ಸರ್ವ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗೆ ಶ್ರೀಗಳ ಶ್ರಮ ಅಪಾರ

ಲೋಕದರ್ಶನವರದಿ

ಗುಳೇದಗುಡ್ಡ: ನೇರ, ನಿಷ್ಠುರ, ತೂಕಬದ್ಧ ಮಾತುಗಳ ಮೂಲಕ ಪಟ್ಟಸಾಲಿ ಸಮಾಜ ಸೇರಿದಂತೆ ನೇಕಾರ ಜನಾಂಗ ವಲ್ಲದೇ ಜಾತ್ಯಾತೀತವಾಗಿ ಸರ್ವ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳವರ ಕಾಯಕ ನಿಷ್ಠೆ ಇಡೀ ಲೋಕವೇ ಮೆಚ್ಚುವಂತದ್ದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದ್ದಾರೆ.

ಸ್ಥಳೀಯ ಪ್ರತಿಷ್ಠಿತ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 34ನೇ ವಾಷರ್ಿಕ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭದ ಸಮಾರೋಪ ಸಮಾರಂಭವನ್ನು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಬಸವರಾಜ ಶ್ರೀಗಳು ಅನೇಕ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿದ್ದಾರೆಯಲ್ಲದೇ ಧಾಮರ್ಿಕ, ಸಾಮಾಜಿಕ ನ್ಯಾಯಕ್ಕಾಗಿ ಭಾವೈಕ್ಯತೆಗಾಗಿ ಸಾಕಷ್ಟು ಧ್ವನಿ ಏತ್ತಿದ್ದಾರೆ. ಜೀವನದಲ್ಲಿ ಬದಲಾವಣೆ ಹೊಂದಿದಾಗ ಮಾತ್ರ ವ್ಯಕ್ತಿ ಶಕ್ತಿಯಾಗಿ ರೂಪಗೊಳ್ಳುತ್ತಾನೆ. ಸಂಘಟನೆಯಾಗುವುದರ ಮೂಲಕ ನೇಕಾರ ಸಮಾಜ ಜಾಗೃತವಾಗಿ ಬೆಳೆಯಬೇಕು. ರಾಜ್ಯದಲ್ಲಿ ರೈತರಂತೆ ನೇಕಾರರು ಕೂಡಾ ಬಹುಸಂಖ್ಯಾತರೆಂದು ಗುರುತಿಸುವಲ್ಲಿ ನೇಕಾರ ಜನಾಂಗದ ಶ್ರೀಗಳಲ್ಲಿ ಬಸವರಾಜ ಪಟ್ಟದಾರ್ಯ ಶ್ರೀಗಳು ಅಗ್ರಗಣ್ಯರು. ಅಸ್ಪೃಶ್ಯತೆಗೆ ನಿವಾರಣೆಗೆ ದೇವರ ದಾಸೀಮಯ್ಯನವರ ಕೊಡುಗೆ ಅಪಾರ, ನೇಕಾರ ಸಮಾಜ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಆಮೂಲಕ ಸಮಾಜದ ಸರ್ವತೋಮುಖ ಬೆಳವಣಿಗೆ ಆಗಬೇಕು ಅಲ್ಲದೇ ಶ್ರೀಮಠ ಒಂದೇ ಜಾತಿಗೆ ಸೀಮಿತವಾಗಿಲ್ಲ. ಸ್ವಾಸ್ಥ್ಯ ಸಮಾಜಕ್ಕೆ ಶ್ರೀಮಠವು ಬಹುದೊಡ್ಡ ಕೊಡುಗೆ ಕೊಟ್ಟಿದೆ ಎಂದು ಹೇಳಿದರು.

ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು, ಪ.ಪೂ. ಡಾ. ಈಶ್ವರಾನಂದ ಶ್ರೀಗಳು, ಪೂಜ್ಯಶ್ರೀ ಚಿಕ್ಕರೇವಣಸಿದ್ಧ ಶಿವಶರಣರು, ಶ್ರೀಗುರುಬಸವ ದೇವರು, ಬೆಳ್ಳೇರಿ ಶಿವಾನಂದ ಮಠದ ಡಾ.ಬಸವಾನಂದ ಶ್ರೀಗಳು ಕಾರ್ಯಕ್ರಮದ ಭಾಗವಹಿಸಿದ್ದರು. ಮುಧೋಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎಂ.ಜಿ. ದಾಸರ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಅವರನ್ನು ಸನ್ಮಾನಿಸಿದರು.ಜಗದ್ಗುರು ಗುರುಸಿದ್ದೇಶ್ವರ ವಿದ್ಯಾವರ್ದಕ ಸಂಸ್ಥೆಯ ಚೇರಮನ್ ರಾಜು ಜವಳಿ, ಶರಣ ಸಂಗಮ ಸಮಿತಿ ಅಧ್ಯಕ್ಷ ಪ್ರಕಾಶ ರೋಜಿ, ಕಾರ್ಯದಶರ್ಿ ಮಂಜುನಾಥ ರಾಜನಾಳ, ಈರಣ್ಣ ಶೇಖಾ, ಸೋಮಶೇಖರ ಕಲಬುಗರ್ಿ, ವಿವೇಕಾನಂದ ಪರಗಿ, ಬಸವರಾಜ ತಾಂಡೂರ, ಗುರು ಕಾಳಿ, ಕೂಡ್ಲೆಪ್ಪ ಕಲ್ಯಾಣಿ, ಪ್ರಾಚಾರ್ಯ ಅಶೋಕ ತುಪ್ಪದ ಮತ್ತಿತರರಿದ್ದರು.