ಅಮ್ಮಿನಬಾವಿಯಲ್ಲಿ ಶ್ರೀಹನುಮ ಜಯಂತಿ
Sri Hanuman Jayanti at Amminabavi
ಲೋಕದರ್ಶನ ವರದಿ
ಧಾರವಾಡ 31 : ತಾಲೂಕಿನ ಅಮ್ಮಿನಬಾವಿ ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ಹಳೆಯ ಶ್ರೀವೀರಾಂಜನೇಯ ದೇವಸ್ಥಾನದಲ್ಲಿ ದವನದ ಹುಣ್ಣಿಮೆಯ ದಿನ ಗುರುವಾರ(ಏ.2) ಶ್ರೀಹನುಮ ಜಯಂತಿ ಮಹೋತ್ಸವ ಜರುಗಲಿದೆ. ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನ, ಓಂಕಾರ ಸೇವಾ ಸಂಘ ಹಾಗೂ ಶ್ರೀಮಾರುತಿ ಅಭಿವೃದ್ಧಿ ಸೇವಾ ಸಂಘ ಹಾಗೂ ಅಮ್ಮಿನಬಾವಿಯ ವಿವಿಧ ಯುವಕ ಸಂಘಗಳ ಜಂಟಿ ಆಶ್ರಯದಲ್ಲಿ ನಡೆಯುವ 2026ನೆಯ ವರ್ಷದ ಶ್ರೀಹನುಮ ಜಯಂತಿ ಮಹೋತ್ಸವದ ಅಂಗವಾಗಿ ಏ.1 ರಂದು (ಬುಧವಾರ) ಪ್ರಾತಃಕಾಲದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಜರುಗಲಿದೆ.
ವಿಶೇಷ ಮೆರವಣಿಗೆ : ಹುಣ್ಣಿಮೆಯ ದಿನ ಪ್ರಾತಃಕಾಲದಲ್ಲಿ ಶ್ರೀವೀರಾಂಜನೇಯ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಪೂಜೆ ನಡೆಯಲಿದ್ದು, ಬೆಳಿಗ್ಗೆ 7 ಗಂಟೆಗೆ ಶ್ರೀವೀರಾಂಜನೇಯನ ತೊಟ್ಟಿಲೋತ್ಸವ ಜರುಗಲಿದೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ಹಲವಾರು ವಾದ್ಯಮೇಳಗಳು ವಿವಿಧ ಕಲಾ ತಡಗಳು, ಮಹಿಳೆಯರ ಪೂರ್ಣಕುಂಭಗಳು, ಕೇಸರಿ ಧ್ವಜ ಸಮೇತ ಶ್ರೀವೀರಾಂಜನೇಯಸ್ವಾಮಿ ಭಾವಚಿತ್ರದ ವಿಶೇಷ ಮೆರವಣಿಗೆಯನ್ನು ಗ್ರಾಮದಲ್ಲಿ ಸಂಘಟಿಸಲಾಗಿದೆ. ಮೆರವಣಿಗೆಯ ನಂತರ ದಾಸೋಹ ಸೇವೆಯಲ್ಲಿ ಸಾಮೂಹಿಕ ಅನ್ನಸಂತರೆ್ಣ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 