ರಾಜ್ಯ ಸಿಲತ್ ಚಾಂಪಿಯನ್‌ಶಿಪ್: ಗೊಂಡಬಾಳ ಸಹೋದರಿಯರಿಗೆ ಪ್ರಶಸ್ತಿ
State Silat Championship: Gondabal sisters win award
ಕೊಪ್ಪಳ 30: ಜಿಲ್ಲೆಯ ಕುಷ್ಟಗಿ ತಾಲೂಕು ಹನುಮಸಾಗರದ ಅಭಿನವ ತಿರುಪತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರುಗಿದ 11ನೇ ರಾಜ್ಯ ಪೆಂಚಾಕ್ ಸಿಲತ್ ಚಾಂಪಿಯನ್‌ಶಿಪ್‌ನಲ್ಲಿ ಕೊಪ್ಪಳದ ಗೊಂಡಬಾಳ ಸಹೋದರಿಯರು ತಲಾ ಎರಡು ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ಇಲ್ಲಿನ ಚೈತನ್ಯ ಗ್ರೂಪ್‌ನ ಸ್ವಾಮಿ ವಿವೇಕಾನಂದ ವಿಜ್ಞಾನ ಕಾಲೇಜಿನ ದ್ವೀತಿಯ ಪಿಯು ವಿದ್ಯಾರ್ಥಿನಿ ಕು. ಸಾಹಿತ್ಯ ಎಂ. ಗೊಂಡಬಾಳ ಅವರು ಜೂನಿಯರ್ ವಿಭಾಗದ (63-67 ಕೆಜಿ) ಲ್ಲಿ ಟ್ಯಾಂಡಿಂಗ್ (ಫೈಟಿಂಗ್) ಮೊದಲ ಸ್ಥಾನ ಗೋಲ್ಡ್ ಮತ್ತು ಜೂನಿಯರ್ ವಿಭಾಗದ ತುಂಗಲ್ ನಲ್ಲಿ ಕಂಚಿನ ಪದಕ ಪಡೆದಿದ್ದರೆ, ಭಾಗ್ಯನಗರದ ಪಯೋನಿಯರ್ ಪಬ್ಲಿಕ್ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಕು. ಅಕ್ಷರ ಎಂ. ಗೊಂಡಬಾಳ ಅವರು ಪ್ರಿ-ಟೀನ್ (54-56 ಕೆಜಿ) ವಿಭಾಗದಲ್ಲಿ ಟ್ಯಾಂಡಿಂಗ್ (ಫೈಟಿಂಗ್) ಮೊದಲ ಸ್ಥಾನ ಗೋಲ್ಡ್ ಮತ್ತು ಜೂನಿಯರ್ ವಿಭಾಗದ ತುಂಗಲ್ ನಲ್ಲಿ ಮೊದಲ ಸ್ಥಾನ ಗೋಲ್ಡ್ ಪಡೆದು ಜುಲೈ 19-20 ರಂದು ತಮಿಳುನಾಡಿನ ಚನೈನಲ್ಲಿ ನಡೆಯುವ ರಾಷ್ಟ್ರೀಯ ಸೌತ್ ಝೇನ್ ಚಾಂಪಿಯನ್‌ಶಿಪ್ ಗೇ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರ ಪೆಂಚಾಕ್ ಸಿಲತ್ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ ಟೈಲರ್, ರಾಜ್ಯ ಪೆಂಚಾಕ್ ಸಿಲತ್ ಕಾರ್ಯದರ್ಶಿ ವಿಜಯಕುಮಾರ ಹಂಚಿನಾಳ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಮಂಜುನಾಥ ಜಿ. ಗೊಂಡಬಾಳ, ಮಣಿಪುರ ರಾಜ್ಯ ಹಿರಿಯ ತರಬೇತುದಾರ ಗೊಯಿನೊ, ಜಿಲ್ಲಾ ಕಾರ್ಯದರ್ಶಿ ಈರಣ್ಣ ಬಾದಾಮಿ, ಕೋಚ್ ಆಕಾಶ್ ದೊಡ್ಡವಾಡ ಮತ್ತು ಮಹ್ಮದ್ ಅಜರುದ್ದಿನ್, ಜಂಪ್ ರೋಪ್ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷೆ ರೇಣುಕಾ ಪುರದ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 