ಚಡಚಣ ಪಟ್ಟಣದಲ್ಲಿ ಹಾಡು ಹಗಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಾಕು, ಬಂದೂಕು ಹಿಡಿದು ಮುಸುಕುಧಾರಿಗಳಿಂದ ದರೋಡೆ

ಚಡಚಣ ಪಟ್ಟಣದಲ್ಲಿ ಹಾಡು ಹಗಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಾಕು, ಬಂದೂಕು ಹಿಡಿದು ಮುಸುಕುಧಾರಿಗಳಿಂದ ದರೋಡೆ State Bank of India robbed in broad daylight by masked men armed with knives and guns in Chadachana

ಚಡಚಣ 17; ರಾಜ್ಯಾದ್ಯಂತ ಬೆಚ್ಚಿ ಬೀಳಿಸುತ್ತಿರುವ ಬ್ಯಾಂಕ್ ದರೋಡೆ ಪ್ರಕರಣಗಳ ಸಾಲಿಗೆ ಇದೀಗ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಕೂಡ ಸೇರೆ​‍್ಡಯಾಗಿದೆ. ಕೇವಲ 20 ನಿಮಿಷಗಳ ಒಳಗಾಗಿ ದರೋಡೆ ನಡೆಸಿ ಪರಾರಿಆದ ದರೋಡೆಕೋರರು. 

ವಿಜಯಪುರ ಜಿಲ್ಲೆಯ ಮನಗೂಳಿಯ ಬ್ಯಾಂಕ್ ಲೂಟಿ ಮಾಸುವ ಮುನ್ನವೆ ಸಿನಿಮಿಯಾ ಮಾದರಿಯಲ್ಲಿ ಮಂಗಳವಾರ ಚಡಚಣ ಪಟ್ಟಣದಲ್ಲಿ ಹಾಡು ಹಗಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲೂಟಿ ಮಾಡಿದ್ದು ಸಂಜೆ 6.30ರ ಸಮಯಕ್ಕೆ ಅಪರಿಚಿತ ಮುಸುಕುಧಾರಿಗಳು ಸುಮಾರು 3ರಿಂದ 4 ಜನ ಆಯುಧಹೊಂದಿದವರು ಗೇಟ್ ಲಾಕ್ ಮಾಡದೇ ಸಿಬ್ಬಂದಿ ಕೆಲಸದಲ್ಲಿ ತೊಡಗಿದ್ದ ಸಂದರ್ಭ ಒಳನುಗ್ಗಿದ ಮೂವರು ಮುಸುಕುಧಾರಿಗಳು ಬ್ಯಾಂಕಿನ ಒಳಗೆ ನುಗ್ಗಿ ಬ್ಯಾಂಕ ಸಿಬಂಧಿಗಳ ಕೈಕಟ್ಟಿ ಮ್ಯಾನೇಜರ್ ಗೆ ಥಳಿಸಿ ಆಯುಧ ಪಿಸ್ತೂಲ ತೋರಿಸಿ ಗುಂಡು ಹಾರಿಸಿ ಅವರಿಂದ ಲಾಕರ್‌ಗಳ ಕೀಲಿಕೈ ತೆಗೆದು ಕೊಂಡು ಲೂಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಮ್ಯಾನೇಜರ್ ತಾರಕೇಶ್ವರ ಸೇರಿದಂತೆ ಸುಮಾರು ಆರುಜನ ಸಿಬ್ಬಂಧಿಗಳಿಗೆ ಕೈಕಟ್ಟಿ ತಲೆಗೆ ಪಿಸ್ತೂಲ ಇಟ್ಟು ಹೆದರಿಸಿದ್ದಾರೆ. 

 ಲೋನ್ ಸ್ಯಾಂಕ್ಷನ್ ಆಗಿದವರು ಸಹಿ ಮಾಡಿಹೋಗಲು ಬಂದ ಇಬ್ಬರೂ ಕಸ್ಟಮರ್‌ಗಳ  ಕೈಕಟ್ಟಿ ಹಾಕಿದ್ದಾರೆ ಪಿಸ್ತೂಲಿನಿಂದ ಗೊಳಿಯ ಸದ್ದು ಕೇಳಿಸಿದ್ದು ಒಂದೆರಡು ಪಿಸ್ತೂಲಿನ ಗುಂಡುಗಳು ಬಿದ್ದಿರುವುದು ಕಂಡು ಬಂದಿದೆ ಎಂದು ತಿಳಿದುಬಂದಿದೆ. ಸುಮಾರು ಸಂಜೆ 6.30ರ ಸುಮಾರಿಗೆ ಸಿನಿಮಿಯಾ ದೃಶ್ಯಾವಳಿಯ ಪ್ರಕಾರ ಎಂಟ್ರಿ ಕೊಟ್ಟ ದುರುಳರು ಆಯುಧ ತೋರಿಸಿ ಎಷ್ಟು ಲೂಟಿ ಮಾಡಿದ್ದಾರೆ ಎನ್ನುವುದು ಪೋಲಿಸ್ ತನಿಖೆಯಿಂದ ಗೊತ್ತಾಗುತ್ತದೆ. 

ಎಲ್ಲ ಲಾಕರ್‌ಗಳು ಓಪನ್ ಇದು ಎಷ್ಟು ಹಣ,ಭಂಗಾರದ ಒಡವೆ ಹೊತ್ತೊಯ್ದಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಚಡಚಣ ಪಿಎಸ್‌ಆಯ್,ಸಿಪಿಆಯ್ ಸುರೇಶ ಬೆಂಡಗುಂಬಳ ಮತ್ತು ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು ಪರೀಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಗುಂಡಿನಿಂದ ಯಾವುದೆ ಜೀವಕ್ಕೆ ಪ್ರಾಣಪಾಯವಾಗಿಲ್ಲ, ಏನು ಅಪಾಯವಾಗಿಲ್ಲ ಆದರೆ ಎಷ್ಟು ಹಣ ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿಲ್ಲ. ಆ ಸಮಯದಲಿ ಗೋದ್ರೆಜ್ ಎಸಿ ರಿಪೇರಿ ಎಂದು ಬಂದಿರುವ ಇಬ್ಬರು ಮೂವರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ 

ಸದ್ಯ ತನಿಖೆ ಮುಂದುವರಿದಿದ್ದು, ಕಳ್ಳತನವಾದ ನಗದು ಎಷ್ಟು? ಕೃತ್ಯ ಹೇಗಾಯಿತು? ಎಂಬಿತ್ಯಾದಿ ವಿವರ ತನಿಖೆ ಬಳಿಕವೇ ಗೊತ್ತಾಗಲಿದೆ. ಇತ್ತೀಚೆಗಷ್ಟೇ ಮನಗೂಳಿಯ ಕೆನರಾ ಬ್ಯಾಂಕ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳತನ ನಡೆದಿರುವುದನ್ನು ಈ ಸಂದರ್ಭಸ್ಮರಿಸಬಹುದು. 

ಸುದ್ದಿ ತಿಳಿಯುತ್ತಿದ್ದಂತೆ ಇಂಡಿ ಡಿವೈಎಸ್‌ಪಿ,ವಿಜಯಪುರ ಎಸ್ ಪಿ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.