ಲಾಭದತ್ತ ಶ್ರೀಸಿದ್ದೇಶ್ವರ ಕೋ.ಆಫರೇಟಿವ್ ಬ್ಯಾಂಕ

ಲಾಭದತ್ತ ಶ್ರೀಸಿದ್ದೇಶ್ವರ ಕೋ.ಆಫರೇಟಿವ್ ಬ್ಯಾಂಕ Sri Siddeshwara Co-operative Bank towards profit

ರಾಣೆಬೆನ್ನೂರ 31:  ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ    ಸಿದ್ದೇಶ್ವರ ಕೋ.ಆಫರೇಟಿವ್  ಬ್ಯಾಂಕ (ಲಿ) ವರ್ಷದಿಂದ ವರ್ಷಕ್ಕೆ ಗ್ರಾಹಕರ, ಸದಸ್ಯರುಗಳ, ನಿರ್ದೇಶಕರುಗಳ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಬ್ಯಾಂಕ್  ಸಮಾಜಮುಖಿ ಕಾರ್ಯಗಳೊಂದಿಗೆ ಹೆಚ್ಚಿನ ಪ್ರಗತಿಯತ್ತ ಸಾಗುವುದರ ಮೂಲಕ ಆಡಿಟ್‌ನಲ್ಲಿ ಕಳೆದ 29 ವರ್ಷಗಳಿಂದ “ಎ” ದಲ್ಲೇ ಮುಂದುವರೆದು ಪ್ರಗತಿಯ ಮುಂಚೂಣಿಯಲ್ಲಿದೆ ಎಂದು ಬ್ಯಾಂಕಿನ ಅಧ್ಯಕ್ಷ  ಹಾಗೂ ದಾನಿ ಎಂ.ಎಸ್‌. ಅರಕೇರಿ ಹೇಳಿದರು.

ರವಿವಾರ ಇಲ್ಲಿನ ಸಿದ್ದೇಶ್ವರ ಕೋ ಆ ಕೋ ಆಪರೇಟಿವ್ ಬ್ಯಾಂಕಿನ 29ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  1834 ಸದಸ್ಯರೊಂದಿಗೆ ಆರಂಭವಾದ  ಈ ಬ್ಯಾಂಕು ಇದೀಗ 2822 ಸದಸ್ಯರುಗಳನ್ನು ಹೊಂದಿ ಬ್ಯಾಂಕಿನ ಬ್ಯಾಂಕಿನ ಆರಂಭದಿಂದ ಇಲ್ಲಿಯವರೆಗೂ ಆಡಿಟ್  ವರ್ಗೀಕರಣದಲ್ಲಿ “ಎ”ದಲ್ಲಿಯೇ ಮುಂದುವರೆದಿರುವುದು ಹೆಮ್ಮೆಯ ಹಾಗೂ ಸಂತಸದ ವಿಷಯವಾಗಿದೆಎಂದರು.   

2025 ಮಾರ್ಚ್‌ 31ಕ್ಕೆ ಅಂತ್ಯವಾದಂತೆ ಶೇರು ಬಂಡವಾಳ 1 ಕೋಟಿ 77ಲಕ್ಷ ವಿದ್ದು, ಒಟ್ಟು  7 ಕೋಟಿ 40 ಲಕ್ಷ, ಠೇವಣಿ 44ಕೋಟಿ 63 ಲಕ್ಷವಿದ್ದು, ದುಡಿಯುವ ಬಂಡವಾಳ 53 ಕೋಟಿ 82 ಲಕ್ಷ, ಸಾಲ ಹಾಗೂ ಮುಂಗಡಗಳು 37 ಕೋಟಿ 92 ಲಕ್ಷ ವಿದ್ದು,  1ಕೋಟಿ 2ಲಕ್ಷ ತೆರಿಗೆಯ ನಂತರ ಈ ಬ್ಯಾಂಕು ಲಾಭ ಗಳಿಸಿದೆ ಎಂದವರು.