ಲೋಕದರ್ಶನವರದಿ
ಹಾವೇರಿ 08: ಬಳಲಿ ಬೆಂದಿರುವ ಮಾನವ ಜೀವನದ ನೆಮ್ಮದಿಗೆ ಆಧ್ಯಾತ್ಮಿಕತೆಯಿಂದ ಮಾತ್ರ ನೆಮ್ಮದಿ ಮೂಡಲು ಸಾಧ್ಯ. ಸಕಲ ಜೀವಾತ್ಮರಿಗೆ ಧರ್ಮದ ನೆರಳು ಅವಶ್ಯವಾಗಿ ಬೇಕಾಗಿದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಡಾ|| ವೀರಸೋಮೇಶ್ವರ ಭಗವತ್ಪಾದರು ಅಭಿಪ್ರಾಯಪಟ್ಟರು.
ಕುಣಿಮೆಳ್ಳಿಹಳ್ಳಿಯಲ್ಲಿ ಜರುಗಿದ ನಂದೀಶ್ವರ ನೂತನ ದೇವಸ್ಥಾನ, ಗೋಪುರ ಉದ್ಘಾಟನೆ, ಮೂತರ್ಿ ಪ್ರತಿಷ್ಠಾಪನೆ ಹಾಗೂ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಧರ್ಮ ಸಮಾರಂಭದ ಆಶೀರ್ವಚನ ನೀಡುತ್ತಿದ್ದರು.
ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು, ಬಿಸಿಲ ಬೇಗೆಯಲ್ಲಿದ್ದವರಿಗೆ ನೆರಳಿನ ಅವಶ್ಯಕತೆಯಿರುವಂತೆ ಬದುಕಿನ ಬೆಂಗಾಡಿನಲ್ಲಿ ಬಳಲುತ್ತಿರುವ ಮಾನವ ಜೀವನಕ್ಕೆ ಧರ್ಮ ಮತ್ತು ಆಧ್ಯಾತ್ಮದ ತಂಗಾಳಿ ಮಾತ್ರ ದಣಿವು ನೀಗಬಲ್ಲದು. ಮಾನವ ಜೀವನಕ್ಕೆ ಉತ್ತಮ ಸಂಸ್ಕಾರ ದೊರೆತರ ಉಜ್ವಲ ಬದುಕಿ ನಿಮರ್ಾಣಗೊಳ್ಳುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಅಹಿಂಸಾದಿ ಧ್ಯಾನ ಪರ್ಯಂತರ ದಶಧರ್ಮ ಸೂತ್ರಗಳನ್ನು ಬೋಧಿಸಿದ ಜಗದ್ಗುರು ರೇಣುಕ ಭಗವತ್ಪಾದರು ಎಲ್ಲಾ ಕಾಲಕ್ಕೂ ಅನ್ವಯಿಸುವ ಸಿದ್ಧಾಂತವನ್ನು ಬೋಧನೆಗೊಳಿಸಿ ಸಾಧನೆಯ ಮೌಲ್ಯಗಳನ್ನು ಬಿತ್ತಿ-ಉತ್ತಿ-ಬೆಳೆ ಬೆಳೆದಿದ್ದನ್ನು ಯಾರೂ ಮರೆಯುವಂತಿಲ್ಲ. ಸಮಗ್ರ ವಿಚಾರಧಾರೆಗಳನ್ನು ಹೊತ್ತಿರುವ ವೀರಶೈವ ಧರ್ಮ ಮಾನವೀಯ ಗುಣಾಂಶಗಳನ್ನು ಸಾರಿದೆ.
ಮನುಷ್ಯನಿಗೆ ವಿವೇಕ, ತ್ಯಾಗ, ಪ್ರಯತ್ನ, ಸದ್ಗುಣ ಮತ್ತು ಆಚರಣೆ ಆತನ ವಿಕಾಸಕ್ಕೆ ಕಾರಣವಾಗುತ್ತದೆ. ವಾದ-ವಿವಾದಗಳು ಶಾಂತಿಯನ್ನು ಕೊಡಲಾರವು. ಸಂಪತ್ತು ನೆಮ್ಮದಿಯನ್ನು ತುಂಬಿ ತರಲಾರದು. ಪರಸ್ಪರ ತಿಳುವಳಿಕೆಯಿಂದ ಅಸಾಧ್ಯವಾದದ್ದನ್ನು ಸಾಧ್ಯ ಮಾಡಿಕೊಳ್ಳಲು ಸಹಕಾರಿ.
ಕೊಳೆಯಾದ ಕನ್ನಡಿಯಲ್ಲಿ ಮುಖ ಕಾಣಿಸುವುದಿಲ್ಲ. ಸೂರ್ಯರಶ್ಮಿ ಪ್ರತಿಬಿಂಬಿಸದು. ಇದರಂತೆ ಯಾರ ಹೃದಯ ಕಲ್ಮಶದಿಂದ ಕೂಡಿದೆಯೋ, ಯಾರ ಮನಸ್ಸು ಚಂಚಲ ಪ್ರವೃತ್ತಿಯಲ್ಲಿರುವುದೋ ಅಂತಹವರಿಗೆ ಭಗವಂತನ ಮಹಿಮೆ ತಿಳಿಯದು, ಆತ್ಮವಿಕಾಸವಾಗದು ಎಂದರು.
ಕೂಡಲ ಕ್ಷೇತ್ರದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮಿಗಳು, ಬಂಕಾಪುರ ಅರಳೆಲೆ ಹಿರೇಮಠ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಉಪದೇಶ ನೀಡಿದರು.
ಹೋತನಹಳ್ಳಿ ಸಿಂಧಗಿಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು, ಸೇವಾ ದಾನಿಗಳು ಹಾಗೂ ಗ್ರಾಮದ ಸಮಸ್ತ ಸದ್ಭಕ್ತರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ 6 ಜೊತೆಗೆ ನವವಧುವರರು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಆರಂಭದಲ್ಲಿ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಸೌಭಾಗ್ಯ ಸಂಗಡಿಗರಿಂದ ಪ್ರಾರ್ಥನೆ ಜರುಗಿದವು. ನಿವೃತ್ತ ಶಿಕ್ಷಕ ಫಕ್ಕೀರಯ್ಯ ಹಿರೇಮಠ ಸ್ವಾಗತಿಸಿದರು. ಪ್ರೊ. ಗುರುಪಾದಯ್ಯ ವೀ. ಸಾಲಿಮಠ ನಿರೂಪಿಸಿದರು.