ಅಪಘಾತ ವಿಷಯಗಳ ಸಮಗ್ರ ನಿರ್ವಹಣೆ ಹಾಗೂ ತಂತ್ರಾಂಶದಲ್ಲಿ ಅಪಘಾತಗಳನ್ನು ದಾಖಲಿಸುವ ವಿಶೇಷ ತರಬೇತಿ ಕಾರ್ಯಾಗಾರ

ಅಪಘಾತ ವಿಷಯಗಳ ಸಮಗ್ರ ನಿರ್ವಹಣೆ ಹಾಗೂ ತಂತ್ರಾಂಶದಲ್ಲಿ ಅಪಘಾತಗಳನ್ನು ದಾಖಲಿಸುವ ವಿಶೇಷ  ತರಬೇತಿ ಕಾರ್ಯಾಗಾರ  Special training workshop on comprehensive management of accident matters and recording accidents in

          ಹುಬ್ಬಳ್ಳಿ 21: ಅಪಘಾತ ವಿಷಯಗಳ ಸಮಗ್ರ ನಿರ್ವಹಣೆ ಹಾಗೂ ತಂತ್ರಾಂಶದಲ್ಲಿ ಅಪಘಾತಗಳನ್ನು ದಾಖಲಿಸುವ ವಿಶೇಷ ತರಬೇತಿ ಕಾರ್ಯಾಗಾರವನ್ನು ದಿನಾಂಕ:20-11-2025 ರಂದು ಜಿಲ್ಲಾ ಪಂಚಾಯತ ಸಭಾಂಗಣ ಧಾರವಾಡದಲ್ಲಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು.  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ.ಎಂ. ಭಾ.ಆ.ಸೇ ರವರು ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ದಿನನಿತ್ಯ ಘಟಕ ಮಟ್ಟದಲ್ಲಿ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ತಿಳುವಳಿಕೆ ನೀಡುವಂತೆ ತಿಳಿಸಿದರು. ಅಪಘಾತಗಳಿಗೆ ಸಂಬಂಧಿಸದಂತೆ ದಾಖಲಾತಿಗಳ ಸಂಗ್ರಹಣೆ ಹಾಗೂ ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಲು ತ್ವರಿತಗತಿಯಲ್ಲಿ ಕ್ರಮವಹಿಸಬೇಕೆಂದು ಸೂಚಿಸಿದರು. ಅಪಘಾತಗಳನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಒಟ್ಟಾಗಿ ಕಾರ್ಯ ಪ್ರವೃತ್ತರಾಗಬೇಕೆಂದು ಸೂಚಿಸಿದರು. ಇದರಿಂದಾಗಿ ಸಂಸ್ಥೆಯ ಖರ್ಚು ವೆಚ್ಚವನ್ನು ನಿಯಂತ್ರಿಸಬಹುದು ಎಂದು ಹೇಳಿದರು  

                ಮುಖ್ಯ ಸಂಚಾರ ವ್ಯವಸ್ಥಾಪಕರಾದ ವಿವೇಕಾನಂದ ವಿಶ್ವಜ್ಞ ರವರು ಕಾರ್ಯಾಗಾರದ ಕುರಿತು ಅಪಘಾತಗಳ ಅಂಕಿ ಸಂಖ್ಯೆ ವಿವವರಗಳ ಮೂಲಕ ತಿಳಿಸಿದರು. ಅಪಘಾತಗಳನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಾಸ್ತಾವಿಕವಾಗಿ ತಿಳಿಸಿದರು.   ಉಪಮುಖ್ಯ ಯಾಂತ್ರಿಕ ಅಭಿಯಂತರರಾದ ಶಶಿಧರ ಮರಿದೇವರಮಠ ರವರು ಅಪಘಾತ ವಿಷಯಗಳ ಸಮಗ್ರ ನಿರ್ವಹಣೆ ಹಾಗೂ ತಂತ್ರಾಂಶದಲ್ಲಿ ಅಪಘಾತಗಳನ್ನು ದಾಖಲಿಸುವ ವಿಶೇಷ ತರಬೇತಿ ಕಾರ್ಯಾಗಾರದ ಸಂಪೂರ್ಣ ಮಾಹಿತಿ ನೀಡಿದರು.  

