ಪಟ್ಟಣದ ಪುರಸಭೆಯಿಂದ ತುರ್ತು ಸಮಯದಲ್ಲಿ ಸೇವೆಗೆ ವಿಶೇಷ ಪೌರಕಾರ್ಮಿಕರ ತಂಡ

 ಪಟ್ಟಣದ ಪುರಸಭೆಯಿಂದ ತುರ್ತು ಸಮಯದಲ್ಲಿ ಸೇವೆಗೆ ವಿಶೇಷ ಪೌರಕಾರ್ಮಿಕರ ತಂಡ Special team of civil servants from the town municipality to serve in times of emergency

ಲೋಕದರ್ಶನ ವರದಿ 

ಲಕ್ಷ್ಮೇಶ್ವರ"  19: ಪಟ್ಟಣದ ಪುರಸಭೆ ವತಿಯಿಂದ ತುರ್ತು ಸಮಯದಲ್ಲಿ ಸೇವೆ ಸಲ್ಲಿಸಲು ಪುರಸಭೆಯಿಂದ ಹೊಸದಾಗಿ ತಂಡವನ್ನು ರಚಿಸಲಾಗಿದ್ದು ಪಟ್ಟಣದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಗಾಳಿ ಬೀಸಿ ರಸ್ತೆ ಸಂಪರ್ಕ ಸೇರಿದಂತೆ ಏನಾದರೂ ಗಿಡ ಮರಗಳು ಬಿದ್ದು ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದರೆ ಅಂತ ಸಮಯದಲ್ಲಿ ತಕ್ಷಣವೇ ಸೇವೆ ಸಲ್ಲಿಸಲು ಪುರಸಭೆಯಿಂದ ವಿಶೇಷ ಪೌರಕಾರ್ಮಿಕರ ತಂಡವನ್ನು ರಚಿಸಲಾಗಿದ್ದು ಸೋಮವಾರ ರಾತ್ರಿ ಪುರಸಭೆಯಲ್ಲಿ ಸೇವೆಗೆ ಸಿದ್ಧವಾಗಿ ನಿಂತಿರುವ ತಂಡದೊಂದಿಗೆ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಮಂಜುನಾಥ್ ಮುದಗಲ್ ಅವರು ಇದ್ದರು