ಸುಕ್ಷೇತ್ರ ಹರಿ ಮಂದಿರದಲ್ಲಿ ಶ್ರೀ ರಾಮನವಮಿ ಆಚರಣೆ
Sri Ram Navami celebrations at Sukshetra Hari Mandir
ಲೋಕದರ್ಶನ ವರದಿ
ಯಮಕನಮರಡಿ, 27 ; ಸ್ಥಳೀಯ ಸದ್ಗುರು ಹರಿ ಕಾಕಾ ಗೋಸಾವಿ ಋಗ್ವೇದಿ ಭಾಗವತ ಮಠ ಹರಿ ಮಂದಿರದಲ್ಲಿ ಪ್ರತಿವರ್ಷದ ಪದ್ಧತಿಯಂತೆ ದಿನಾಂಕ 27ರಂದು ಶ್ರೀ ರಾಮ ನವಮಿ ಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು ಶ್ರೀಮಠದ ಪೂಜ್ಯರಾದ ಸದ್ಗುರು ಡಾಕ್ಟರ್ ಆನಂದ ಮಹಾರಾಜ್ ಗೋಸ್ವಾಮಿ ಅವರು ಭಕ್ತಿ ಪೂರ್ವಕ ಪೂಜನರವೇರಿಸಿ ತೊಟ್ಟಿಲ ಪೂಜೆ ಮಾಡಿ ಜೋಗುಳ ಹಾಡಿ ಶ್ರೀರಾಮನ ನಾಮಕರಣ ಸಮಾರಂಭ ನೆರವೇರಿಸಲಾಯಿತು ಪೂಜಾ ಸಮಾರಂಭದಲ್ಲಿ ಅಪಾರ ಭಕ್ತರು ಆಗಮಿಸಿ ಶ್ರೀರಾಮನ ಕೃಪೆಗೆ ಪಾತ್ರರಾದರು. ಪೂಜಾ ಸಮಾರಂಭದಲ್ಲಿ ಪೂಜ್ಯರಾದ ಆನಂದ ಮಹಾರಾಜ್ ಅವರ ಮಾತೃಶ್ರೀ ಅವರು ಪಾಲ್ಗೊಂಡು ಭಕ್ತಿ ನಮನ ಸಲ್ಲಿಸಿದರು.
ಈ ಕುರಿತು ಒಂದು ಕಿರು ಲೇಖನ ಶ್ರೀರಾಮ ಚರಿತ್ರೆ ಶ್ರೀ ರಾಮ ನವಮಿ ಹಬ್ಬದ ಶುಭಾಶಯಗಳು ಶ್ರೀ ರಾಮ ನವಮಿಯು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುವ ಭಗವಾನ್ ವಿಷ್ಣುವಿನ 7ನೇ ಅವತಾರವಾದ ಶ್ರೀರಾಮನ ಜನ್ಮದಿನವಾಗಿದೆ. ಇದು ಅಧರ್ಮದ ಮೇಲೆ ಧರ್ಮದ ವಿಜಯ, ದುಷ್ಟರ ಸಂಹಾರ, ಮತ್ತು ಸತ್ಯ-ಸದಾಚಾರದ ಸಂಕೇತವಾಗಿದೆ. ಈ ದಿನದಂದು ಭಕ್ತರು ಉಪವಾಸ, ಪೂಜೆ, ರಾಮಾಯಣ ಪಠಣ, ರಾಮನ ಆದರ್ಶಗಳನ್ನು ಸ್ಮರಿಸುತ್ತಾರೆ. ಶ್ರೀ ರಾಮ ಜನ್ಮೋತ್ಸವ ಅಯೋಧ್ಯೆಯ ರಾಜ ದಶರಥ ಮತ್ತು ರಾಣಿ ಕೌಸಲ್ಯೆಯ ಮಗನಾಗಿ ಶ್ರೀರಾಮನು ಜನಿಸಿದ ಈ ದಿನವನ್ನು ಜನ್ಮೋತ್ಸವವಾಗಿ ಆಚರಿಸಲಾಗುತ್ತದೆ.
ಧರ್ಮದ ಸ್ಥಾಪನೆ ರಾಮನು ಭೂಮಿಯ ಮೇಲೆ ಅಧರ್ಮವನ್ನು ನಾಶಪಡಿಸಿ, ಧರ್ಮ ಮತ್ತು ನೈತಿಕತೆಯನ್ನು ಮರುಸ್ಥಾಪಿಸಿದ ಸಂಕೇತವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಆದರ್ಶ ಜೀವನ ರಾಮನು ಒಬ್ಬ ಆದರ್ಶ ರಾಜ, ಮಗ, ಪತಿ ಮತ್ತು ಸಹೋದರನಾಗಿದ್ದು, ಅವನ ಜೀವನದ ಮೌಲ್ಯಗಳಾದ ತ್ಯಾಗ, ಭಕ್ತಿ, ವಿನಮ್ರತೆ ಮತ್ತು ಸಹಾನುಭೂತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ. ಆಧ್ಯಾತ್ಮಿಕ ಬೆಳವಣಿಗೆ ರಾಮ ನವಮಿಯಂದು ಉಪವಾಸ, ಪ್ರಾರ್ಥನೆ ಮತ್ತು ರಾಮ ನಾಮ ಪಠಣೆಯಿಂದ ಆಧ್ಯಾತ್ಮಿಕ ಶಕ್ತಿ ಲಭಿಸುತ್ತದೆ ಎಂದು ನಂಬಲಾಗಿದೆ. ಸಮುದಾಯ ಆಚರಣೆ ಈ ಹಬ್ಬವು ದೇಶಾದ್ಯಂತ ಭಜನೆ, ಸೀತಾರಾಮ ಕಲ್ಯಾಣೋತ್ಸವ, ಮತ್ತು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀ ರಾಮ ನವಮಿಯು ಮರ್ಯಾದಾ ಪುರುಷೋತ್ತಮನಾಗಿ ಬಾಳಿದ ರಾಮನ ಜೀವನವನ್ನು ಸ್ಮರಿಸುತ್ತಾ, ನಮ್ಮ ಜೀವನವನ್ನು ಸನ್ಮಾರ್ಗದಲ್ಲಿ ನಡೆಸಲು ಪ್ರೇರಣೆ ನೀಡುವ ಪವಿತ್ರ ದಿನವಾಗಿದೆ.
ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಲಾಗುತ್ತಿದ್ದು, ರಾಮನವಮಿ ಸಕಲ ಹಿಂದೂ ಧರ್ಮ ಸಂಜಾತರಿಗೂ ಭಾರತದಲ್ಲಿ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ. ಶ್ರೀರಾಮ ರಾಮಾಯಣದ ಕಥಾ ನಾಯಕನಾಗಿದ್ದು, ಆದಿಕಾಲದ ಭಾರತದ ಅಯೋಧ್ಯೆಯ ರಾಜನೆಂದು ಕರೆಯಲಾಗುತ್ತದೆ. ದಶರಥ ಮಹಾರಾಜ ಶ್ರೀರಾಮನ ತಂದೆಯಾಗಿದ್ದು, ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ರಾಮನವಮಿ ಹಬ್ಬವನ್ನು ಚೈತ್ರ ಮಾಸದ 9ನೇ ದಿನದಂದು ಆಚರಣೆ ಮಾಡಲಾಗುತ್ತದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 