ರಾಜ್ಯೋತ್ಸವದ ನ. 16ರಂದು ರಾಜ್ಯಮಟ್ಟದ ಕವಿಗೋಷ್ಠಿ
State-level poetry festival on Nov. 16
ಮುನವಳ್ಳಿ 10: ಕನ್ನಡ ರಾಜ್ಯೋತ್ಸವದ ನಿಮಿತ್ಯ ಸಹೃದಯ ಸಾಹಿತ್ಯ ಪ್ರತಿಷ್ಠಾನ ಹಾಗೂ ಡಿ. ದೇವರಾಜ್ ಅರಸು ಮೆಟ್ರಿಕ್ ಪೂರ್ವ ಬಾಲಕರ ನಿಲಯ ಮುನವಳ್ಳಿ ಸಹಯೋಗದಲ್ಲಿ ನವೆಂಬರ್ 16 ರಂದು ಭಾನುವಾರ ಬೆಳಿಗ್ಗೆ 10 ಕ್ಕೆ ನಗರದ ಡಿ. ದೇವರಾಜ್ ಅರಸು ಮೆಟ್ರಿಕ್ ಪೂರ್ವ ಬಾಲಕರ ನಿಲಯದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರರಾದ ವಿಠಲ ತಡಸಲೂರು ಕವಿಗೋಷ್ಠಿಯ ಉದ್ಘಾಟನೆ ನೆರವೇರಿಸಲಿದ್ದಾರೆ. ಹುಬ್ಬಳ್ಳಿಯ ಹಿರಿಯ ಕವಿಗಳಾದ ಮಹಾಂತಪ್ಪ ನಂದೂರ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಬೈಲಹೊಂಗಲದ ಕವಿ ಡಾ. ಮಲ್ಲಿಕಾರ್ಜುನ ಛಬ್ಬಿ ಆಶಯ ನುಡಿಗಳನ್ನಾಡಲಿದ್ದಾರೆ. ಸವದತ್ತಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾದ ರತ್ನಾ ಎಲ್. ಕದಮ್, ಸವದತ್ತಿಯ ಸಮಾಜ ಸೇವಕರಾದ ಮಲ್ಲಿಕಾರ್ಜುನ ಬೀಳಗಿ, ನಿಲಯ ಪಾಲಕರಾದ ಹಾಶೀಮ್ ತಹಶೀಲ್‌ದಾರ, ಯರಗಟ್ಟಿ ಜ್ಞಾನಜ್ಯೋತಿ ಕೋಚಿಂಗ್ ಕ್ಲಾಸಿಸ್ ಅಧ್ಯಕ್ಷರಾದ ವಿಠ್ಠಲ ಕಂಬಾರ ಹಾಗೂ ಉಡಿಕೇರಿಯ ರಾಮಲಿಂಗೇಶ್ವರ ಹೈಸ್ಕೂಲ್‌ನ ಶಿಕ್ಷಕರಾದ ಎಸ್. ಜಿ. ತುರಮಂದಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಹೃದಯ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರು, ಕವಿ, ವಿಮರ್ಶಕರಾದ ನಾಗೇಶ್ ಜೆ. ನಾಯಕ ಉಪಸ್ಥಿತರಿರುವರು.
ಕವಿಗೋಷ್ಠಿಯಲ್ಲಿ ಶಿಶಿರ ಪಾಟೀಲ, ಮನು ಗುರುಸ್ವಾಮಿ, ಪೂನಮ್ ಧಾರವಾಡಕರ ಜಿ. ಎಸ್. ಗಾಯತ್ರಿ, ತಾಜೂದ್ಧೀನ್ ಬೇತೂರ, ಎಸ್. ಡಿ. ದೊಡ್ಡಚಿಕ್ಕಣ್ಣನವರ, ಸುರೇಶ್ ತಗೊಂಡ, ಅನುರಾಧಾ ಹಿರೇಮಠ, ಚನ್ನಬಸಪ್ಪ ಮುಂದಿನಮನಿ, ಮಹಾಂತೇಶ್ ಮುದಗಲ್, ಶೃತಿ ಗುಡಿ, ಪ್ರವೀಣ್ ಮಡಿವಾಳ, ನಂದಿನಿ ಯು, ಬಸವರಾಜ ಪತ್ತಾರ, ಸೀಮಾ ಶಿರಗುಪ್ಪಿ, ಮಾಲಾ ಅಕ್ಕಿಶೆಟ್ಟಿ, ಮಾರುತಿ ಪೂಜೇರ, ಪವಿತ್ರ ಶಿಂಧೆ, ಕಿರಣ್ ಯಲಗಾರ, ಶಮಾ ಜಮಾದಾರ, ಚನ್ನಬಸಯ್ಯ ಪೂಜೇರ, ಸೌಮ್ಯ ಕೋಟಗಿ, ಜಯಶ್ರೀ ಗೂಳಪ್ಪನವರ, ಪವಿತ್ರ ಬಂಧಿ, ಅಶ್ವಿನಿ ಚಿಪ್ಪಲಕಟ್ಟಿ, ಅನಸೂಯಾ ಮೇಟ್ಯಾಲ, ಶಿವಲೀಲಾ ಕೋರವಾರ, ರೇವಣೆಪ್ಪ ಗಲಗಲಿ ಕವಿತೆ ವಾಚನ ಮಾಡುವರೆಂದು ಪ್ರತಿಷ್ಠಾನದ ಕಾರ್ಯದರ್ಶಿಗಳಾದ ರಮೇಶ್ ತಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕವಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು, ಎಲ್ಲ ಕನ್ನಡ ಮನಸ್ಸುಗಳು ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರತಿಷ್ಠಾನದ ಎಲ್ಲ ಕಾರ್ಯಕಾರಿ ಸಮಿತಿಯವರು ಕೋರಿದ್ದಾರೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 