ಇಂದಿನಿಂದ ಬೆಂಗಳೂರಿನಲ್ಲಿಯೇ ಕರೋನಾ ರಕ್ತಪರೀಕ್ಷಾ ಕೇಂದ್ರ ಆರಂಭ: ಶ್ರೀರಾಮುಲು

ಬೆಂಗಳೂರು, ಫೆ. 3 :     ಮಾರಣಾಂತಿಕ ಕರೋನಾ ವೈರಸ್ ಸೋಂಕು ಹೆಚ್ಚಳ ವಿಚಾರವಾಗಿ ಪ್ರತಿಕ್ರಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, ಕೇರಳದಲ್ಲಿ ಮೂರು ಸೋಂಕು ಪ್ರಕರಣ ಕಂಡು ಬಂದಿದೆ. ಹೀಗಾಗಿ ಕರ್ನಾಟಕ ರಾಜ್ಯದಲ್ಲಿ ಮುಂಜಾಗರೂಕತೆ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರಗಿನಿಂದ ಬಂದವರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಎಲ್ಲವೂ ನೆಗೆಟೀವ್ ಬಂದಿವೆ. ರಕ್ತ ಪರೀಕ್ಷೆ ನಡೆಸಿರುವ ಎಲ್ಲವೂ ನೆಗೆಟೀವ್ ಬಂದಿದೆ ಎಂದರು.

ಇಂದಿನಿಂದಲೇ ಬೆಂಗಳೂರಿನಲ್ಲಿಯೇ ಸ್ಯಾಂಪಲ್ ಪರೀಕ್ಷೆ ಪ್ರಾರಂಭವಾಗಿದೆ. ಆರೋಗ್ಯ ಇಲಾಖೆಯಿಂದಲೇ ಪ್ರಾರಂಭಿಸಲಾಗಿದೆ.

ಏರ್ ಪೋರ್ಟ್ ನಲ್ಲಿಯೂ  ಪರೀಕ್ಷಾ  ಕೇಂದ್ರ ತೆರೆಯಲಾಗಿದೆ. ಯಾವುದೇ ರೀತಿ ಸೋಂಕು‌ ಬರಬಾರದು. ಇದರಿಂದ ಹೆಚ್ಚಿನ ಮುಂಜಾಗ್ರತೆ  ತೆಗೆದುಕೊಂಡಿದ್ದೇವೆ. ನಗರದ ನಾಲ್ಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಘಟಕಗಳನ್ನು  ತೆರೆಯಲಾಗಿದೆ ಎಂದರು.

ಫೆಬ್ರವರಿ ಆರರಂದು ಸಂಪುಟ ವಿಸ್ತರಣೆ ಮುಹೂರ್ತ ನಿಗದಿಯಾಗಿದೆ. ನಮ್ಮ  ಮುಖ್ಯಮಂತ್ರಿಗಳು ಸಮರ್ಥರಿದ್ದಾರೆ. ಅವರು ಎಲ್ಲವನ್ನೂ ನೋಡಿ  ನಿರ್ಧರಿಸುತ್ತಾರೆ. ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ನಮ್ಮ  ಸಮುದಾಯದವರು ಮುಖ್ಯಮಂತ್ರಿಗಳ ಬಳಿ ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಟ್ಟಿದ್ದಾರೆ  ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.