ವಾಷಿಂಗ್ಟನ್, ಆ 20 ಸೆಪ್ಟಂಬರ್ 1 ರಿಂದ ಶ್ರೀಲಂಕಾ ವಿರುದ್ಧ ಆರಂಭವಾಗುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿರಿಯ ವೇಗಿ ಟಿಮ್ ಸೌಥೆ ಮುನ್ನಡೆಸಲಿದ್ದಾರೆ.
ಇದೀಗ ನಡೆಯುತ್ತಿರುವ ಟೆಸ್ಟ್ ಸರಣಿ ಬಳಿಕ ನಿಯಮಿತ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಮಾರಕ ವೇಗಿ ಟ್ರೆಂಟ್ ಬೌಲ್ಟ್ ಅವರು ವಿಶ್ರಾಂತಿ ಪಡೆಯಲು ತವರಿಗೆ ಮರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಲಿಯಮ್ಸನ್ ಅವರ ಅನುಪಸ್ಥಿತಿಯಲ್ಲಿ ಸೌಥೆ ಚುಟುಕು ತಂಡದ ನಾಯಕತ್ವ ವಹಿಸಲಿದ್ದಾರೆ. ಶ್ರೀಲಂಕಾ ಈಗಾಗಲೇ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
14 ಸದಸ್ಯರ ಟಿ-20 ತಂಡದಲ್ಲಿ ಇಶ್-ಸೋಧಿ, ಮಿಚೆಲ್ ಸ್ಯಾಂಟ್ನರ್ ಹಾಗೂ ಟಾಡ್ ಆ್ಯಸ್ಟ್ಲೆ ಸ್ಥಾನ ಪಡೆದಿದ್ದಾರೆ.
"ಇತ್ತೀಚೆಗೆ ಮುಕ್ತಾಯವಾದ ಐಸಿಸಿ ವಿಶ್ವಕಪ್ ಟೂನರ್ಿಯಲ್ಲಿ ನ್ಯೂಜಿಲೆಂಡ್ ತಂಡದ ಪರ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಬೌಲ್ಟ್ ಪ್ರಧಾನ ಪಾತ್ರವಹಿಸಿದ್ದರು. ಮುಂದಿನ ಸರಣಿಗಳಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ತೋರಲು ಅನುಕೂಲವಾಗಲು ಅವರಿಗೆ ಟಿ-20 ಸರಣಿಯಿಂದ ವಿಶ್ರಾಂತಿ ನೀಡಲಾಗುತ್ತಿದೆ ಎಂದು ನ್ಯೂಜಿಲೆಂಡ್ ಆಯ್ಕೆದಾರ ಗ್ಯಾವಿನ್ ಲಾರ್ಸನ್ ತಿಳಿಸಿದ್ದಾರೆ.
ನ್ಯೂಜಿಲೆಂಡ್(ಟಿ-20): ಟಿಮ್ ಸೌಥೆ(ನಾಯಕ), ಟಾಡ್ ಆ್ಯಸ್ಟ್ಲೆ, ಟಾಮ್ ಬ್ರುಸ್, ಕಾಲಿನ್ ಡಿ ಗ್ರಾಂಡ್ಹೋಮ್, ಲೂಕಿ ಫರ್ಗೊಸನ್, ಮಾರ್ಟಿನ್ ಗುಪ್ಟಿಲ್, ಸ್ಕಾಟ್ ಕಗ್ಲೇಜಿನ್, ಡ್ಯಾರ್ಲ್ಮಿಚೆಲ್, ಕಾಲಿನ್ ಮನ್ರೋ, ಸೆಥ್ ರೇನ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್(ವಿ.ಕೀ), ಇಶ್ ಸೋಧಿ, ರಾಸ್ ಟೇಲರ್.