ಕೃತಕ ಬುದ್ದಿಮತ್ತೆ ಕೇಂದ್ರ ಪ್ರಾರಂಭ

ಲೋಕದರ್ಶನ ವರದಿ

ಬೆಳಗಾವಿ 22: ಬೆಂಗಳೂರಿನ ಟೆಕ್ಡ್ ಲ್ಯಾಬ್ಸ್ ಸಹಯೋಗದಲ್ಲಿ ಬೆಳಗಾವಿಯ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಕೃತಕ ಬುದ್ದಿಮತ್ತೆ ಕೇಂದ್ರ ಇತ್ತೀಚೆಗೆ ಸ್ಥಾಪನೆಗೊಂಡಿದೆ. ಕೇಂದ್ರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಡಾ. ಆರ್.ಆರ್. ಮಳಗಿ ಮಾತನಾಡಿ, ಕೃತಕ ಬುದ್ದಿಮತ್ತಯ ಪರಿಕಲ್ಪನೆಯನ್ನು ಮಾನವ ಮೆದುಳಿನ ತರಬೇತಿಗೆ ಹೋಲಿಸಿದರು. ಇದು ಮತ್ತೊಂದು ತಾಂತ್ರಿಕಜ್ಞಾನವಾಗಿದೆ. ಒಂದರ್ಥದಲ್ಲಿ ಯಂತ್ರ ಕಲಿಕೆಯಾಗಿದೆ ಎಂದರು. ವಿದ್ಯಾಥರ್ಿಗಳು ಪ್ರಯೋಗಾಲಯದ ಸೌಲಭ್ಯ ಬಳಸಿಕೊಳ್ಳಬೇಕು. ನಿತ್ಯ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ವಿನೂತನ ಆಲೋಚನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಇಂಜಿನಿಯರ್ಗಳು ಪ್ರತ್ಯೇಕ ಸಿಸ್ತು ಅಳವಡಿಸಿಕೊಂಡು ಪ್ರತ್ಯೇಕವಾಗಿರಲು ಸಾಧ್ಯವಿಲ್ಲ. ಆಂತರಿಕ ಶಿಸ್ತು ಅಳವಡಿಕೊಳ್ಳಬೇಕು. ಭಾರತ ಕೃಷಿ ಪ್ರಧಾನ ದೇಶವಾಗಿದೆ. ಬಹುತೇಕರು ರೈತರಾಗಿದ್ದಾರೆ. ಇಂದು ಅವರು ಅನುಭವಿಸುತ್ತಿರುವ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಅವುಗಳಿಗೆ ಪರಿಹಾರ ಕಂಡ ಹಿಡಿಯಲು ಕೃತಕ ಬುದ್ದಿಮತ್ತೆಯನ್ನು ಬಳಸಿಕೊಳ್ಳಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಕ.ಎಜಿ. ವಿಶ್ವನಾಥ ಮಾತನಾಡಿ, ಇಂದು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಮಾನವನ ದೈನಂದಿನ ಜೀವನದ ಮೇಲೆ ತಂತ್ರಜ್ಞಾನ ಪ್ರಭಾವ ಅಧಿಕಗೊಂಡಿದೆ. ಕೆಲ ವಿಷಯಗಳು ರೂಪಾಂತರಗೊಳ್ಳುತ್ತಿವೆ. ಹಿಂದೆ ಕಾದಂಬರಿಯ ಕಲ್ಪನಾ ಲೋಕವೇ ಇಂದು ವಾಸ್ತವವಾಗುತ್ತಿವೆ.  ಪ್ರತಿಷ್ಠಿತ ಸಂಸ್ಥೆಯಲ್ಲಿ ಸ್ಥಾಪಿತ ಕೇಂದ್ರ ಸಾರ್ವಜನಿಕರ ಸೌಲಭ್ಯಕ್ಕೆ ಪ್ರಯೋಗಾಲಯವಾಗುವಂತೆ ವಿದ್ಯಾಥರ್ಿಗಳು ಬಳಸಿಕೊಳ್ಳಲಿ ಎಂದರು. ಬೆಂಗಳೂರಿನ ಟೆಕ್ಡ್ ಲ್ಯಾಬ್ಸ್ನ ಮುಖ್ಯ ತಾಂತ್ರಿಕ ಅಧಿಕಾರಿ ಆದಿತ್ಯ ಎಸ್.ಕೆ. ಗೌರವ ಅತಿಥಿಯಾಗಿದ್ದರು. ಡಾ. ಅನಿಲ ಶಿರಹಟ್ಟಿ, ಪ್ರೊ. ಗಣೇಶ ಅವತಿ, ಡಾ. ಶಿರೀಶ ಕೇರು ಮತ್ತಿತರರು ಉಪಸ್ಥಿತರಿದ್ದರು.