ಆಟವನ್ನು ಹವ್ಯಾಸವಾಗಿ ತೆಗೆದುಕೊಳ್ಳಬೇಕು: ಡಾ. ಯಲಿಗಾರ
ಲೋಕದರ್ಶನ ವರದಿ
ವಿಜಯಪುರ 28: ಆಟವನ್ನು ಹವ್ಯಾಸವಾಗಿ ತೆಗೆದುಕೊಂಡು ಪ್ರತಿಯೊಂದು ಕ್ರೀಡೆಯಲ್ಲಿ ಭಾಗವಹಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಮತೋಲನವಾಗಿ ಕಾಯ್ದುಕೊಳ್ಳಬೇಕು ಎಂದು ಡಿವೈಎಸ್ಪಿ ಗೌರವ ಡಾಕ್ಟರೇಟ್ ಬಸವರಾಜ ಯಲಿಗಾರ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಲಯನ್ಸ್ ಪುಟಬಾಲ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ 17 ವರ್ಷದ ವಯೋಮಿತಿ ಬಾಲಕರ ಪುಟ್‌ಬಾಲ್ ಪಂದ್ಯಾವಳಿಯ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಆಟದಲ್ಲಿ ಸೋಲು ಗೆಲುವುದು ಮುಖ್ಯವಲ್ಲ. ಕ್ರೀಡೆಯಲ್ಲಿ ಉತ್ಸುಕರಾಗಿ ಭಾಗವಹಿಸುವುದು ಮುಖ್ಯವಾಗಿದೆ. ಕ್ರೀಡೆಗಳನ್ನು ಮನೋರಂಜನೆಗಾಗಿ ಆಡಬೇಕು. ನಮ್ಮ ಆರೋಗ್ಯಕ್ಕೆ ಕ್ರೀಡೆಗಳು ಉತ್ತಮವಾಗಿವೆ ಎಂದು ಎಲ್ಲರೂ ಕ್ರೀಡಾಭಿಮಾನವನ್ನು ಹೊಂದಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಫಯಾಜ ಕಲಾದಗಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂತೋಷ ರಾಠೋಡ, ದಾರಾಸಿಂಗ ಪವಾರ, ಐ.ಸಿ.ಪಠಾಣ, ಹಮೀದ ಜಾಗೀರದಾರ, ಗಣೇಶ ಭೋಸಲೆ, ಯಲ್ಲಪ್ಪ ಜಂಪ್ಲೆ, ಮೊಹಮ್ಮದ ಹಿಟ್ನಳ್ಳಿ ಸೇರಿದಂತೆ ಮುಂತಾದವರು ವೇದಿಕೆಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮನೋಜ ದೊಡಮನಿ, ಆಕಾಶ ಅಳಗುಡಕಿ, ಪ್ರಜ್ವಲ ಭೋಸ್ಲೆ ಇದ್ದರು.
ಕಾರ್ಯಕ್ರಮವನ್ನು ಎಂ.ಡಿ. ಹಾದಿಮನಿ ನಿರೂಪಿಸಿದರು, ವಿನಾಯಕ ಶಿಂಗೆ ವಂದಿಸಿದಿರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 