ಹನುಮ ಜಯಂತಿ ಪ್ರಯುಕ್ತ ಮಾರುತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅನ್ನಪ್ರಸಾದ

ಹನುಮ ಜಯಂತಿ ಪ್ರಯುಕ್ತ ಮಾರುತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅನ್ನಪ್ರಸಾದ Special puja, Annaprasadam held at Maruti temples on the occasion of Hanuman Jayanti

ಲೋಕದರ್ಶನ ವರದಿ 

ಸವದತ್ತಿ  02: ನಗರದಲ್ಲಿ ಗುರುವಾರ ಹನುಮ ಜಯಂತಿಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಹನುಮ ಜಯಂತಿ ಅಂಗವಾಗಿ ನಗರದ ವಿವಿಧ ಹನುಮಂತ ದೇವರ ದೇವಸ್ಥಾನಗಳಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಬಾಲ ಮಾರುತಿ ದೇವರ ತೊಟ್ಟಿಲೋತ್ಸವವು ಭಕ್ತರ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ರೇಣುಕಾ ಚಿತ್ರಮಂದಿರ ಹತ್ತಿರವಿರುವ ಹನುಮಂತ ದೇವಸ್ಥಾನ, ರಾಮಾಪುರ ಸೈಟ್‌ನ, ಮಾರುತಿ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ಮಾರುತಿ ಗುಡಿಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಹಾಗೂ ಮಹಾಪೂಜೆ ಮಾಡಲಾಯಿತು.

ಮಧ್ಯಾಹ್ನದ ವೇಳೆ ದೇವಸ್ಥಾನಗಳಿಗೆ ಭೇಟಿ ನೀಡಿದ ನೂರಾರು ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತು ಆಂಜನೇಯನ ದರ್ಶನ ಪಡೆದರು. ಭಜನೆ, ಕೀರ್ತನೆಗಳ ಮೂಲಕ  ಹನುಮ ನಾಮ ಸ್ಮರಣೆ ಮೊಳಗಿತು.   ಈ ಸಂದರ್ಭದಲ್ಲಿ ಶ್ರೀಶೈಲ ಸಾಲಿಮಠ, ಮಲ್ಲಿಕಾರ್ಜುನ ಬೀಳಗಿ, ಶಂಕರ ಇಜಂತಕರ್, ಪ್ರಕಾಶ ಆಗಾಸಿ,ಗುರು ಅಲಬನ್ನವರ, ಶ್ರೀಶೈಲ ತಿಗಡಿ,ಸಾಗರ ಬೆಳವಡಿ, ನಾಗೇಶ ಕೋರವರ, ವಿಠ್ಠಲ ಜಮಾದಾರ, ಸುನಿಲ್ ಜೋರಾಪೂರ. ಉಪಸ್ಥಿತರಿದ್ದರು