14ರಿಂದ 18ವರಿಗೆ ಶ್ರೀ ಮರುಳಸಿದ್ದೇಶ್ವರ ಜಾತ್ರೆ

14ರಿಂದ 18ವರಿಗೆ ಶ್ರೀ ಮರುಳಸಿದ್ದೇಶ್ವರ ಜಾತ್ರೆ  Sri Marulasiddheshwara Fair from 14th to 18th

ಇಂಡಿ 12: ತಾಲ್ಲೂಕಿನ ಸುಕ್ಷೇತ್ರ ತಡವಲಗಾ (ಜೋಡಗುಡಿ) ಗ್ರಾಮದ ಶ್ರೀ ಮರುಳಸಿದ್ದೇಶ್ವರ ಕಾರ್ತೀಕ ಮಾಸದ ಪ್ರಯುಕ್ತ ಶ್ರೀ ಮಾಹಾಲಕ್ಷ್ಮೀ ದೇವಸ್ಥಾನ ಕಳಸಾರೋಹಣ ಹಾಗೂ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಶ್ರೀ ಮರುಳಸಿದ್ದೇಶ್ವರ ಮಾಹಾರಥೋತ್ಸವ ಹಾಗೂ ಲಕ್ಷದೀಪೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿದೆ ಎಂದು ತಡವಲಗಾ ಹೀರೆಮಠದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ತಿಳಿಸಿದ್ದಾರೆ. 

