ರಾಜ್ಯ ಸರ್ಕಾರ ರೈಲು ಯೋಜನೆಗೆ ಭೂಮಿ ನೀಡಿಲ್ಲ : ಈರಣ್ಣ ಕಡಾಡಿ
State government has not provided land for rail project: Iranna Kadadi
ಬೆಳಗಾವಿ 25: ಬೆಳಗಾವಿ ಮತ್ತು ಧಾರವಾಡ ನಡುವಿನ ಕಿತ್ತೂರು ಮಾರ್ಗದ 73 ಕಿಲೋಮೀಟರ್ ಉದ್ದದ ಹೊಸ ರೈಲು ಮಾರ್ಗಕ್ಕೆ ಒಟ್ಟು 581 ಹೆಕ್ಟೇರ್ ಭೂಮಿಯ ಅಗತ್ಯವಿದ್ದು, ಜನವರಿ 2026ರವರೆಗೆ ರಾಜ್ಯ ಸರ್ಕಾರದಿಂದ ಒಂದು ಹೆಕ್ಟೇರ್ ಭೂಮಿಯನ್ನು ರೈಲ್ವೇ ಇಲಾಖೆಗೆ ಹಸ್ತಾಂತರಿಸಿಲ್ಲದಿರುವುದು ಈ ಭಾಗದ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕಿತ್ತೂರು ಮೂಲಕ ಬೆಳಗಾವಿ ಮತ್ತು ಧಾರವಾಡ ನಡುವಿನ ಹೊಸ ರೈಲ್ವೇ ಮಾರ್ಗ ಯೋಜನೆಯ ಪ್ರಸ್ತುತ ಭೌತಿಕ ಮತ್ತು ಆರ್ಥಿಕ ಪ್ರಗತಿ ಏನು? ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಸ್ಥಿತಿಗತಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕರ್ನಾಟಕದ ಎಲ್ಲಾ ರೈಲ್ವೇ ಯೋಜನೆಗಳಿಗೆ ಒಟ್ಟು 9,064 ಹೆಕ್ಟೇರ್ ಭೂಮಿ ಬೇಕಾಗಿದ್ದು, ಅದರಲ್ಲಿ ಇನ್ನೂ 3,357 ಹೆಕ್ಟೇರ್ (37ಅ) ಭೂಮಿ ಸ್ವಾಧೀನವಾಗಬೇಕಿದೆ ಶಿವಮೊಗ್ಗ - ರಾಣೆಬೆನ್ನೂರು (96 ಕಿಮೀ): 559 ಹೆಕ್ಟೇರ್ ಅಗತ್ಯವಿದ್ದು, 333 ಹೆಕ್ಟೇರ್ ಬಾಕಿ ಇದೆ, ಶಿವಮೊಗ್ಗ - ಹರಿಹರ (79 ಕಿಮೀ): 488 ಹೆಕ್ಟೇರ್ ಬಾಕಿ ಇದೆ, ವೈಟ್ ಫೀಲ್ಡ್ - ಕೋಲಾರ (53 ಕಿಮೀ): 337 ಹೆಕ್ಟೇರ್ ಹೆಕ್ಟೇರ್ ಬಾಕಿ ಇದೆ, ಹಾಸನ - ಬೇಲೂರು (32 ಕಿಮೀ): 206 ಹೆಕ್ಟೇರ್ ಬಾಕಿ ಇದೆ. ಈ ಎಲ್ಲ ಯೋಜನೆಗಳಲ್ಲೂ ರಾಜ್ಯ ಸರ್ಕಾರದಿಂದ ಭೂ ಸ್ವಾಧೀನದ ಪ್ರಗತಿ ‘ಶೂನ್ಯ’ವಾಗಿದೆ.ಒಂದೆಡೆ ರಾಜ್ಯ ಸರ್ಕಾರ ಭೂಮಿ ನೀಡಲು ವಿಳಂಬ ಮಾಡುತ್ತಿದ್ದರೆ, ಮತ್ತೊಂದೆಡೆ ಕೇಂದ್ರ ಸರ್ಕಾರವು ಕರ್ನಾಟಕದ ರೈಲ್ವೇ ಅಭಿವೃದ್ಧಿಗೆ ದಾಖಲೆ ಮಟ್ಟದ ಅನುದಾನ ನೀಡುತ್ತಿದೆ.
