ಗಡಿ ವಿವಾದ : ಉದ್ಧವ್ ಠಾಕ್ರೆ ಅನಗತ್ಯ ಹೇಳಿಕೆಗೆ - ಕಸಾಪ ಅಧ್ಯಕ್ಷರ ಆಕ್ಷೇಪ

ಗಡಿ ವಿವಾದ : ಉದ್ಧವ್ ಠಾಕ್ರೆ ಅನಗತ್ಯ ಹೇಳಿಕೆಗೆ - ಕಸಾಪ ಅಧ್ಯಕ್ಷರ ಆಕ್ಷೇಪ

ಗಡಿ ವಿವಾದ : ಉದ್ಧವ್ ಠಾಕ್ರೆ ಅನಗತ್ಯ ಹೇಳಿಕೆಗೆ  - ಕಸಾಪ ಅಧ್ಯಕ್ಷರ ಆಕ್ಷೇಪ


ಕಾರವಾರ .ಜ.18:  ಬೆಳಗಾವಿ ಸೇರಿದಂತೆ ಇತರೆ ಮರಾಠಿ  ಮಾತಾಡುವ ಪ್ರದೇಶಗಳನ್ನು ಮಹಾರಾಷ್ಟ್ರ ಮುರಳಿ ವಶಕ್ಕೆ ಪಡೆಯಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿಕೆ ಅನಗತ್ಯ ವಿವಾದ ಸೃಷ್ಟಿಸುವಂತಹದ್ದು.‌ಇದನ್ನು ಕಾರವಾರ ಕನ್ನಡ ಸಾಹಿತ್ಯ ಪರಿಷತ್ತು ಬಲವಾಗಿ ಖಂಡಿಸುತ್ತದೆ ಎಂದು ನಾಗರಾಜ್ ಹರಪನಹಳ್ಳಿ ಹೇಳಿದ್ದಾರೆ.

ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಸಾಪ ಅಧ್ಯಕ್ಷರು ಠಾಕ್ರೆ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಸಂವಿಧಾನ,‌ಭಾರತದ ಒಕ್ಕೂಟ ವ್ಯವಸ್ಥೆ ಅರ್ಥ ಮಾಡಿಕೊಂಡು ನಡೆಯಬೇಕು. ಭಾಷಾವಾರು ಪ್ರಾಂತಗಳ ರಚನೆ ಈಗ ಮುಗಿದ ಅಧ್ಯಾಯ .ಅದನ್ನು ಮತ್ತೆ ಕೆಣಕಬಾರದು. ಕೋವಿಡ್ ನಂತಹ ಸನ್ನಿವೇಶದಿಂದ ದೇಶ ಚೇತರಿಸಿಕೊಳ್ಳುವ ಈ ಸಂದರ್ಭದಲ್ಲಿ ಭಾಷಾ ಸಮಸ್ಯೆ ಪ್ತಸ್ತಾಪಿಸಿ, ಸಮಸ್ಯೆ ಸೃಷ್ಟಿಸಬಾರದು. ಎಂಇಎಸ್ ನ್ನು ಖುಷಿಪಡಿಸಲು ಇಂತಹ ಹೇಳಿಕೆ ನೀಡಬಾರದು. ಇದು ರಾಜಪ್ರಭುತ್ವದ ಕಾಲವಲ್ಲ.‌ ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಸಮುದಾಯವನ್ನು ಸಮಧಾನ ಪಡಿಸಲು ಠಾಕ್ರೆ ಅವರು ನಗರಗಳ ವಶದ ಮಾತು‌ ಆಡಬಾರದಿತ್ತು.  ಮುಖ್ಯಮಂತ್ರಿ  ತಮ್ಮ ಸ್ಥಾನದ ಮಹತ್ವ ಅರಿತು ಮಾತಾಡಬೇಕು‌ .‌ಮುಂಬಯಿನಲ್ಲಿ ಲಕ್ಷಾಂತರ ಕನ್ನಡಿಗರಿದ್ದಾರೆ. ಇದೇ ಈ ದೇಶದ ಸೌಂದರ್ಯ. ‌ಇಷ್ಟು ಅರಿತರೆ  ಸಾಕು. ಭಾಷೆಗಳು ಮನುಷ್ಯರ ಬೆಸೆಯಬೇಕು. ವಿಭಜಿಸಬಾರದು.   ಎಂದು ಕಸಾಪ ಅಧ್ಯಕ್ಷರು ಹೇಳಿದ್ದಾರೆ. ಮುಖ್ಯ ಮಂತ್ರಿಯಾಗಿ ಠಾಕ್ರೆ ಅವರು ಇದನ್ನು ಅರ್ಥಮಾಡಿಕೊಳ್ಳಬೇಕೆಂದು‌ ನಾಗರಾಜ್ ಹರಪನಹಳ್ಳಿ ವಿನಂತಿಸಿದ್ದಾರೆ.

