ಶಾವಿಗೆ ಅಲಂಕಾರದಲ್ಲಿ ಭಕ್ತರಾಶೀರ್ವದಿಸಿದ ಶ್ರೀ ಬೆಂಚಿ ತುಂಗಾಜಲ ಚೌಡೇಶ್ವರಿ ದೇವಿ

ಶಾವಿಗೆ ಅಲಂಕಾರದಲ್ಲಿ ಭಕ್ತರಾಶೀರ್ವದಿಸಿದ ಶ್ರೀ ಬೆಂಚಿ  ತುಂಗಾಜಲ ಚೌಡೇಶ್ವರಿ ದೇವಿ Sri Benchi Tungajala Chowdeshwari Devi, adorned with saffron, blesses devotees

ರಾಣೇಬೆನ್ನೂರು 20:  ಇಲ್ಲಿನ ಮಾರುತಿ ನಗರದ ಇತಿಹಾಸ ಪ್ರಸಿದ್ಧ  ಬೆಂಚಿ  ತುಂಗಾಜಲ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ, ಗುರುವಾರ ಪರಾಭವ ನಾಮ ಸಂವತ್ಸರದ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಚೌಡೇಶ್ವರಿ ದೇವಿಗೆ ಶಾವಿಗೆ ಅಲಂಕಾರ ಮಾಡಿ ಬಹು ವಿಜ್ರಂಬಣೆಯಿಂದ  ಪೂಜೆ ಸಲ್ಲಿಸಿ, ಸಾವಿರಾರು ಭಕ್ತರು ಧನ್ಯತೆ ಪಡೆದರು.. ಶಾವಿಗೆ ಅಲಂಕಾರದಲ್ಲಿ ಶ್ರೀ  ದೇವಿಯು ಭಕ್ತರಿಗೆ ದರ್ಶನಾಶೀರ್ವಾದ  ಕರುಣಿಸಿದಳು. ಅಲಂಕಾರ ಪೂಜೆ ಸೇವೆಯಲ್ಲಿ ಗಮನ ಸೆಳೆದ ಪ್ರಧಾನ ಅರ್ಚಕ ಶ್ರೀ ಚಂದ್ರಶೇಖರಯ್ಯ ದಿಡ್ಡಿಮಠ.