ಶ್ರೀ ನೀಲಗಂಗಾ ದೇವಿ ಜಾತ್ರಾ ಮಹೋತ್ಸವ: ಪಲ್ಲಕ್ಕಿ ಉತ್ಸವ

ಶ್ರೀ ನೀಲಗಂಗಾ ದೇವಿ ಜಾತ್ರಾ ಮಹೋತ್ಸವ: ಪಲ್ಲಕ್ಕಿ ಉತ್ಸವ Sri Neelganga Devi Jatra Festival: Palanquin Festival

ಸಿಂದಗಿ 11: ಪಟ್ಟಣದ ಗ್ರಾಮ ದೇವತೆ ತಾಯಿ ಶ್ರೀ ನೀಲಗಂಗಾ ದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ಪಲ್ಲಕ್ಕಿ ಉತ್ಸವವು ಸೋಮವಾರ ಅತ್ಯಂತ ಅರ್ಥಪೂರ್ಣ ಮತ್ತು ವೈಭವ ಪೂರ್ಣವಾಗಿ ನೆರವೇರಿತು. ಸ್ಥಳೀಯ ಸಾರಂಗಮಠದ ಪರಮ ಪೂಜ್ಯ   ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಮತ್ತು ಉತ್ತರಾಧಿಕಾರಿ ಪರಮಪೂಜ್ಯ  ಡಾ. ವಿಶ್ವ ಪ್ರಭುದೇವ ಶಿವಾಚಾರ್ಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.  ನಂತರ ಪುರವಂತರ ಸೇವೆ ಮುಗಿದ ಬಳಿಕ ದೇವಿಯ ಮೂರ್ತಿಗಳನ್ನು ಇರಿಸಿ ಪಲ್ಲಕ್ಕಿ ಮೆರವಣಿಗೆ ಜರಗಿತು. ಪಲ್ಲಕ್ಕಿ ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಸಾವಿರಾರು ಭಕ್ತರು ಉರುಳು ಸೇವೆಯನ್ನು ಸಲ್ಲಿಸಿದರು. 

 ದೀಪಾವಳಿ ಪಾಡ್ಯ ದಿನದಂದು ಪ್ರಾರಂಭಗೊಂಡ ಜಾತ್ರೆ ಪಲ್ಲಕ್ಕಿ ಉತ್ಸವದೊಂದಿಗೆ ಮುಕ್ತಾಯಗೊಂಡಿತು. ಗೌರಿ ಹುಣ್ಣಿಮೆಯ ಮುಂದಿನ ಐದು ದಿನಗಳ ನಂತರ ನಡೆಯುವ ಈ ಜಾತ್ರೆಯಲ್ಲಿ ನೂರಾರು ಭಕ್ತರು ಉಪವಾಸ ಕೈಗೊಂಡಿರುವುದು ವಿಶೇಷವಾಗಿತ್ತು. ಪಲ್ಲಕ್ಕಿ ಮೂಲ ದೇವಸ್ಥಾನಕ್ಕೆ ಬಂದ ನಂತರ ಪೂಜಾ ಕೈಂಕರಗಳು ಮುಗಿದ ಬಳಿಕ ಉಪವಾಸ ಅಂತ್ಯ ಕಂಡಿತು.  ಮುಖ್ಯ ಬಜಾರದ ಮೂಲಕ ಪಟ್ಟಣದ ಬಸವಣ್ಣ ದೇವಸ್ಥಾನಕ್ಕೆ ತೆರಳಿ ಪುನಃ ದೇವಸ್ಥಾನಕ್ಕೆ ಪಲ್ಲಕ್ಕಿ ಆಗಮಿಸಿತು. ಮಾರ್ಗ ಮಧ್ಯದಲ್ಲಿ ಸಾವಿರಾರು ಭಕ್ತರು ಬಾಳೆಹಣ್ಣು, ಉತ್ತತ್ತಿ, ಕೊಬ್ಬರಿ ಸೇರಿದಂತೆ ವಿವಿಧ ಹಣ್ಣುಗಳನ್ನು ಪಲ್ಲಕ್ಕಿಯ ಮೇಲೆ ಎಸೆದು ದೇವಿಯ ಆಶೀರ್ವಾದ ಪಡೆದುಕೊಂಡರು.  ಪಲ್ಲಕ್ಕಿಯ ಹಿಂದೆ ನೂರಾರು ಸುಮಂಗಲೆಯರು ಆರತಿ ಹಿಡಿದು ನಡೆದರು. ಈ ವೇಳೆ ನಂದಿಕೋಲ ಹಿಡಿದು ನಡೆದರು. 

 ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನದ ಧರ್ಮದರ್ಶಿ ಸುನೀಲಗೌಡ ದೇವರಮನಿ, ಸುಧೀರಗೌಡ ದೇವರಮನಿ, ಶಾಸಕ ಅಶೋಕ ಮನಗೂಳಿ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ,   ಅಶೋಕಗೌಡ ದೇವರಮನಿ,  ಮಹಾಂತೇಶ ಪಟ್ಟಣಶೆಟ್ಟಿ, ಅಶೋಕ ವಾರದ, ಜಿ. ಕೆ. ಪಡಗಾನೂರ, ಬಸವರಾಜ ತಾಳಿಕೋಟಿ, ಶಿವಪ್ಪ ಪಟ್ಟಣಶೆಟ್ಟಿ, ನಿಂಗಪ್ಪ ಪಟ್ಟಣಶೆಟ್ಟಿ,  ಚಂದ್ರಕಾಂತ ಬಮ್ಮಣ್ಣಿ, ಡಾ ರವಿ ಗೋಲಾ, ಚನ್ನಪ್ಪ ಗೋಣಿ, ಕುಮಾರ್ ಪಟ್ಟಣಶೆಟ್ಟಿ, ರವಿ ಗವಸಾನಿ, ಮುತ್ತು ಮುಂಡೆವಾಡಗಿ, ಅನೀಲ ಪಟ್ಟಣಶೆಟ್ಟಿ,  ಮುತ್ತು ಪಟ್ಟಣಶೆಟ್ಟಿ, ಡಾ. ಶರಣಬಸವ ಜೋಗೂರ, ರಾಜು ಪತ್ತಾರ, ಸಂತೋಷ ಪಟ್ಟಣಶೆಟ್ಟಿ, ರುದ್ರು ಪಟ್ಟಣಶೆಟ್ಟಿ, ಗಂಗಾಧರ ಕಿಣಗಿ, ಕುಮಾರ ಕಿಣಗಿ, ಪ್ರಶಾಂತ ಪಟ್ಟಣಶೆಟ್ಟಿ, ಸಿದ್ದಲಿಂಗ ಕಿಣಗಿ, ಬಾಬು ರೇಬಿನಾಳ, ಪ್ರಕಾಶ ಗುಣಾರಿ, ಬಸಲಿಂಗಪ್ಪ ಕಿಣಗಿ, ನಿಂಗಪ್ಪ ಮುಂಡೇವಾಡಗಿ, ಶ್ರೀಧರ್ ಬೊಮ್ಮಣ್ಣಿ,  ಬಸವರಾಜ್ ಜೋಗೂರ, ವಿಶ್ವನಾಥ ಭೈರಿ, ಆನಂದ ಪಟ್ಟಣಶೆಟ್ಟಿ, ಬಾಬು ಜಂಜಾ, ಪ್ರಶಾಂತ ಪತ್ತಾರ್, ರವಿ ಕಮತಗಿ, ಶಿವು ಕೆಂಭಾವಿ, ಗೊಲ್ಲಾಳ ಅಗಸರ, ಈರಣ್ಣ ಕೆಂಭಾವಿ, ವಿಶ್ವನಾಥ ಶಿವಶಿಂಪಗೇರ, ಬಸಯ್ಯ ಹಿರೇಮಠ ಸೇರಿದಂತೆ ಇತರರು ಇದ್ದರು.