2009-14ರ ಅವಧಿಯಲ್ಲಿ: ವಾರ್ಷಿಕ ಸರಾಸರಿ ಕೇವಲ 835 ಕೋಟಿ ರೂ.ಗಳ ಹಂಚಿಕೆಯಾಗುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ, 2025-26ನೇ ಸಾಲಿಗೆ ಬರೋಬ್ಬರಿ 7,564 ಕೋಟಿ ರೂ.ಗಳ ಅನುದಾನ ನೀಡಲಾಗಿದ್ದು, ಇದು ಹಿಂದಿನದಕ್ಕಿಂತ 9 ಪಟ್ಟಿಗೂ ಅಧಿಕವಾಗಿದೆ.ಕರ್ನಾಟಕದಲ್ಲಿ ಮಂಜೂರಾದ ರೈಲ್ವೇ ಯೋಜನೆಗಳು: 25 (15 ಹೊಸ ಮಾರ್ಗ, 10 ಜೋಡಿ ಮಾರ್ಗ). ಒಟ್ಟು ಅಂದಾಜು ವೆಚ್ಚ: 42,517 ಕೋಟಿ ರೂ.ಗಳು, ಈವರೆಗೆ ವೆಚ್ಚವಾಗಿರುವ ಮೊತ್ತ: 21,310 ಕೋಟಿ ರೂ.ಗಳು, ಪೂರ್ಣಗೊಂಡ ಮಾರ್ಗದ ಉದ್ದ: 1,394 ಕಿಲೋಮೀಟರ್. ಪ್ರಗತಿಯಲ್ಲಿರುವ ಇತರ ಪ್ರಮುಖ ಯೋಜನೆಗಳಾದ ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ವಾಸ್ಕೋಡಗಾಮಾ ಜೋಡಿ ಮಾರ್ಗ (ರೂ 4,153 ಕೋಟಿ), ಗಿಣಿಗೇರಾ-ರಾಯಚೂರು ಹೊಸ ಮಾರ್ಗ (ರೂ 3,401 ಕೋಟಿ), ಮತ್ತು ಗದಗ-ವಾಡಿ ಹೊಸ ಮಾರ್ಗ (ರೂ 2,842 ಕೋಟಿ) ಯೋಜನೆಗಳು ಪ್ರಗತಿಯಲ್ಲಿವೆ. ಬಾಗಲಕೋಟೆ-ಕುಡಚಿ ಹೊಸ ಮಾರ್ಗ ( ರೂ 1,642 ಕೋಟಿ) ಭೂಸ್ವಾಧೀನದ ಬಹುತೇಕ ಪ್ರಕ್ರಿಯೆ ಮುಗಿದಿದ್ದು, 2027 ರ ಆರಂಭದಲ್ಲಿ ಪೂರ್ಣಗೊಳ್ಳುವ ನೀರೀಕ್ಷೆಯಿದೆ. ಕೇಂದ್ರ ಸರ್ಕಾರವು ಯೋಜನೆಯನ್ನು ಜಾರಿಗೊಳಿಸಲು ಸರ್ವ ಸನ್ನದ್ಧವಾಗಿದೆ. ಆದರೆ, ಭೂಸ್ವಾಧೀನ, ಅರಣ್ಯ ಇಲಾಖೆ ಅನುಮತಿ ಮತ್ತು ಶಾಸನಬದ್ಧ ಕ್ಲಿಯರೆನ್ಸ್‌ಗಳನ್ನು ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ.
ರಾಜ್ಯದ ಸಹಕಾರವಿದ್ದರೆ ಮಾತ್ರ ಈ ಯೋಜನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲು ಸಾಧ್ಯ" ಎಂದು ಸಚಿವರು ತಮ್ಮ ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 