ರಾಜ್ಯ ಕನಿಪ ಸಂಘ ರಾಜ್ಯಾಧ್ಯಕ್ಷ ನೇಕಾರರ ಮನೆಗೆ ಭೇಟಿ
State Kanipa Sangh State President visits the house of the weavers
ಕೊಪ್ಪಳ 02: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಾರ್ಚ್ 9 ನಗರದ ಕಠಾರೆ ಕಲ್ಯಾಣ ಮಂಟಪದಲ್ಲಿ ಜರುಗುವ ರಾಜ್ಯಮಟ್ಟದ ದತ್ತಪ್ರಶಸ್ತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ ಅವರು ನಡೆಸಿದರು.
ಪೂರ್ವಭಾವಿ ಸಭೆ ನಂತರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷರಾದ ಬಸವರಾಜ್ ಗೂಡ್ಲಾನೂರ ಹಾಗೂ ಖಜಾಂಚಿ ರಾಜು ಬಿ.ಆರ್ ಅವರ ನೂತನ ಗೃಹಕ್ಕೆ ಭೇಟಿ ನೀಡಿ ಗೌರವ ಸ್ವೀಕರಿಸಿದರು.ನಂತರ ಭಾಗ್ಯನಗರ ಹಾಗೂ ನವನಗರದ ನೇಕರಾರ ಮನೆಗೆ ಬೇಟಿ ನೀಡಿ ನೇಕಾರಿಕೆಯನ್ನು ವೀಕ್ಷಣೆ ಮಾಡಿ ಮಾಹಿತಿ ಪಡೆದರು. ಅಲ್ದೆ ನೇಕರಾರರು ತಯಾರಿಸಿ ಎರಡು ಸೀರೆಗಳನ್ನು ಖರೀದಿಸಿದರುಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ ಲೋಕೇಶ್, ರಾಜ್ಯ ಸಮಿತಿ ಸದಸ್ಯರಾದ ದೇವರಾಜ್, ವಿಶೇಷ ಆಹ್ವಾನಿತರಾದ ಹರೀಶ್ ಹೆಚ್ ಎಸ್, ಜಿಲ್ಲಾಧ್ಯಕ್ಷರಾದ ಹನುಮಂತ ಹಳ್ಳಿಕೇರಿ, ಸದಸ್ಯರಾದ ಬಸವರಾಜ್ ಪಲ್ಲೆದ ಇದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 