ಆಧ್ಯಾತ್ಮದ ಜ್ಞಾನವು ಜೀವನೋತ್ಸಾಹಕ್ಕೆ ಸ್ಪೂರ್ತಿ: ಜಯ ಶ್ರೀಗಳು
Spiritual knowledge is the inspiration for enthusiasm for life: Jaya Srigala
ಆಧ್ಯಾತ್ಮದ ಜ್ಞಾನವು ಜೀವನೋತ್ಸಾಹಕ್ಕೆ ಸ್ಪೂರ್ತಿ: ಜಯ ಶ್ರೀಗಳು
ಗದಗ-21: ಶ್ರಾವಣ ಮಾಸದ ಅಂಗವಾಗಿ, ಶ್ರಾವಣ ಮಾಸದಲ್ಲಿ ಒಂದು ತಿಂಗಳು ನಡೆಯುವ ಜ್ಞಾನ ದಾಸೋಹದಲ್ಲಿ ಭಾಗವಹಿಸಿ ನಮ್ಮ ಮನಸ್ಸಿನಲ್ಲಿರುವ ಅಜ್ಞಾನವನ್ನು ಕಳೆದುಕೊಳ್ಳಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರುಗಳಾದ ಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿದರು.
ಪ್ರತಿಯೊಬ್ಬ ಧರ್ಮದವರು ತಮ್ಮ ತಮ್ಮ ಆಚಾರ ವಿಚಾರಗಳ ಪ್ರಕಾರ ತಮ್ಮ ಧರ್ಮವನ್ನು ಪಾಲಿಸುವರು. ಲಿಂಗಾಯತರಿಗೆ ಶ್ರಾವಣ ಮಾಸ ಶ್ರೇಷ್ಠವಾದ ಮಾಸವಾಗಿದೆ. ಶ್ರಾವಣ ಮಾಸದಲ್ಲಿ ಮನೆಯಲ್ಲಿಯೇ ಕುಳಿತು ಸಮಯ ಹಾಳು ಮಾಡದೇ ಮಠ ಮಂದಿರದಲ್ಲಿ ನಡೆಯುತ್ತಿರುವ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಞಾನ ದಾಸೋಹವನ್ನು ಪಡೆದುಕೊಳ್ಳಬೇಕು.
ಜ್ಞಾನ ದಾಸೋಹದಲ್ಲಿ ಕೇಳಿದಂತೆ ಅದನ್ನು ಮನಸ್ಸಿನಲ್ಲಿ ಸಂಕಲ್ಪ ಮಾಡಿ ಅದರಂತೆ ನಡೆದುಕೊಳ್ಳಬೇಕು. ಒಳ್ಳೆಯದನ್ನು ಕೇಳಬೇಕು, ಒಳ್ಳೆಯದನ್ನು ಮಾತನಾಡಬೇಕು. ಪುರಾತನ ಶರಣರ ಜೀವನ ಚರಿತ್ರೆಯನ್ನು ಕೇಳಿ ಅದರಂತೆ ನಡೆದು ನಮ್ಮ ಜೀವನವನ್ನು ಸಾರ್ಥಕಪಡಿಸಕೊಳ್ಳಬೇಕು.
ಬಸವಾದಿ ಶರಣರ ಆಶೆ ಇದ್ದಂತೆ ಸತ್ಯವನ್ನೇ ನುಡಿಯಿರಿ. ಮತ್ತೊಬ್ಬರಿಗೆ ಕೇಡನ್ನು ಬಯಸಬೇಡಿ. ಒಳ್ಳೆಯದನ್ನು ಮಾಡಲುಆಗಿದ್ದರೆ. ಕೆಟ್ಟದ್ದನ್ನು ವಿಚಾರ ಸಹೀತ ಮಾಡಬಾರದು. ನಮ್ಮ ದುಡಿಮೆಯಲ್ಲಿ ಸ್ವಲ್ಪವನ್ನಾದರೂ ಸತ್ಕಾರ್ಯಕ್ಕೆ ಸಲ್ಲಿಸಬೇಕು. ಹೃದಯದಲ್ಲಿ ಭಕ್ತಿ ಬೇಕು. ನಮಸ್ಸು ಸಂತೋಷ ಗೊಂಡರೆ ರೋಗ ರುಜಿನಗಳು ದೂರವಾಗುವವು. ಪ್ರತಿ ದಿಸವ ನಮ್ಮ ಮೋಬೈಲನ್ನು ಹೇಗೆ ಚಾರ್ಜ ಮಾಡಿಕೊಳ್ಳುತ್ತೇವೆಯೋ ಅದೇ ರೀತಿ ಶ್ರಾವಣ ಮಾಸದ ಒಂದು ತಿಂಗಳಲ್ಲಿ ಜ್ಞಾನ ದಾಸೋಹವನ್ನು ಪಡೆದುಕೊಂಡು ಅದರಂತೆ ನಡೆಯಬೇಕೆಂದು ಮಾತನಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಸದಸ್ಯರಾದ ಕೊಟ್ರ್ಪ ಕಮತರ, ಎಂ.ಎಂ. ಹಿರೇಮಠ ವಕೀಲರು, ಶಿವಣ್ಣ ಕತ್ತಿ, ಮುರಿಗೆಪ್ಪ ನಾಲವಾಡ, ಹಿರಿಯರಾದ ವಿರುಪಾಕ್ಷಪ್ಪ ಅಕ್ಕಿ, ಬಸವರಾಜಜಂತ್ಲಿ, ಬಸವರಾಜ ಮಡಿವಾಳರ, ಪುರಾಣ ಪ್ರವಚನ ಸಮಿತಿ ಅಧ್ಯಕ್ಷರಾದ ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಗಂಗಾಧರ ಮೇಲಗಿರಿ, ಗಂಗಾಧರ ನಂದಿ ಕೋಲಮಠ,
ಶ್ರಿಶೈಲಪ್ಪ ಪಟ್ಟಣಶೆಟ್ಟಿ, ಸುರೇಶ ಮಾಳವಾಡ, ಪ್ರಭು ಶೆಟ್ಟರ, ಸುಭಾಸ ಹವಳೆ, ವಿರುಪಾಕ್ಷಪ್ಪಅಂಗಡಿ, ಮಲ್ಲಿಕಾರ್ಜುನ ಹಿರೇಮಠ, ಶಂಕರ ನೀರಲಕೇರಿ, ಸುರೇಶ ನಿಲುಗಲ್ಲ, ಅಶೋಕ ತಮೃಳ್ಳಿ, ಬಸವರಾಜ ಮೊರಬದ,
ಪಂಚಾಕ್ಷರಅಂಗಡಿ, ನವೀನ ನಾಲ್ವಾಡ, ಬಸವರಾಜಜ್ಞಾಂಪೂರ, ಪ್ರಕಾಶಜಂತ್ಲಿ, ಸತ್ಸಂಗದ ಸದಸ್ಯರಾದ ಸುನಂದಾ ಜೋಬಾಳೆ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಜಯಶ್ರೀ ನಿಲೂಗಲ್, ನಗಪ್ಪಕಟಿ ಗೆರೆ. ಕಸ್ತೂರಕ್ಕ ಮಾನ್ವಿ, ಶರಣಮ್ಮ ಶಿರೂರ, ಸುಶೀಲಾ ನಿಲೂಗಲ್ಲ, ನೀಲಕ್ಕ ಕಗನಳ್ಳಿ, ಅನಸಕ್ಕ ಮೇಲಗಿರಿ, ಶೈಲಾ ಮಾನ್ವಿ ಮುತಾದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 