ಅವರು ಇಂದು ಇಂಡಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದಿ. 14 ರಿಂದ 18 ರವರಿಗೆ ಬೃಹತ್ ಜಾನುವಾರುಗಳ ಜಾತ್ರೆ ಮತ್ತು  ಸಾಯಂಕಾಲ 06-00 ಗಂಟೆಗೆ "ಬಾಲವಾಗ್ಮೀ ಕುಮಾರಿ:ಹಾರಿಕಾ ಮಂಜುನಾಥ" ಇವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ದಿ. 15ರಂದು ಬೆಳಿಗ್ಗೆ 10-30 ಗಂಟೆಗೆ ತಡವಲಗಾ ಸಂಸ್ಕೃತಿಕ ಉತ್ಸವ ಉದ್ಘಾಟನೆ ಸಂರ್ಕೀರ್ಣಗೋಷ್ಠಿ ಕವಿಗೋಷ್ಠಿ ವಿಶ್ವಚೇತನ ಪ್ರಶಸ್ತಿ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ರೈತಗೀತೆ ನಾಡಗೀತೆ ಸಂತೋಷ ವಾಲಿಕಾರ  ಹಿರೇಮಸಳಿ ತಂಡದಿಂದ ನಡೆಯಲಿದೆ.ಮದ್ಯಾಹ್ನ  01-00 ಗಂಟೆಗೆ ಖ್ಯಾತ ಅಂಕಣಕಾರ ಮಂಜುನಾಥ ಜುನಗೊಂಡ ಇವರಿಂದ "ಧರ್ಮ ಮತ್ತು ಭಾರತೀಯ ಸಂಸ್ಕೃತಿ"ಹಾಗೂ ರವೀಂದ್ರ ಬೆಳ್ಳಿ ಇವರಿಂದ"ಸಾವಯುವ ಕೃಷಿ ಮತ್ತು ಆಧುನಿಕ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಕೆ" ಹಾಗೂ ಸಿದ್ದಪ್ಪ ಬಿದರಿ ಇವರಿಂದ "ಜಾನಪದದಲ್ಲಿ ಜೀವನ ಮೌಲ್ಯಗಳು ಎಂಬ ಸಂಕೀರ್ಣ ಗೋಷ್ಠಿ ನಂತರ ಶಂಕರ ಬೈಚಬಾಳ ಗುರುರಾಜ ಲೂತಿ ಹಾಗೂ ಅನೇಕ ಕವಿಗಳಿಂದ ಕವಿಗೋಷ್ಠಿ ನಂತರ ಸಮಾರೋಪ ಹಾಗೂ ಪ್ರಶಸ್ತಿ ಸಮಾರಂಭ ನಡೆಯಲಿದೆ.ನಂತರ ಶುಂಭು ಬಳಿಗಾರ್ ಇವರ ನೇತೃತ್ವದಲ್ಲಿ ಸಂಸ್ಕೃತಿಕ ಕಾರ್ಯಕ್ರಮವನ್ನು ನಡೆಯಲಿದೆ. ದಿ. 16ರಂದು ಮಧ್ಯಾಹ್ನ 03-00 ಗಂಟೆಗೆ ತಡವಲಗಾ ಗ್ರಾಮದ ಮೂಲ ದೇವಾಲಯದಿಂದ ಜೋಡಗುಡಿ ವರಿಗೆ ಉಜ್ಜೈನಿ ಹಾಗೂ ಕಾಶಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಕುಂಭ ಮೆರವಣಿಗೆ ನಡೆಯಲಿದೆ ನಂತರ ಪುರಾಣ ಮಹಾಮಂಗಲ ಹಾಗೂ ಧರ್ಮಸಭೆ ಹಾಗೂ ಗ್ರಾಮದ ನಿವೃತ್ತರಾದವರಿಗೆ ಸನ್ಮಾನ ಸಮಾರಂಭ ನಡೆಯಲಿದೆ.ದಿ. 17ರಂದು ಬೆಳಿಗ್ಗೆ 09-30 ಗಂಟೆಗೆ ಮಾಹಾಲಕ್ಷ್ಮೀ ದೇವಸ್ಥಾನದ ಕಳಸಾರೋಹಣ ಬೆಳಿಗ್ಗೆ 11-00 ಗಂಟೆಗೆ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಸಾಯಂಕಾಲ 05-00 ಘಂಟಗೆ  ನೂತರ ಶ್ರೀ ಮರುಳಸಿದ್ದೇಶ್ವರ ಮಹಾರಥೋತ್ಸವ ರಾತ್ರಿ 07-00 ಗಂಟೆಗೆ ಲಕ್ಷದೀಪೋತ್ಸವ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು. ಈ ಎಲ್ಲಾ ಕಾರ್ಯಕ್ರಮದಲ್ಲಿ ಮಠಾಧೀಶರು, ರಾಜಕೀಯ ಗಣ್ಯರು ಹಾಗೂ ಗಣ್ಯ ಮಾನ್ಯರು ಸೇರಿದಂತೆ ಅನೇಕರು ಉಪಸ್ಥಿತಿ ಇರುತ್ತಾರೆ. ಈ ಸುದ್ದಿಗೋಷ್ಠಿಯಲ್ಲಿ ಶಿವಾನಂದಯ್ಯ ಶಾಸ್ತ್ರಿಗಳು ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಬಾಬುಸಾಹುಕಾರ ಮೇತ್ರಿ, ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ಅಧ್ಯಕ್ಷರಾದ ಮಳಸಿದ್ದಪ್ಪ ಖಸ್ಕಿ, ಡಾ ರಮೇಶ ಪೂಜಾರಿ, ಬಸವರಾಜ ಚವಹಡಿಹಾಳ, ಅಣ್ಣಪ್ಪ ಜಾಲವಾದ,ಮಲ್ಕಪ್ಪ ತೆನ್ನಹಳ್ಳಿ ಕುತಬುದ್ದಿನ್ ಬಾಗವಾನ ಧರೇಪ್ಪ ಖಸ್ಕಿ ಜೇಟ್ಟಪ ಪಂತೋಜಿ ಮಲ್ಲಿಕಾರ್ಜುನ ನೇಂದ್ಯಾಳ ಶ್ರೀಶೈಲ ಕಟಾಯಿ ಕಲ್ಲಪ್ಪ ಬುಕ್ಕಾಣಿ ಬಸವರಾಜ ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.