                ಇದೇ ಸಂದರ್ಭದಲ್ಲಿ ಅಕ್ಟೋಬರ್‌-2025ರ ಮಾಹೆಯ ಸಾರಿಗೆ ಆದಾಯ ಗುರಿ ಸಾಧಿಸಿದ ಗದಗ, ಹಾವೇರಿ, ಬಾಗಲಕೋಟೆ, ಚಿಕ್ಕೋಡಿ, ಧಾರವಾಡ ವಿಭಾಗಕ್ಕೆ ್ಘ ಶಕ್ತಿಯೇತರ ಆದಾಯದ ಗುರಿ ಸಾದಿಸಿದ ಬಾಗಲಕೋಟೆ, ಗದಗ, ವಿಭಾಗಕ್ಕೆ ಹಾಗೂ ಗಕಋ ವಹಿವಾಟು ಮೂಲಕ ಟಿಕೆಟ್ ವಿತರಣೆಯ ತ್ರೈಮಾಸಿಕ ಅಭಿಯಾನವನ್ನು ಕಠಜಠಿಜ ರವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು, ಸೆಪ್ಟೆಂಬರ್‌-2025ರ ಮಾಹೆಯಲ್ಲಿ ಅತಿ ಹೆಚ್ಚು ಗಕಋ ವಹಿವಾಟುಗಳನ್ನು ಮಾಡಿದ ಚಿಕ್ಕೋಡಿ ವಿಭಾಗಗಕ್ಕೆ ಪ್ರಥಮ ಸ್ಥಾನ, 100 ಕ್ಕಿಂತ ಹೆಚ್ಚಿನ ಅನುಸೂಚಿಗಳನ್ನು ಹೊಂದಿರುವ ಘಟಕಗಳ ವರ್ಗದಲ್ಲಿ ಪ್ರಥಮ ಸ್ಥಾನ ಬೆಳಗಾವಿ 1ನೇ ಘಟಕ, ದ್ವೀತಿಯ ಸ್ಥಾನ ಹುಬ್ಬಳ್ಳಿ (ಗ್ರಾ) 2ನೇ ಘಟಕ ಮತ್ತು 100 ಕ್ಕಿಂತ ಕಡಿಮೆ ಅನುಸೂಚಿಗಳನ್ನು ಹೊಂದಿರುವ ಘಟಕಗಳ ವರ್ಗದಲ್ಲಿ ಜಮಖಂಡಿ ಘಟಕವು ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರವರು ಪ್ರಶಂಸನಾ ಪತ್ರಗಳನ್ನು ನೀಡಿ ಅಭಿನಂದಿಸಿದರು.  

          ಗಕಋ ಹೆಚ್ಚಿನ ವಹಿವಾಟು ಮಾಡಿ ಸಾಧನೆ ಮಾಡಿದ ನಿರ್ವಾಹಕರುಗಳು.    

ಮೊದಲನೆ ಸ್ಥಾನ ಪಡೆದ ನಿರ್ವಾಹಕರುಗಳು (ಪ್ರತಿ ವಿಭಾಗದಿಂದ ಒಬ್ಬರು)   

ಬಾಗಲಕೋಟೆ ವಿಬಾಗ, ಬಿ.ಸಿ.ಕಟ್ಟಿಮನಿ  

ಬೆಳಗಾವಿ ವಿಬಾಗ, ಆಯ್‌.ಕೆ.ಮ್ಯಾಗೇರಿ.  

ಚಿಕ್ಕೋಡಿ ವಿಭಾಗ, ಎಲ್‌.ಟಿ.ದಾಸರ.   

ಧಾರವಾಡ ವಿಭಾಗ, ಪಿ.ಬಿ.ಮಲ್ಲೂರ.   

ಗದಗ ವಿಭಾಗ, ಪ್ರಭು ಎನ್‌.ರಾಠೋಡ್‌.  

ಹುಬ್ಬಳ್ಳಿ(ಗ್ರಾ) ವಿಭಾಗ, ಉಮೇಶ ಹಂಚನಾಳ.  

