ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ: ರಫಿ ಅಹಮದ್ ಖವಾಸ್

ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ: ರಫಿ ಅಹಮದ್ ಖವಾಸ್ Sports need encouragement: Rafi Ahmed Khawas

ಹೂವಿನ ಹಡಗಲಿ 17:  ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ ಎಂದು ದೈಹಿಕ ಅಧೀಕ್ಷಕರಾದ ರಫಿ ಅಹಮದ್ ಖವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು. 

ಶಾಲಾ ಶಿಕ್ಷಣ ಇಲಾಖೆ ತಾಲೂಕು ದೈಹಿಕ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಸಕ್ತ ನೇ ಸಾಲಿನ 14 ಹಾಗೂ 17 ವರ್ಷದ ಒಳಗಿನ ತಾಲೂಕು ಮಟ್ಟದ ಬಾಲಕ ಮತ್ತು ಬಾಲಕಿಯರ ನೇರ ಚದುರಂಗ ಹಾಗೂ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಬಳ್ಳಾರಿ, ಕಾರ್ಯದರ್ಶಿ ಜೆ ಪ್ರಸನ್ನ ಕುಮಾರ್, ದೈಹಿಕ ಶಿಕ್ಷಕರಾದ ನಾಗರಾಜ್,ಮಲ್ಲಿಕಾರ್ಜುನ, ಪ್ರಕಾಶ್ ನಾಯಕ್, ಮಹಮದ್ ರಫಿ, ಸಿದ್ದಪ್ಪ, ಕ್ರೀಡಾ ದಫೇದಾರ್ ಬಾಷಾ ಇದ್ದರು. 

14 ವರ್ಷದ  ಒಳಗಿನ ಬಾಲಕರ ವಿಭಾಗ ಪ್ರಥಮ: ಜೇಸಿಸ್ ಹಡಗಲಿ ದ್ವಿತೀಯ: ಎಂ ಎಂ ಪಾಟೀಲ್ ಹಡಗಲಿ  

ಬಾಲಕಿಯರ ವಿಭಾಗ ಪ್ರಥಮ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ ಎನ್ ಪ್ಲಾಟ್ ದ್ವಿತೀಯ: ಸೇಂಟ್ ಥಾಮಸ್ ಹೊಳಲು 17 ವರ್ಷದ ಕೆಳಗೆ ಬಾಲಕಿಯರ ವಿಭಾಗ ಪ್ರಥಮ: ಎಂ ಎಂ ಪಾಟೀಲ್ ಹಡಗಲಿ ದ್ವಿತೀಯ: ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹೊಳಲು ಬಾಲಕರ ವಿಭಾಗ ಪ್ರಥಮ: ವಿದ್ಯಾಂಜಲಿ ಹಡಗಲಿ ದ್ವಿತೀಯ: ಎಂ ಎಂ ಪಾಟೀಲ್ ಹಡಗಲಿಗ್ರಾಮೀಣ ಪ್ರದೇಶ ಸೇರಿದಂತೆ ಒಟ್ಟು 35 ಕ್ಕೂ ಹೆಚ್ಚು ಪ್ರಾಥಮಿಕ ಪ್ರೌಢಶಾಲೆಗಳ ಮಕ್ಕಳು ಚದುರಂಗ ಹಾಗೂ ಶಟಲ್ ಬ್ಯಾಡ್ಮಿಂಟನ್ ನಲ್ಲಿ ಭಾಗವಹಿಸಿದ್ದರು.