ಜೂ.೩೦ರಿಂದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ

ಜೂ.೩೦ರಿಂದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ Special comprehensive voter list revision campaign from June 30

ಲೋಕದರ್ಶನ ವರದಿ

ಜಮಖಂಡಿ ೨೩: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ (ಎಸ್‌ಐಆರ್) ಜೂ.೩೦ರಿಂದ ಜುಲೈ ೨೯ರವರೆಗೆ ನಡೆಸಲಾಗುವುದು ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.

ನಗರದ ತಾಲೂಕಡಾಳಿತ ಸೌಧದ ಸಭಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳುವುದು ಹಾಗೂ ಅನರ್ಹ ಮತದಾರರ ಹೆಸರುಗಳನ್ನು ತೆಗೆದು ಹಾಕಿ ಪಾರದರ್ಶಕ ಮತದಾರರ ಪಟ್ಟಿಯನ್ನು ಸಿದ್ದಪಡಿಸುವುದು ಎಸ್‌ಐಆರ್‌ನ ಮುಖ್ಯ ಉದ್ದೇಶವಾಗಿದೆ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭದ ದಿನದಿಂದ ಪ್ರತಿ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪೂರ್ವ ಮುದ್ರಿತ ಎಣಿಕೆ ನಮೂನೆಗಳನ್ನು ವಿತರಿಸಲಿದ್ದು, ಅವುಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳ ಜತೆಗೆ ಜು.೨೯ರೊಳಗೆ ಹಿಂತಿರುಗಿಸಬೇಕು. ಯಾರು ಮನೆಯಲ್ಲಿ ಇಲ್ಲದೆ ಮನೆ ಮುಚ್ಚಿದ್ದಲ್ಲಿ ಬಿಎಲ್‌ಒಗಳು ೩ ಬಾರಿ ಮನೆಗಳಿಗೆ ಭೇಟಿ ನೀಡುತ್ತಾರೆ. ಅದಾದ ಬಳಿಕವೂ ಸಂಪರ್ಕಕ್ಕೆ ಸಿಗದೇ ಇದ್ದ ವೇಳೆ ಸಂಬAಧಿಸಿದ ಮತದಾರರಿಗೆ ವಿಚಾರಣೆಗೆ ಕರೆಯಲಾಗುತ್ತದೆ.  ೨೦೦೨ರ ವಿಶೇಷ ಪರಿಷ್ಕರಣೆಯ ನಂತರ ಇದೀಗ ಮತ್ತೆ ರಾಜ್ಯದಲ್ಲಿ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು, ೨೦೨೬ರ ಅಕ್ಟೋಬರ ೧ ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು ಎಂದರು.

ತಹಶೀಲ್ದಾರ ಅನೀಲ ಬಡಿಗೇರ ಮಾತನಾಡಿ, ಆಗಸ್ಟ್ ೫ರಿಂದ ಸೆಪ್ಟೆಂಬರ ೪ರ ವರೆಗೆ ಆಕ್ಷೇಪಣೆ, ದಾವೆ ಸಲ್ಲಿಸಲು ಅವಕಾಶವಿದೆ. ಎಲ್ಲಾ ಅರ್ಹ ಮತದಾರರು ಈ ಅವಕಾಶದ ಲಾಭ ಪಡೆಯಬೇಕು ಎಂದರು.