ಬಸ್‌ಗೆವಿಶೇಷ ಪೂಜೆಐತಿಹಾಸಿಕ ಸಾಧನೆಗೆ ಸಾಕ್ಷಿಯಾದ ಶಕ್ತಿ ಯೋಜನೆ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

 ಬಸ್‌ಗೆವಿಶೇಷ ಪೂಜೆಐತಿಹಾಸಿಕ ಸಾಧನೆಗೆ ಸಾಕ್ಷಿಯಾದ ಶಕ್ತಿ ಯೋಜನೆ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ Special puja for the bus, Shakti Yojana a witness to historic achievement - MLA K. Raghavendra Hitna

 ಬಸ್‌ಗೆವಿಶೇಷ ಪೂಜೆಐತಿಹಾಸಿಕ ಸಾಧನೆಗೆ ಸಾಕ್ಷಿಯಾದ ಶಕ್ತಿ ಯೋಜನೆ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ 

ಕೊಪ್ಪಳ 14: ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿರಾಜ್ಯದಲ್ಲಿ500 ಕೋಟಿಉಚಿತ್‌ಬಸ್ ಟಿಕೆಟ್ ವಿತರಿಸಲ್ಪಟ್ಟಿದ್ದು, ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನುರಾಜ್ಯದಲ್ಲಿಪಡೆದಿರುವುದುಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆಎಂದು ಕೊಪ್ಪಳ ಶಾಸಕರಾದಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. 

ಅವರು ಸೋಮವಾರ ಕೊಪ್ಪಳ ನಗರದಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಡಿರಾಜ್ಯದಲ್ಲಿ 500 ಕೋಟಿಉಚಿತ್‌ಟಿಕೆಟ್ ವಿತರಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ಕಲ್ಯಾಣಕರ್ನಾಟಕರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗದಿಂದ ಹಮ್ಮಿಕೊಂಡಿದ್ದ ಬಸ್‌ಗೆ ಪೂಜೆ ಸಲ್ಲಿಸಿ, ಪ್ರಯಾಣಿಕರಿಗೆಸಿಹಿ ಹಂಚುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ನಮ್ಮಸರ್ಕಾರವು ಯಶಸ್ವಿಯಾಗಿ 2 ವರ್ಷಗಳನ್ನು ಪೂರ್ಣಗೊಳಿಸಿದ್ದು, ಜನಪರವಾದಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆತರುವುದರ ಮೂಲಕ ಮಹಿಳೆಯರು, ನಿರುದ್ಯೋಗಿಯುವಜನತೆ ಮತ್ತು ವಿಶೇಷವಾಗಿ ಬಡಜನರಿಗೆಆರ್ಥಿಕವಾಗಿ ಅನುಕೂಲ ಮಾಡಿಕೊಟ್ಟಿದೆ.ಪಂಚ ಗ್ಯಾರಂಟಿಯೋಜನೆಯಲ್ಲೊಂದಾದ ಶಕ್ತಿ ಯೋಜನೆಯಡಿಇಲ್ಲಿವಯರೆಗೆರಾಜ್ಯದಲ್ಲಿ500 ಕೋಟಿ ಮಹಿಳೆಯರು ಉಚಿತ ಬಸ್ ಪ್ರಾಯಾಣವನ್ನು ಮಾಡಿದ್ದು, ಇದೊಂದುದೇಶದಲ್ಲಿಯೇ ಬಹುದೊಡ್ಡಕಾರ್ಯಕ್ರಮವಾಗಿದೆಎಂದರು. 

