ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
Speeding up the road widening in Nidasaosi: The operation to clear the Muslim cemetery premises has
ಸಂಕೇಶ್ವರ : ಹಲವಾರು ತಿಂಗಳಿನಿಂದ ನೆನಗುದಿಗೆ ಬಿದ್ದಿದ್ದ ಸಂಕೇಶ್ವರ-ನಿಡಸೋಸಿ ರಸ್ತೆಯ ಅಗಲಿಕರಣ ಕಾಮಗಾರಿಗೆ ವೇಗ ದೊರೆತಿದ್ದು, ಮುಸ್ಲಿಂ ಸಮುದಾಯದ ಸ್ಮಶಾನದಲ್ಲಿನ ಸಮಾಧಿಗಳ ಸ್ಥಳಾಂತರ ಬಳಿಕ ಈಗ ಅವರಣ, ಮರಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಈ ಕಾರ್ಯಕ್ಕೆ ಮುಸ್ಲಿಂ ಸಮುದಾಯದ ಮುಖಂಡರು ಸಾಥ ನೀಡುತ್ತಿದ್ದಾರೆ.
ಸಂಕೇಶ್ವರ ಪಟ್ಟಣದ ರಾಯಲ್ ಕ್ವಾಲೊನಿಯಿಂದ ಸಂಕೇಶ್ವರ ಬಸ್ ನಿಲ್ದಾಣ ವರೆಗಿನ ರಸ್ತೆಯ ಅಗಲಿಕರಣ ಕಾರ್ಯ ವನ್ನು ಲೋಕೋಪಯೋಗಿ ಇಲಾಖೆಯ ವತಿಯಿಂದ ಮಾಡಲಾಗುತ್ತಿತ್ತು. ಆದರೆ ಈ ಅಗಲಿಕರಣ ಕಾರ್ಯಕ್ಕೆ ಬಸ್ ನಿಲ್ದಾಣ ಬಳಿ ಇರುವ ಮುಸ್ಲಿಂ ಸಮುದಾಯದ ಸ್ಮಶಾನ ಭೂಮಿಯಲ್ಲಿದ್ದ ಸಮಾಧಿಗಳು ಸ್ಥಳಾಂತರ ವಿಷಯ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿತು.
ಇದರಿಂದ ಕೆಲವು ತಿಂಗಳುಗಳ ಕಾಲ ಅಗಲಿಕರಣ ಕಾರ್ಯಾಚರಣೆ ವಿಳಂಬ ವಾಗಿತ್ತು. ಇದರ ವಿಚಯ ಅರಿತ ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ ಅವರು ಎಸ್ ಪಿ ರಾಮರಾಜನ್ ಅವರ ಜೊತೆಗೆ ಸಂಕೇಶ್ವರದ ಸ್ಮಶಾನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.
ಬಳಿಕ ಇಲ್ಲಿ ಅಗಲಿಕರಣ ವೇಳೆ ಹಲಾವರು ಮುಸ್ಲಿಂ ಸಮುದಾಯದವರ ಸಮಾಧಿಗಳು ಇದರಲ್ಲಿ ಬರುತ್ತಿದ್ದವು. ಅದನ್ನು ಅರಿತ ಜಿಲ್ಲಾಧಿಕಾರಿ ರೋಶನ್ ಅವರು, ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಹಾಗೂ ಅಲ್ಲಿ ಇರುವ ಸಮಾಧಿಗಳ ತೆರವಿಗೆ ಸಂಬಂಧಪಟ್ಟ ಕುಟುಂಬದವರ ಸಮಾಧಿಗಳ ಸ್ಥಳಾಂತರಕ್ಕೆ ಮನವೊಲಿಸಲು ಸೂಚಿಸಿದ್ದರು.
ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ರಸ್ತೆ ಅಗಲಿಕರಣಕ್ಕೆ ಸಾಥ್ ನೀಡುವ ಮೂಲಕ ತಮ್ಮ ಹಿರಿಯರ ಸಮಾಧಿಗಳನ್ನು ಸ್ಥಳಾಂತರ ಮಾಡಿಕೊಂಡರು. ಬಳಿಕ ರಸ್ತೆಗಳಲ್ಲಿ ಬರುವ ವಿದ್ಯುತ್ ಕಂಬಗಳನ್ನು ಈ ಹಿಂದೆ ಸ್ಮಶಾನದಲ್ಲಿ ಒಳಗೆ ತೆಗೆದು ಹಾಕಲಾಯಿತು.
ಈಗ ಸದ್ಯ ಸ್ಮಶಾನದ ಆವರಣ ಗೋಡೆ ಜೊತೆಗೆ ಅದರ ಬಳಿ ಇದ್ದ ಗಿಡಮರಗಳನ್ನು ತೆರವು ಮಾಡು ಕಾರ್ಯ ಪ್ರಾರಂಭಗೊಂಡಿದ್ದು, ಆವರಣ ತೆರವು ಕಾರ್ಯಕ್ಕೆ ಮುಸ್ಲಿಂ ಸಮುದಾಯದ ಮುಖಂಡರು ಮುಂದೆ ನಿಂತು ಸಾಥ್ ನೀಡುತ್ತಿದ್ದಾರೆ.
ಆದರೆ ಅಗಲಿಕರಣ ಹಾಗೂ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಗಳ ಮಾಡಿದ ಈ ಕಾರ್ಯಕ್ಕೆ ಎಲ್ಲ ಸಮುದಾಯದವರು ಮೆಚ್ವುಗೆ ವ್ಯಕ್ತಪಡಿಸುತ್ತಿದ್ದಾರೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 