ಶ್ರೀ ಚನ್ನವೀರ ಮಹಾಶಿವಯೋಗಿ ನಾಟಕ ಪ್ರದರ್ಶನ
Sri Channaveera Mahashivayogi Drama Performance
ಶ್ರೀ ಚನ್ನವೀರ ಮಹಾಶಿವಯೋಗಿ ನಾಟಕ ಪ್ರದರ್ಶನ
ಲೋಕದರ್ಶನ ವರದಿ
ಹೂವಿನ ಹಡಗಲಿ 12 : ನಾಟಕ ಕಲೆ ಉಳಿಸಿ ಬೆಳೆಸುವ ಕೆಲಸ ರಂಗಭಾರತಿ ನಿರಂತರವಾಗಿ ಮಾಡುತ್ತಿದೆ ಎಂದು ಮ ನಿ ಪ್ರ ಚನ್ನವೀರ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ರಂಗಭಾರತಿ ಸಹಯೋಗದಲ್ಲಿ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಭಕ್ತಿ ಪ್ರಧಾನ ನಾಟಕ "ಲಿಂಗನಾಯನಕಹಳ್ಳಿ ಶ್ರೀ ಚನ್ನವೀರ ಮಹಾಶಿವಯೋಗಿ"ಉದ್ಘಾಟನೆ ಕಾರ್ಯಕ್ರಮದದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಮಾಜಿ ಉಪ ಮುಖ್ಯಮಂತ್ರಿ ಎಂ ಪಿ ಪ್ರಕಾಶರ ರಂಗಭೂಮಿ ಕೆಲಸಗಳನ್ನು ಕಾರ್ಯಾಧ್ಯಕ್ಷೆ ಸುಮಾ ವಿಜಯ್ ಮುಂದುವರೆಸುತ್ತಿರುವುದು ಶ್ಲಾಘನೀಯ ಸೇವಾ ಕಾರ್ಯ ಎಂದು ಬಣ್ಣಿಸಿದರು.ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿ ತುಂಬು ಹೃದಯದಿಂದ ಹರಿಸಿದ ನಾಟಕ ಇಂದು ಇಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.ಹಿರಿಯರಾದ ಮಾತ್ರೊಶ್ರೀ ಮಲ್ಲಮ್ಮ ನಾಗಪ್ಪ ಕನವಳ್ಳಿ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.ಉತ್ತಂಗಿ ಸೋಮಶೇಖರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ನಾಟಕಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.ಚನ್ನಬಸವ ಮಹಾಸ್ವಾಮಿ ನೀಲಗುಂದ, ಮಹೇಶ್ವರ ಸ್ವಾಮೀಜಿ ನಂದಿಪುರ ಡಾ ಹಿರಿಶಾಂತವೀರ ಮಹಾಸ್ವಾಮಿಗಳು, ಅಭಿನವ ಚನ್ನಬಸವ ಮಹಾಸ್ವಾಮಿ,ಹಾವನೂರಿನ ಶಿವಕುಮಾರ ಸ್ವಾಮೀಜಿ, ಗುರುಶಾಂತವೀರ ಮಹಾಸ್ವಾಮಿ ಇಟಿಗಿ,ಚಿದಾನಂದ ಸ್ವಾಮೀಜಿ ಸಿಂಧೋಗಿ ಇತರರು ಸಾನಿಧ್ಯ ವಹಿಸಿದ್ದರು.ರಂಗಭಾರತಿ ಕಾರ್ಯಾಧ್ಯಕ್ಷೆ ಎಂ ಪಿ ಸುಮಾ ವಿಜಯ್, ಶಾಂತಮೂರ್ತಿ ಕುಲಕರ್ಣಿ ಇದ್ದರು.ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಎಸ್ ವಿ ಪಾಟೀಲ್ ಗುಂಡೂರು ರಚನೆಯ ಎಸ್ ರಮೇಶ ನೇತ್ರ ನಿರ್ದೇಶನದಲ್ಲಿ ಗಂಗಾವತಿಯ ಶ್ರೀ ಗುರು ದೊಡ್ಡಬಸವೇಶ್ವರ ಕಲಾತಂಡರ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.ದಾವಣಗೆರೆ ಗದಗ ಕೊಪ್ಪಳ ಹಾವೇರಿ ಬಳ್ಳಾರಿ ವಿಜಯನಗರ ಹಾಗೂ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ರಂಗಾಸಕ್ತರುನಾಟಕ ವೀಕ್ಷಿಸಿದರು.ಯುವರಾಜ್ ಗೌಡ ಸಂಗಡಿಗರು ಪ್ರಾರ್ಥಿಸಿದರು.ಉಪನ್ಯಾಸಕ ಶಂಕರ್ಬೆಟಗೇರಿ ನಿರ್ವಹಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 