ಮಹಿಳೆಯರಿಗೆ ಸ್ವಂತ ಶಕ್ತಿ ಮೇಲೆ ಕುಟುಂಬವನ್ನು ನಡೆಸಲುಗೃಹಲಕ್ಷ್ಮೀಯೋಜನೆಯಡಿ ಮಾಸಿಕ 2000 ರೂ.ಗಳ ಸಹಾಯಧನ ಮತ್ತುಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ನಮ್ಮ ಸರ್ಕಾರ ಮಾಡಿಕೊಟ್ಟಿದೆ.ಇದರಜೊತೆಗೆಗೃಹಜ್ಯೋತಿಯೋಜನೆಯಡಿ ಪ್ರತಿ ಮನೆಗೆ 200 ಯುನಿಟ್‌ಉಚಿತ್ ವಿದ್ಯುತ್, ಅನ್ನಭಾಗ್ಯಯೋಜನೆಯಡಿ ಹತ್ತುಕೆ.ಜೆ ಅಕ್ಕಿ ವಿತರಣೆ ಹಾಗೂ ನಿರುದ್ಯೋಗಿಯುವಕರಿಗೆ ನಿರುದ್ಯೋಗಿಭತ್ಯೆ ನೀಡುವುದರ ಮೂಲಕ ಎಲ್ಲರಿಗೂಆರ್ಥಿಕವಾಗಿ ಶಕ್ತಿ ತುಂಬಿದೆ.ಈ ಐದುಗ್ಯಾರಂಟಿ ಯೋಜನೆಗಳು ಸಮಾಜದಕಟ್ಟಕಡೆಯ ಬಡವರಿಗೂತಲುಪಿಸುವಂತಹ ಕೆಲಸ ನಮ್ಮ ಸರ್ಕಾರದಿಂದಾಗಿದೆ.ಮುಖ್ಯಮಂತ್ರಿಗಳು ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಐದು ವರ್ಷಗಳ ಕಾಲವೂ ಜಾರಿ ಮಾಡುತ್ತಾರೆಎಂದು ಹೇಳಿದರು. 

ಕೊಪ್ಪಳ ಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಅಧ್ಯಕ್ಷರಾದರೆಡ್ಡಿ ಶ್ರೀನಿವಾಸ ಅವರು ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಸಾಮಾಜಿಕಕಾರ್ಯಕ್ರಮವಾಗಿರುವ ಪಂಚಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯುಜಾರಿಯಾಗಿಎರಡು ವರ್ಷಗಳನ್ನು ಪೂರೈಸಿದ್ದು, ಈ ಅವಧಿಯಲ್ಲಿರಾಜ್ಯದಲ್ಲಿ ಸುಮಾರು 500 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣಸೌಲಭ್ಯದ ಸದುಪಯೋಗ ಪಡೆದುಕೊಂಡಿದ್ದಾರೆ. ಬಹುಶಃ ಇಂತಹಯೋಜನೆಯು ನಮ್ಮದೇಶದಯಾವರಾಜ್ಯದಲ್ಲಿಯೂಇಲ್ಲ. ಈ ಯೋಜನೆಗೆ ಬಹಳಷ್ಟು ಮಹಿಳೆಯರು ಸ್ವಾಗತಿಸಿ, ನಮ್ಮ ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಯ ಈ ಕಾರ್ಯಕ್ರಮರಾಜ್ಯದಎಲ್ಲಾಜಿಲ್ಲಾಕೇಂದ್ರ ಮತ್ತುತಾಲ್ಲೂಕು ಕೇಂದ್ರಗಳ ಬಸ್ ನಿಲ್ದಾಣದಲ್ಲಿ ಬಸ್‌ಗೆ ಪೂಜೆ ಮಾಡಿ, ಪ್ರಯಾಣಿಕರಿಗೆಸಿಹಿ ಹಂಚಿ ಸಂಭ್ರಮಾಚರಣೆ ಮಾಡಬೇಕೆಂದು ಸರ್ಕಾರವು ನಿರ್ಣಯಿಸಿರುವ ಹಿನ್ನೆಲೆಯಲ್ಲಿಇಂದುಕೊಪ್ಪಳ ಜಿಲ್ಲಾಕೇಂದ್ರ ಬಸ್ ನಿಲ್ದಾಣದಲ್ಲಿಯೂ ಬಸ್‌ಗೆ ಪೂಜೆ ಸಲ್ಲಿಸಿ ಮತ್ತು ಮಹಿಳೆಯರಿಗೆ ಸಿಹಿ ಹಂಚಿಅಭಿನಂದಿಸಲಾಗಿದೆಎಂದರು. 

