ಜಿನರಾಳ ಗ್ರಾಮದಲ್ಲಿ ಆಧ್ಯಾತ್ಮಿಕ ಪ್ರವಚನ

ಜಿನರಾಳ ಗ್ರಾಮದಲ್ಲಿ ಆಧ್ಯಾತ್ಮಿಕ ಪ್ರವಚನ  Spiritual discourse in Jinara village

ಲೋಕದರ್ಶನ ವರದಿ 

ಯಮಕನಮರಡಿ 16 : ಸಮೀಪದ ಜೀನರಾಳ ಗ್ರಾಮದಲ್ಲಿ ಪ್ರತಿವರ್ಷದ ಪದ್ಧತಿಯಂತೆ ದಿನಾಂಕ 15 ರಂದು ವಿಠ್ಠಲ ಮಂದಿರದ ಸಪ್ತಾಹ ಕಾರ್ಯಕ್ರಮಕ್ಕೆ ಹತ್ತರಗಿ ಹರಿ ಮಂದಿರದ ಪೂಜ್ಯರಾದ ಆನಂದ ಮಹಾರಾಜ್ ಗೋಸಾವಿ ಅವರು ವೀಣಾ ಪೂಜೆ ನೆರವೇರಿಸಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಶ್ರೀ ಕೃಷ್ಣ ಸುಧಾಮರ ಅನನ್ಯ ಭಕ್ತಿ ಆತ್ಮೀಯತೆ ಕುರಿತು ಮಾರ್ಮಿಕವಾಗಿ ಪ್ರವಚನ ಹೇಳಿದರು ನಂತರ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಆಶೀರ್ವದಿಸಿದರು.