ಸಿಂಹಾಸನರೂಢ ಬಸವೇಶ್ವರ ಮೂರ್ತಿಗೆ ಶ್ರೀಹರ್ಷಗೌಡ ಚಾಲನೆ

Sri Harshagowda launches the enthroned Basaveshwara statue

ವಿಜಯಪುರ 02: ಜಗಜ್ಯೋತಿ ಬಸವೇಶ್ವರ ಜಯಂತಿಯ ಹಿನ್ನೆಲೆ ವಿಜಯಪುರಕ್ಕೆ ಆಗಮಿಸಿದ ಸಿಂಹಾಸನರೂಢ ಬಸವೇಶ್ವರ ಮೂರ್ತಿಯ ಭವ್ಯ ಮೆರವಣಿಗೆಗೆ ಬಿಜೆಪಿಯ ಯುವ ಮುಖಂಡರಾದ ಹರ್ಷಗೌಡ ಪಾಟೀಲ ಅವರು  ಚಾಲನೆ ನೀಡಿದರು. 

ಈ ಭವ್ಯ ಮೆರವಣಿಗೆಯು ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾಗಿ ಜ್ಞಾನ ಯೋಗಾಶ್ರಮದವರೆಗೆ ಸಕಲ ವಾಧ್ಯ ವೃಂದಗಳೊಂದಿಗೆ, ಭವ್ಯ ಮೆರವಣಿಗೆಯು ಅದ್ಧೂರಿಯಾಗಿ ಸಂಚರಿಸಿತು.  

ಈ ಸಂದರ್ಭದಲ್ಲಿ ಆಶ್ರಮದ ಬಸವಲಿಂಗ ಮಹಾಸ್ವಾಮಿಗಳು, ವ್ಹಿ.ಸಿ. ನಾಗಠಾಣ, ಯೋಗೇಶ್ವರ ಮಾತಾಜಿ, ಅಪ್ಪು ಇಟ್ಟಂಗಿ, ಉಮೇಶ ವಂದಾಲ, ರವೀಂದ್ರ ಬಿಜ್ಜರಗಿ, ವಿರೇಶ ಕಸಬೇಗೌಡರ, ಬಸವರಾಜ ಸಜ್ಜನ, ಶಶಿಧರ ಲಿಂಗದಳ್ಳಿ, ಪ್ರಮೋದ ಹಳ್ಳಿ, ಬಿ.ಟಿ.ಇಸರಗೊಂಡ, ಬಸವರಾಜ ಮೋದಿ, ನಾಡಗೌಡ, ಭಾರತಿ ಭಯ್ಯಾರ, ಜಯಶ್ರೀ ಅಪಝಲಪೂರ, ವಿಷ್ಣು ಎಂ. ಜಾಧವ ಸೇರಿದಂತೆ ಹಲವಾರು ಯುವಕರು, ಮಹಿಳೆಯರು ಪಾದಯಾತ್ರೆಯಲ್ಲಿ ಭಾಗವಹಿಸಿ ಭಕ್ತಿಭಾವ ಮೆರೆದರು.