ಬಸ್‌ಗೆ ವಿಶೇಷ ಪೂಜ್ಘೆ ಪ್ರಯಾಣಿಕರಿಗೆ ಸಿಹಿ ಹಂಚಿಕೆ: ಶಕ್ತಿ ಯೋಜನೆಯಡಿರಾಜ್ಯದಲ್ಲಿ 500 ಕೋಟಿ ಮಹಿಳಾ ಪ್ರಯಾಣಿಕರುಉಚಿತ ಟಿಕೆಟ್‌ಗಳನ್ನು ಪಡೆದುಪ್ರಯಾಣಿಸಿರುವ ಹಿನ್ನೆಲೆಯಲ್ಲಿಕೊಪ್ಪಳ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಬಸ್ ನಿಲ್ದಾಣದಲ್ಲಿದ್ದ ಶಕ್ತಿ ಯೋಜನೆಯ ಲಾಭ ಪಡೆಯುತ್ತಿರುವ ಮಹಿಳಾ ಪ್ರಯಾಣಿಕರಿಗೆ ಸಿಹಿ ಹಂಚಿಗಣ್ಯರಿಂದ ಶುಭಾಷಗಳನ್ನು ಕೋರಲಾಯಿತು. 

ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆಅಧ್ಯಕ್ಷರಾದಅಮ್ಜದ್ ಪಟೇಲ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ವರ್ಣಿತ್ ನೇಗಿ, ಕಲ್ಯಾಣಕರ್ನಾಟಕರಸ್ತೆ ಸಾರಿಗೆ ನಿಗಮದಕೇಂದ್ರಕಛೇರಿ ಕಲಬುರಗಿಯ ಮುಖ್ಯಯೋಜನಾ ಮತ್ತುಸಾಂಖಿಕ ಅಧಿಕಾರಿಗಳು ಹಾಗೂ ಕೊಪ್ಪಳ ವಿಭಾಗದಉಸ್ತುವಾರಿಅಧಿಕಾರಿಎಂ.ಆರ್‌.ಮುಂಜಿ, ಕೊಪ್ಪಳ ಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಕಲ್ಯಾಣಕರ್ನಾಟಕರಸ್ತೆ ಸಾರಿಗೆನಿಗಮಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿರಾಜೇಂದ್ರ ಬಿ.ಜಾಧವ್, ಕೊಪ್ಪಳ ತಾಲ್ಲೂಕುಗ್ಯಾರಂಟಿ ಸಮಿತಿಅಧ್ಯಕ್ಷರಾದ ಟಿ.ಬಾಲಚಂದ್ರನ್, ಸದಸ್ಯರಾದಜ್ಯೋತಿ ಎಂ.ಗೊಂಡಬಾಳ, ಅವಿತಾಗೋರಂಟ್ಲಿ ಹಾಗೂ ಇತರ ಸದಸ್ಯರು, ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕಅಧಿಕಾರಿದುಂಡಪ್ಪತುರಾದಿ, ಕ.ಕ.ರ.ಸಾ.ನಿ ಕೊಪ್ಪಳ ವಿಭಾಗೀಯ ಸಂಚಾರಅಧಿಕಾರಿ ಪರಮೇಶ್ವರ​‍್ಪ, ಕಾರ್ಮಿಕಕಲ್ಯಾಣಾಧಿಕಾರಿ ಸತ್ಯನಾರಾಣ, ಘಟಕ ವ್ಯವಸ್ಥಾಪಕರಮೇಶಚಿಣಗಿ ಸೇರಿದಂತೆಇತರೆಅಧಿಕಾರಿ ಮತ್ತು ಸಿಬ್ಬಂದಿಗಳು, ವಿವಿಧಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.