ಕಾರ್ಮಿಕ ಮತ್ತು ಕೈಗಾರಿಕಾ ಕಾನೂನು ಕುರಿತು ವಿಶೇಷ ಉಪನ್ಯಾಸ

ಕಾರ್ಮಿಕ ಮತ್ತು ಕೈಗಾರಿಕಾ ಕಾನೂನು ಕುರಿತು ವಿಶೇಷ ಉಪನ್ಯಾಸ Special lecture on labor and industrial law

ಬೆಳಗಾವಿ 18 :  ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಸೆಮಿನಾರ್ ಹಾಗೂ ಅತಿಥಿ ಉಪನ್ಯಾಸ ವಿಭಾಗದ ವತಿಯಿಂದ ಎಂ.ಕೆ. ನಂಬಿಯಾರ್ ಮೂಟ್ ಕೋರ್ಟ್‌ ಸಭಾಂಗಣದಲ್ಲಿ ನೂತನ ಕಾರ್ಮಿಕ ಸಂಹಿತೆ ಕುರಿತು ವಿಶೇಷ ಅತಿಥಿ ಉಪನ್ಯಾಸವನ್ನು  ಆಯೋಜಿಸಲಾಗಿತ್ತು.ಕಾನೂನು ವಿದ್ಯಾರ್ಥಿಗಳಲ್ಲಿ ನೂತನ ಕಾರ್ಮಿಕ ಸಂಹಿತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ವಿಶೇಷವಾಗಿ ವೇತನ ಸಂಹಿತೆ - 2019  ಹಾಗೂ ವಿವಿಧ ಕಾರ್ಮಿಕ ಕಾನೂನುಗಳ ಏಕೀಕರಣ ಮತ್ತು ರದ್ದತಿಯ ಮೂಲಕ ಜಾರಿಗೆ ಬಂದಿರುವ ಮಹತ್ವದ ತಿದ್ದುಪಡಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಕಾರ್ಮಿಕ ಮತ್ತು ಕೈಗಾರಿಕಾ ಸಂಬಂಧಗಳು  ವಿಷಯವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಉಪನ್ಯಾಸ ಅತ್ಯಂತ ಉಪಯುಕ್ತವಾಗಿತ್ತು. ಎಲ್‌.ಎಲ್‌.ಬಿ., ಬಿ.ಎ. ಎಲ್‌.ಎಲ್‌.ಬಿ. ಹಾಗೂ ಬಿ.ಬಿ.ಎ. ಎಲ್‌.ಎಲ್‌.ಬಿ. ವಿಭಾಗಗಳ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಡಿ.ಬಿ. ನಾಗೇಶ್ ಅವರು ನೂತನ ವೇತನ ಸಂಹಿತೆ - 2019 ಕುರಿತು ಸಮಗ್ರ ಮಾಹಿತಿ ನೀಡಿದರು.