ಬಸವರಾಜ ತೋಟಗಿಗೆ ರಾಜ್ಯ ಮಟ್ಟದ ಪ್ರಶಸ್ತಿ

 ಬಸವರಾಜ ತೋಟಗಿಗೆ ರಾಜ್ಯ ಮಟ್ಟದ ಪ್ರಶಸ್ತಿ   State-level award for Basavaraja Totagi

ಲೋಕದರ್ಶನ ವರದಿ 

   ಬೆಟಗೇರಿ 29 : ಬೆಂಗಳೂರು ಡಾ.ಭಾರತಿ ಅಕಾಡೆಮಿ ಕಲಾ ಟ್ರಸ್ಟ್‌ ವತಿಯಿಂದ ನೀಡುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ವಿಶಾಲ ಕರ್ನಾಟಕ ರತ್ನ ಪ್ರಶಸ್ತಿಯನ್ನು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಖ್ಯಾತ ಭಜನಾ ಕಲಾವಿದ ಬಸವರಾಜ ಯಲ್ಲಪ್ಪ ತೋಟಗಿ ಅವರಿಗೆ ಬೆಂಗಳೂರಿನ ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಅಕ್ಕಮಹಾದೇವಿ ಸಭಾಂಗಣದಲ್ಲಿ ಇತ್ತೀಚೆಗೆ ನೀಡಿ ಗೌರವಿಸಿದ್ದಾರೆ. 

  ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕಲಾವಿದೆ, ಬೆಂಗಳೂರು ಡಾ.ಭಾರತಿ ಅಕಾಡೆಮಿ ಕಲಾ ಟ್ರಸ್ಟ್‌ ಅಧ್ಯಕ್ಷೆ ಡಾ. ಭಾರತಿ ಬೆಂಗಳೂರು ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದರು. ಬೆಂಗಳೂರು ಸಾಹಿತಿ, ನಟ, ಸಮಾಜ ಸೇವಕ ಡಾ. ಚಿಕ್ಕಹೆಜ್ಜಾಜಿ ಮಹದೇವ ಉದ್ಘಾಟನೆ ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆದ ಬಳಿಕ ವಿವಿಧ ವಲಯದ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ಈ ವೇಳೆ ವಿತರಿಸಿದರು. 

  ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಸ್ಮೈಲ್ ಶಿವು, ಹಿರಿತೆರೆ ಮತ್ತು ಕಿರುತೆರೆ ಕಲಾವಿದೆ ಮಂಜುಳಾ ಹುಬ್ಬಳ್ಳಿ, ಅಕ್ಕಿಸಾಗರದ ಕಲಾವಿದ ಶಂಕರ ತಡಸಿ, ಬಗರನಾಳದ ಭಜನಾ ಕಲಾವಿದ ರಾಮಯ್ಯ ಮಠದ, ದಾಸನಾಳದ ಖ್ಯಾತ ಹಾರ್ಮೋನಿಯಂ ಮಾಸ್ತರ ಈರ​‍್ಪ ದಾನನ್ನವರ ಸೇರಿದಂತೆ ಬೆಂಗಳೂರು ಡಾ.ಭಾರತಿ ಅಕಾಡೆಮಿ ಕಲಾ ಟ್ರಸ್ ಪದಾಧಿಕಾರಿಗಳು, ಸದಸ್ಯರು, ಕಿರುತೆರೆ ಗಣ್ಯರು, ಹಾಗೂ ವಿವಿಧ ವಲಯದ ಕಲಾವಿದರು, ನಟರು, ಮತ್ತೀತರರು ಇದ್ದರು.