ಹಾವೇರಿ ವಿಭಾಗ, ವಿ ಸಿ ಪರದೇಶಿ  

ಉತ್ತರ ಕನ್ನಡ ವಿಬಾಗ, ಶೃತಿ.ಆರ್  

ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಬಾಗ, ಸಂಜೀವ ಬಿ.ಪುಡಕಲಕಟ್ಟಿ  


ದ್ವೀತೀಯ ಸ್ಥಾನ ಪಡೆದ ನಿರ್ವಾಹಕರುಗಳು (ಪ್ರತಿ ವಿಭಾಗದಿಂದ ಒಬ್ಬರು)   

ಬಾಗಲಕೋಟೆ ವಿಬಾಗ, ರಮೇಶ ಎಸ್‌. ಹಡಪದ   

ಬೆಳಗಾವಿ ವಿಭಾಗ, ಎಮ್‌.ಎಮ್‌.ತೆಗೂರ.  

ಚಿಕ್ಕೋಡಿ ವಿಭಾಗ, ಸಂತೋಷ ಸಿಂದೆ.  

ಧಾರವಾಡ ವಿಭಾಗ, ಆರಿ​‍್ಸ.ಸುಳೇಭಾವಿ.  

ಗದಗ ವಿಭಾಗ, ಎಲ್‌.ಬಿ.ಕುಲಕರ್ಣಿ.  

ಹುಬ್ಬಳ್ಳಿ(ಗ್ರಾ) ವಿಭಾಗ, ಎಸ್ ಎಚ್‌. ಕಲಘಟಗಿ.  

ಹಾವೇರಿ ವಿಭಾಗ, ಪಿ.ಎಪ್‌.ಹೊಸಮನಿ.  

ಉತ್ತರ ಕನ್ನಡ ವಿಭಾಗ, ರಾಘವೇಂದ್ರ ಮಡಿವಾಳ  

ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗ, ಮಂಜುನಾಥ ವಾಯ್ ಉಪ್ಪೇರಿ.  

          ಘಟಕಗಳ ನಿರ್ವಾಹಕರುಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.  


           ಕಾರ್ಯಾಗಾರದಲ್ಲಿ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಗಣೇಶ ರಾಠೋಡ, ಶ್ರೀನಿವಾಸಮೂರ್ತಿ.ಸಿ.ಇ, ಬಿ ಡಿ ಗುರಿಕಾರ, ಜಗದಂಬಾ ಕೋಪರ್ಡೆ, ರವಿ ಅಂಚಗಾವಿ, ನವೀನಕುಮಾರ ತಿಪ್ಪಾ ರವರು ಹಾಗೂ ಎಲ್ಲ ವಿಭಾಗಗಳ ನಿಯಂತ್ರಣಾಧಿಕಾರಿಗಳು, ಸಂಚಾರ ಅಧಿಕಾರಿಗಳು, ತಾಂತ್ರಿಕ ಶಿಲ್ಪಿಗಳು, ಭದ್ರತಾ ಮತ್ತು ಜಾಗೃತಾಧಿಕಾರಿಗಳು, ಕಾನೂನು ಅಧಿಕಾರಿಗಳು ಮತ್ತು ಘಟಕ ವ್ಯವಸ್ಥಾಪಕರುಗಳು ಸಂಸ್ಥೆಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು, ನವೀನಕುಮಾರ ತಿಪ್ಪಾ ರವರು ಸ್ವಾಗತ ಕೋರಿದರು, ಸುನೀಲ್ ಪತ್ರಿ ರವರು ಕಾರ್ಯಯಕ್ರಮವನ್ನು ನಿರೂಪಿಸಿದರು ಮತ್ತು ನಿತಿನ ಹೆಗಡೆ ರವರು ಕಾರ್ಯಕ್ರಮವನ್ನು ವಂದಿಸಿದರು.   ಸದರಿ ಸುದ್ಧಿಯನ್ನು ಸಾರ್ವಜನಿಕರ ಗಮನಕ್ಕೆ ಬರುವಂತೆ ಜಿಲ್ಲೆಯ ಎಲ್ಲಾ ಜನಪ್ರಿಯ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಸಾರ್ವಜನಿಕ ಸುದ್ಧಿ ಎಂದು ಪ್ರಕಟಿಸಲು ಈ ಮೂಲಕ ಕೋರಲಾಗಿದೆ.