ಬೆಂಗಳೂರು, ಮೇ 07,ಕೊರೋನಾ ಪ್ರಕರಣಗಳು ರಾಜ್ಯ ಹಾಗೂ ದೇಶವನ್ನು ತಲ್ಲಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ನಿಯಂತ್ರಿಸಲು ಕಿರುತೆರೆ ಧಾರಾವಾಹಿಗಳ ಚಿತ್ರೀಕರಣ ನಿಷೇಧಿಸಲಾಗಿತ್ತು. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ –ಕೆಟಿವಿದೆ ಮನವಿಯ ಮೇರೆಗೆ ಎರಡು ದಿನಗಳ ಹಿಂದಷ್ಟೇ ಧಾರಾವಾಹಿಗಳ ಷರತ್ತುಬದ್ಧ ಒಳಾಂಗಣ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದೆ.ಅನುಮತಿಗಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, , ಕಂದಾಯ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವ ಆರ್. ಅಶೋಕ ಅವರಿಗೆ ಧನ್ಯವಾದ ಸಲ್ಲಿಸಿರುವ ಕೆಟಿವಿಎ, ಇದೇ 25 ರಿಂದ ಚಿತ್ರೀಕರಣ ಆರಂಭಿಸಲು ನಿರ್ಧರಿಸಿದೆ. ಅರ್ಧದಲ್ಲೇ ನಿಂತಿರುವ ಧಾರಾವಾಹಿಗಳ ಚಿತ್ರೀಕರಣವನ್ನು ಇಂದಿನ ಸ್ಥಿತಿಗತಿಗೆ ಅನುಗುಣವಾಗಿ ಅಳವಡಿಸಿಕೊಂಡು ಚಿತ್ರೀಕರಿಸುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೆಟಿವಿಎ ಅಧ್ಯಕ್ಷ ಎಸ್. ವಿ. ಶಿವಕುಮಾರ್, ಹಾಗೂ ಕಾರ್ಯದರ್ಶಿ ಡಿ.ಸಿ. ವೀರೇಂದ್ರ ಬೆಳ್ಳಿಚುಕ್ಕಿ ಹೇಳಿಕೆ ನೀಡಿದ್ದಾರೆ.