ಕಾರಂಜಿ ಮಠದಲ್ಲಿ ಶಿವರಾತ್ರಿ ವಿಶೇಷ ಕಾರ್ಯಕ್ರಮ
Special Shivaratri program at Karanji Mutt
ಬೆಳಗಾವಿ 10: ನಗರದ ಶಿವಬಸವ ನಗರದಲ್ಲಿರುವ ಕಾರಂಜಿಮಠದಲ್ಲಿ 296ನೇ ಮಾಸಿಕ ಶಿವಾನುಭವ ಹಾಗೂ ಮಹಾಶಿವರಾತ್ರಿ ವಿಶೇಷ ಕಾರ್ಯಕ್ರಮವು ಫೆಬ್ರವರಿ 15, 2026 (ರವಿವಾರ) ಸಂಜೆ 6 ಗಂಟೆಗೆ ಜರುಗಲಿದೆ. ಕಾರ್ಯಕ್ರಮದಲ್ಲಿ ನಾಗನೂರು ರುದ್ರಾಕ್ಷಿ ಮಠದ ಮ.ನಿ.ಪ್ರಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಮ.ನಿ.ಪ್ರ ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿ ಮಠದ ವತಿಯಿಂದ ಕಾರ್ಯಕ್ರಮದ ನೇತೃತ್ವ ವಹಿಸುವರು. ಶಿವರಾತ್ರಿ ವಿಶೇಷತೆಯ ಕುರಿತುಡಾ. ಅಶ್ವಿನಿ ಕುದರಿಮಠ (ಭಾಗೋಜಿ), ವಿಭಾಗ ಮುಖ್ಯಸ್ಥರು, ಎಸ್.ಜಿ.ವಿ. ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ರಿಸರ್ಚ್ ಸೆಂಟರ್, ಬೈಲಹೊಂಗಲ ಉಪನ್ಯಾಸ ನೀಡುವರು.
ಈ ಸಂದರ್ಭದಲ್ಲಿಡಾ. ವಿನೋದದೊಡ್ಡಣ್ಣವರ, ಕಾರ್ಯದರ್ಶಿಗಳು, ಭರತೇಶ ಶಿಕ್ಷಣ ಸಂಸ್ಥೆ, ಬೆಳಗಾವಿ ಹಾಗೂ ಬಸವರಾಜ ಹಳಂಗಳಿ, ಜಿಲ್ಲಾಧ್ಯಕ್ಷರು, ಶಾಲಾಹಿಕಾಲೇಜುಗಳ ಅನುದಾನಿತ ಶಿಕ್ಷಕರ ಸಂಘ, ಬೆಳಗಾವಿ ಇವರಿಗೆ ಸನ್ಮಾನಜರುಗಲಿದೆ. ಇದಲ್ಲದೆ ಕು. ಕಾಜೋಲ್‌ಧಾಮನೇಕರ ಯುವಪ್ರತಿಭೆ, ಬೆಳಗಾವಿ ಹಾಗೂ ಕಾರಂಜಿಮಠದ ಕುಮಾರೇಶ್ವರ ಸಂಗೀತ ಶಾಲೆಯ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮವು ಕಾರಂಜಿ ಮಠದ ಶಿವಾನುಭವ ಮಂಟಪದಲ್ಲಿ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಠದ ಪ್ರಕಟನೆಯಲ್ಲಿ ಕೋರಿದೆ.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 