ಶ್ರದ್ಧೆಯಿಂದ ನಡೆದ ಶ್ರೀ ರಾಯರ ಆರಾಧನಾ ಮಹೋತ್ಸವ

ಶ್ರದ್ಧೆಯಿಂದ ನಡೆದ ಶ್ರೀ ರಾಯರ ಆರಾಧನಾ ಮಹೋತ್ಸವ Sri Raya's worship festival held with devotion

ಲೋಕದರ್ಶನ ವರದಿ 

ಕಂಪ್ಲಿ 30:  ಪಟ್ಟಣದ ಎಸ್‌ಎನ್‌ಪೇಟೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಯ ಶಾಖಾ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮದ 355ನೇ ಆರಾಧನ ಮಹೋತ್ಸವ ಶ್ರದ್ಧಾಭಕ್ತಿಯಿಂದ ಭಾನುವಾರ ನಡೆಯಿತು.    

ಬೆಳಿಗ್ಗೆ ಸುಪ್ರಭಾರತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಸಹಿತ ಫಲ ಪಂಚಾಮೃತ, ಕನಕಾಭಿಷೇಕ, ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಶಾಸಕ ಜೆ.ಎನ್‌.ಗಣೇಶ್ ಅವರು ಆರಾಧನ ಮಹೋತ್ಸವದಲ್ಲಿ ಭಾಗವಹಿಸಿ, ದೇವರ ದರ್ಶನದೊಂದಿಗೆ ಪುನೀತರಾದರು.  

ಈ ಸಂದರ್ಭದಲ್ಲಿ ವಿಚಾರಣಕರ್ತರಾದ ಟಿ.ಕೊಟ್ರೇಶ, ವ್ಯವಸ್ಥಾಪಕ ಪುರುಷೋತ್ತಮ ಆಚಾರ್, ಪುರೋಹಿತರಾದ ವಿಜಯಾಚಾರ್, ಗುರುರಾಜ ಸೇವಾ ಮತ್ತು ಮಹಿಳಾ ಭಜನಾ ಮಂಡಳಿಯವರು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.

ಸಂಜೆ ರಾಘವೇಂದ್ರ ಸ್ವಾಮಿಯ ರಥೋತ್ಸವ, ಸ್ವಸ್ತಿವಾಚನ, ತೊಟ್ಟಿಲು ಸೇವಾ, ಮಹಮಂಗಳಾರತಿ ನಡೆದವು. ನಂತರ ನಿಧಿ ರೆಡ್ಡಿ ಬೆಂಗಳೂರು ಮತ್ತು ಟಿ.ಎ.ನಾಗಶ್ರೀ ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮಗಳು ಜರುಗಿದವು.