ಶ್ರೀ ವೀರಭದ್ರೇಶ್ವರ ಜಯಂತಿ ಭಕ್ತಿಭಾವದಿಂದ ಆಚರಣೆ

ಶ್ರೀ ವೀರಭದ್ರೇಶ್ವರ ಜಯಂತಿ ಭಕ್ತಿಭಾವದಿಂದ ಆಚರಣೆ  Sri Veerabhadreshwara Jayanti celebrated with devotion

ಶಿಗಾಂವಿ, ಸೆ.15: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.  ಜಯಂತಿ ಅಂಗವಾಗಿ ದೇವಸ್ಥಾನದಲ್ಲಿ ಸಕಲ ಅಭಿಷೇಕ ಹಾಗೂ ವೃದ್ಧಾಭಿಷೇಕವನ್ನು ಮಲ್ಲಯ್ಯ ಹಿರೇಮಠ ಭಕ್ತಿಪೂರ್ವಕವಾಗಿ ನೆರವೇರಿಸಿದರು. ಬಳಿಕ ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಸೇವೆ ವಿವಿಧ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.  

ಪುರವಂತರು ಮುತ್ತಿನ ಆರತಿ ಸೇವೆ ಸಲ್ಲಿಸಿದರು. ಮುತ್ತೈದೆಯರು ಹಾಗೂ ಪೂಜಾರಿಗಳು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ವೀರಗಾಸೆ ಪುರವಂತಿಕೆ ಕಲಾವಿದರಾದ ಮಂಜುನಾಥ ಮಿರ್ಜಿ, ಮಾಜಿ ಪುರಸಭೆ ಸದಸ್ಯ ರಮೇಶ ಮಹಾರುಧ್ರ​‍್ಪ ವನ್ನಳ್ಳಿ ಸೇರಿದಂತೆ ಹಲವರು ಹಾಗೂ ನೂರಾರು ಮುತ್ತೈದೆಯರು ಭಕ್ತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.