ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆ, ಪಾದಪೂಜೆ
Special Puja, Pada Puja as part of Guru Purnima
ಲೋಕದರ್ಶನ ವರದಿ
ಆಲಮೇಲ 29: ಪಟ್ಟಣದ ಗುರು ಸಂಸ್ಥಾನ ಹಿರೇಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಮಹಿಳಾ ಭಕ್ತರು ವಿಶೇಷ ಪೂಜೆ, ಪಾದಪೂಜೆ ಹಾಗೂ ಶಿವನಾಮ ಸ್ಮರಣೆಯೊಂದಿಗೆ ಭಕ್ತಿಭಾವದಿಂದ ಆಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಗುರು ಸಂಸ್ಥಾನದ ಚಂದ್ರಶೇಖರ ಶ್ರೀಗಳು ಹಾಗೂ ಅರ್ಜುನಗಿ ಮಠದ ಸಂಗನಬಸವ ಶ್ರೀಗಳಿಗೆ ಮಹಿಳಾ ಭಕ್ತರು ಪಾದಪೂಜೆ ನೆರವೇರಿಸಿ, ಶಿವನಾಮ ಸಂಕೀರ್ತನೆ ಹಾಗೂ ಭಕ್ತಿಗೀತೆಗಳನ್ನು ಹಾಡಿ ಗೌರವ ಸಲ್ಲಿಸಿದರು. ಬಳಿಕ ಶ್ರೀಗಳ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೀನಾಕ್ಷಿ ಕೋಣಶಿರಸಗಿ, ಜೀವನದಲ್ಲಿ ಗುರುಗಳ ಮಾರ್ಗದರ್ಶನ ಅತ್ಯಂತ ಮಹತ್ವದ್ದಾಗಿದ್ದು, ಗುರು ಪೂರ್ಣಿಮೆ ಆತ್ಮಚಿಂತನೆ ಹಾಗೂ ಸದ್ಮಾರ್ಗದಲ್ಲಿ ಸಾಗಲು ಪ್ರೇರಣೆ ನೀಡುವ ಹಬ್ಬವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾವಿತಾ ಹಿರೇಮಠ, ರಾಣಿ ಮಠ, ತಾಯಮ್ಮ ಕೇರಿ, ಮಂಜುಳಾ ಕುಂಬಾರ, ನಾಗಮ್ಮ ಜಾಡರ, ಭಾರತಿ ತಾರಾಪೂರ, ಮೈತ್ರಿ, ಕಮಲಾ ಕಡಣಿ, ನಾಗಮ್ಮ ಸುಬೇದಾರ, ಸ್ವಾತಿ ಪತ್ತಾರ, ಭಾಗ್ಯಶ್ರೀ, ಈರವ್ವ ಸೇರಿದಂತೆ ಮಹಿಳಾ ಭಕ್ತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 