ಮೈಸೂರು ನ.26 ರಂದು ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆ: ಎನ್ ಬಿ ಶಿರಶ್ಯಾಡ

ಮೈಸೂರು ನ.26 ರಂದು ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆ: ಎನ್ ಬಿ ಶಿರಶ್ಯಾಡ State-level skating competition to be held in Mysore on November 26: N.B. Sirshayada

ಬೆಳಗಾವಿ 24: ಪ್ರಸಕ್ತ ಸಾಲಿನ ಪದವಿಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ಸ್ಕೇಟಿಂಗ್ಗ ಸ್ಪರ್ಧೆಗಳ ಕ್ರೀಡಾಕೂಟವನ್ನು ನ.26 ರಂದು ಮುಂಜಾನೆ 6 ಗಂಟೆಯಿಂದ ರಾಜ್ಯ ಮಟ್ಟದ ಸ್ಕೇಟಿಂಗ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕರಾದ ಎನ್‌.ಬಿ.ಶಿರಶ್ಯಾಡ ಅವರು ತಿಳಿಸಿದರು. 

ನಗರದ ವಾರ್ತಾ ಭವನದಲ್ಲಿ ಸೋಮವಾರ(ನ.24) ಜರುಗಿದ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ದಿನಾಂಕ: 26-11-2025 ರಂದು ಬೆಳಿಗ್ಗೆ 6.00 ರಿಂದ 9.30 ರವರೆಗೆ ಜರುಗಲಿರುವ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 100 ಕ್ಕೂ ಹೆಚ್ಚು ಸ್ಕೆಟರ್‌ಗಳು, ಪೋಷಕರು, ಸ್ವಯಂಸೇವಕರು ಮತ್ತು ಕಾಲೇಜಿನ ಸಿಬ್ಬಂದಿಗಳು ಆಗಮಿಸಲಿದ್ದಾರೆ. 

ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಬೆಳಗಾವಿ ಮತ್ತು ಗೋವಿಂದರಾಮ ಸೆಕ್ಸೇರಿಯಾ ವಿಜ್ಞಾನ ಪದವಿ ಪೂರ್ವ ಕಾಲೇಜು, ಟಿಳಕವಾಡಿ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ಕೇಟಿಂಗ್ ಸ್ಪರ್ಧೆಯನ್ನು ಎಸ್‌.ಜಿ.ಎಫ್‌.ಐ ನಿಯಮದಂತೆ ಸಂಘಟಿಸಲಾಗುತ್ತಿದ್ದು ದಿನಾಂಕ26-11-2025 ರಂದು ಬೆಳಿಗ್ಗೆ 6.00 ರಿಂದ 9.30 ರವರೆಗೆ, ತದನಂತರ 10:30 ರಿಂದ 05:00 ಗಂಟೆಯವರೆಗೆ ಶಿವಗಂಗಾ ಸ್ಕೇಟಿಂಗ್ ಸ್ಪೋರ್ಟ್ಸ ಕ್ಲಬ್, ಓಂ ನಗರ ರೋಡ, (ಪ್ಯಾಟ್ಸನ ಶೋರೂಂ ಹಿಂಭಾಗ) ಬೆಳಗಾವಿಯಲ್ಲಿ ಒಟ್ಟು 7 (ಏಳು) ರೀತಿಯ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕರಾದ ಎನ್‌.ಬಿ.ಶಿರಶ್ಯಾಡ ಅವರು ತಿಳಿಸಿದರು. 

ಪತ್ರಿಕಾ ಗೋಷ್ಠಿಯಲ್ಲಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ಜಿ ಎನ್ ಪಾಟೀಲ್, ಜಿ.ಎಸ್‌.ಎಸ್‌. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದಎಸ್ ಎಂ ದೇಸಾಯಿ, ಜಿಲ್ಲಾ ಕ್ರೀಡಾ ಸಂಯೋಜಕರು ಪ್ರಭು ಶಿವನಾಯಕರ್, ಕಾರ್ಯದರ್ಶಿಗಳು ಬೆಳಗಾವಿ ಜಿಲ್ಲಾ ಉಪನ್ಯಾಸಕರ ಸಂಘ ಡಾ. ನಾಗರಾಜ್ ಮರೆಣ್ಣವರ, ಸಂಘಟನಾ ಕಾರ್ಯದರ್ಶಿಗಳಾದ ಆನಂದ ರತ್ನಪಗೋಳ ಉಪಸ್ಥಿತರಿದ್ದರು.