ಮಹಾಜನ್ ವರದಿಯ ಪ್ರಕಾರ 613 ಹಳ್ಳಿಗಳನ್ನು‌ ಮಹಾರಾಷ್ಟ್ರಕ್ಕೆ ನೀಡಲಾಗಿದೆ. ಮಹಾರಾಷ್ಟ್ರ ವರದಿಯೇ ಅಂತಿಮ‌‌ ಎಂದು ಕರ್ನಾಟಕ ಹೇಳುತ್ತಾ ಬಂದಿದೆ. 813 ಹಳ್ಳಿಗಳು ಮಹಾರಾಷ್ಟ್ರದಿಂದ ನಮಗೆ ಬರಬೇಕು.‌ ಮಹಾಜನ್ ವರದಿಯಲ್ಲಿ ಬೆಳಗಾವಿ, ‌ನಿಪ್ಪಾಣಿ ಕರ್ನಾಟಕದ ಅವಿಭಾಜ್ಯ ಅಂಗವಾಗಿವೆ. ಅಕ್ಕಲಕೋಟ ,ಸೊಲ್ಲಾಪುರ ಹಾಗೂ ಆ ಭಾಗದ ಹಳ್ಳಿಗಳನ್ನು ಮಹಾರಾಷ್ಟ್ರ ನಿರ್ಲಕ್ಷಿಸಿದೆ. ಅಲ್ಲದೆ ಗಡಿ ವಿವಾದ ದಿವಾನೆ ನ್ಯಾಯಾಲಯದಲ್ಲಿದೆ. ಖಾನಾಪುರ ಕೋರ್ಟ ನಲ್ಲಿದೆ. ಪ್ರಾಥಮಿಕ ಹಂತದ ವಿಚಾರಣೆಗೆ   ಬಾಕಿಯಿದೆ. ಇದಕ್ಕೆ ಕರ್ನಾಟಕದ ಆಕ್ಷೇಪ‌ ಅರ್ಜಿ ಹಾಗೂ ೪೦೦ ಪುಟಗಳ ಕರ್ನಾಟಕದ‌ ಪರ ದಾಖಲೆಗಳನ್ನು ಕೇಂದ್ರ ಸರಕಾರಕ್ಕೆ‌  , ಸುಪ್ರೀಂ ನಲ್ಲಿ ವಾದಿಸಲು ವಕೀಲರಿಗೆ ಹಿಂದಿನ ಸಿದ್ದರಾಮಯ್ಯ ಸರಕಾರ ನೀಡಿತ್ತು. ಆಗ ಗಡಿ ವಿವಾದ ಗಮನಿಸಲು ಸಚಿವ‌ ಎಚ್ .ಕೆ.ಪಾಟೀಲರು ಇದ್ದರು. ಈಗ ಗಡಿ ರಕ್ಷಣಾ ಸಚಿವರೇ ಇಲ್ಲವಾಗಿದೆ. ಹಾಗಾಗಿ ಗಡಿ ರಕ್ಷಣಾ ಸಚಿವರ‌ನ್ನು ರಾಜ್ಯ ಸರ್ಕಾರ ತಕ್ಷಣ ನೇಮಿಸಬೇಕೆಂದು ಕಸಾಪ‌ ಅಧ್ಯಕ್ಷರು ಆಗ್ರಹಿಸಿದ್ದಾರೆ.ಉದ್ಧವ್ ಠಾಕ್ರೆ ಅವರಿಗೆ ಸಂಯಮದ ನೀತಿಯನ್ನು ‌ಹಿರಿಯರಾದ ಶರದ್ ಪವಾರ್ ಅಂಥವರು ತಿಳಿಸಿಹೇಳಬೇಕು ಎಂದು  ಕಸಾಪ ಅಧ್ಯಕ್ಷರಾದ ನಾಗರಾಜ್ ಹರಪನಹಳ್ಳಿ ಆಗ್ರಹಿಸಿದ್ದಾರೆ.