ಶ್ರೀರಾಮುಲು ಒಬ್ಬ ಸ್ವಾಥರ್ಿ: ಸಿದ್ದರಾಮಯ್ಯ ಕಿಡಿ

ಮೈಸೂರು, ನ.19 ಮೈತ್ರಿ ಸಕರ್ಾರದ ಪತನಕ್ಕೆ ತಮ್ಮನ್ನು ಕಾರಣ ಎಂದು ಟೀಕಿಸಿರುವ ಸಚಿವ ಶ್ರೀರಾಮುಲು ವಿರುದ್ಧ  ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಶ್ರೀರಾಮುಲು ಒಬ್ಬ ಸ್ವಾಥರ್ಿ. ಸ್ವಾರ್ಥಕ್ಕೆ ಮಾತನಾಡುವವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಶ್ರೀರಾಮುಲು ನನ್ನ ವಿರುದ್ಧ ಸೋತಿದ್ದಾರೆ. ಅದಕ್ಕೆ ಈ ರೀತಿ ಹತಾಶರಾಗಿ ಮಾತನಾಡುತ್ತಾರೆ. ಅವರಿಗೆ ಮಾನ ಮಾಯರ್ಾದೆ ಇದ್ದಿದ್ದೇ ಆದಲ್ಲಿ ಬಿಜೆಪಿ ಅವರನ್ನು ಉಪಮುಖ್ಯಮಂತ್ರಿ ಮಾಡದೇ ಶಾಸಕರಲ್ಲದ ಲಕ್ಷ್ಮಣ್ ಸವದಿಗೆ ಹುದ್ದೆ ನೀಡಿದಾಗಲೇ ರಾಮುಲು ರಾಜೀನಾಮೆ ಕೊಡಬೇಕಿತ್ತು. ಪರಿಶಿಷ್ಟ ಜಾತಿಗೆ ಶೇಕಡಾ 7ರಷ್ಟು ಮೀಸಲಾತಿ ನೀಡದಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಆದರೆ ಅವರು ರಾಜೀನಾಮೆ ಕೊಡಲೇ ಇಲ್ಲ ಎಂದು ಸಿದ್ದರಾಮಯ್ಯ ರಾಮುಲು ಕಾಲೆಳೆಯುವ ಪ್ರಯತ್ನ ಮಾಡಿದರು. ಸ್ವಾಥರ್ಿಗಳೆಲ್ಲ  ಬಿಜೆಪಿಯಲ್ಲಿ ಒಂದು ಕಡೆ ಸೇರಿಕೊಂಡಿದ್ದಾರೆ. ಅವರಿಗೆ ಮೌಲ್ಯ ಸಿದ್ಧಾಂತ ಏನೂ ಇಲ್ಲ ಎಂದರು. ಬಿಜೆಪಿ-ಜೆಡಿಎಸ್ನಿಂದ ಮತದಾರರಿಗೆ ಹಣ ಹಂಚಿಕೆ ನೋಡಿದರೆ ಜನತೆ ಬಿಜೆಪಿ-ಜೆಡಿಎಸ್ ಪರ ಜನ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಅವರೆಲ್ಲ ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ. 30 ಸಾವಿರದಷ್ಟು ಪೊಲೀಸರು ವಶಪಡಿಸಿಕೊಂಡ  ಸೀರೆ ಯಾರದ್ದು ? ಅದು ಯಾರ ದುಡ್ಡು ? ಎಲ್ಲಿಂದ ಬಂತು ? ಇದು ಅಕ್ರಮ ಅಲ್ಲವೇ ? ಕಾನೂನಿನಲ್ಲಿ ಸೀರೆ ಹಂಚುವುದಕ್ಕೆ ಅವಕಾಶ ಇದೆಯಾ ? ಸಕರ್ಾರದಲ್ಲಿ ಇದ್ದುಕೊಂಡು ಅಕ್ರಮ ಮಾಡುತ್ತಾರೆ. ಇವರಿಗೆ ನೈತಿಕತೆ ಇದೆಯಾ ? ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಮುಂದುವರಿಯಲು ಯಾವ ನೈತಿಕತೆ ಇದೆ ? ಅವರು ಚುನಾವಣಾ ಕಣದಲ್ಲಿರಲು ಅರ್ಹರಾ ? ಯೋಗೇಶ್ವರ್ ಪೋಟೋ, ಬಿಜೆಪಿ ಅವರ ಪೋಟೋ, ವಿಶ್ವನಾಥ್ ಪೋಟೋ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಯಾರ ಫೋಟೋ ಇದೆ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.