಾಟಕ ರಾಜ್ಯ ಸಹಕಾರ ಅಫೆಕ್ಷ್ ಬ್ಯಾಂಕ್ ಲಿ.,ಬೆಂಗಳೂರು ಇದರ ವಿಶ್ರಾಂತ ವ್ಯವಸ್ಥಾಪಕರಾದ ಎಸ್. ಜಿ. ಕುಲಕರ್ಣಿ ರವರು ಇವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಇದರ ಉಪಾಧ್ಯಕ್ಷರಾದ ವಾಯ್. ಎಫ್. ಪಾಟೀಲ, ಕೆ.ಸಿ.ಸಿ. ಬ್ಯಾಂಕಿನ ವಸೂಲಾಧಿಕಾರಿಯಾದ ಬಿ.ಬಿ.ನಾಯಕ, ಗದಗ ಜಿಲ್ಲಾ ನಿಯಂತ್ರಣಾಧಿಕಾರಿ ಎಸ್.ಎಂ. ಚಿಕ್ಕಮಠ, ಮರ್ಚಂಟ್ಸ ಲಿಬರಲ್ ಬ್ಯಾಂಕಿನ ಎಂ.ಡಿ. ರಾಜು ಎಲ್. ಕೋಟಿ, ಮೃತ್ಯಂಜಯ ಹಿರೇಮಠ, ಶ್ರೀಮತಿ ಗಂಗಮ್ಮ ಗದ್ದಿಗೌಡರ ಅವರು ಇದ್ದರು. ಡಂಬಳ ಬಾಲಕೀಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಸ್ನೇಹಾ ಹಾಗೂ ಸಂಗಡಿಗರು ಪ್ರಾರ್ಥನೆ ಹಾಗೂ ನಾಡಗೀತೆ ಹೇಳಿದರು ಕೆ.ಸಿ.ಸಿ. ಬ್ಯಾಂಕಿನ ಜಿ.ಎಂ. ಆದ ಎಸ್. ವ್ಹಿ. ಹೂಗಾರ ರವರು ಸ್ವಾಗತಿಸಿದರು, ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಮಹಿಳಾ ಸಹಕಾರ ಶಿಕ್ಷಕಿಯಾದ ಆರ್. ಸಿ.ಯಲಿಗಾರ ರವರು ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 