ಕ್ರೀಡಾ ವಿಭಾಗದಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
Sports department felicitates meritorious students
ಕ್ರೀಡಾ ವಿಭಾಗದಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ಕಲಾದಗಿ 18: ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಾವಿದ್ಯಾಲಯದಲ್ಲಿ ಕ್ರೀಡಾ ವಿಭಾಗದಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಂತಿಮ ವರ್ಷದ ಬಿ. ಎ. ವಿದ್ಯಾರ್ಥಿನಿಯಾದ ಕು. ಸಂಗೀತ ಕುಳಗೇರಿ, 2023-24, 2024-25, 2025-26ನೇ ಸಾಲಿನಲ್ಲಿ ಮಲ್ಲಗಂಬದ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯದ ಬ್ಲೂ ಆಗಿ, 2024-25ರಲ್ಲಿ ಖೇಲೋ ಇಂಡಿಯಾಕ್ಕೆ ಮಲ್ಲಗಂಬ ಆಟದಲ್ಲಿ ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾಗಿ, ಆಟ ಆಡಿರುತ್ತಾಳೆ. ಅಲ್ಲದೆ ಪ್ರಥಮ ವರ್ಷದ ಬಿ. ಎ. ವಿದ್ಯಾರ್ಥಿಯಾದ ಸಂಗಮೇಶ ಯಲಿಗಾರನು 2025-26 ನೇ ಸಾಲಿನಲ್ಲಿ ಕಬಡ್ಡಿ ತಂಡಕ್ಕೆ ವಿಶ್ವವಿದ್ಯಾಲಯದ ಬ್ಲೂ ಆಗಿ ದಕ್ಷಿಣ ಭಾರತದ ಅಂತರ್ ವಿಶ್ವವಿದ್ಯಾಲಯಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿ ಆಟ ಆಡಿದ್ದಾನೆ. ಈ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಕುರಿತು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಕೆ. ಎಂ. ಸಾರವಾನ್ ಅವರು ಮಾತನಾಡುತ್ತಾ, ಸಾಧನೆಗೆ ಅವಕಾಶಗಳು ನೂರಾರಿವೆ. ಶಿಸ್ತು ಮತ್ತು ಆಸಕ್ತಿಯ ಮೂಲಕ ಸಂಪಾದಿಸಿಕೊಳ್ಳಬೇಕು. ಜೊತೆಗೆ ಸೂಕ್ತ ಸಮಯದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಈ ಕಾರ್ಯಕ್ರಮದ ಸನ್ಮಾನಿತರು ವಿಶ್ವವಿದ್ಯಾಲಯದ ಬ್ಲೂ ಆಗಿ ಸಾಧಿಸಿರುವ ಸಾಧನೆ ಶ್ಲಾಘನೀಯವಾದದ್ದು ಎಂದಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಬಿ. ಮಹಾಂತೇಶ ಅವರು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುವುದು ಸಂತೋಷದಾಯಕ. ಹೀಗೆ ಇತರ ವಿದ್ಯಾರ್ಥಿಗಳು ಕೂಡ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಸರೋಜಿನಿ ಹೊಸಕೇರಿ, ಕು. ಯಂಕಮ್ಮ, ಡಾ. ಎಲ್ಲಪ್ಪ. ಜಿ, ಶ್ರೀದೇವಿ ಮುಂಡಗನೂರು, ಡಾ. ಪುಂಡಲೀಕ ಹುನ್ನಳ್ಳಿ, ಡಾ. ಲೋಕಣ್ಣ ಭಜಂತ್ರಿ, ಸಿ. ವೈ. ಮೆಣಸಿನಕಾಯಿ, ರಂಗಪ್ಪ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 