ಸಜ್ಜನ ಸಮಾಜದಿಂದ ವಿಶೇಷ ಪ್ರಸಾದ ವ್ಯವಸ್ಥೆ
Special Prasada arrangements by the community of noble people
ತಾಳಿಕೋಟಿ 28 : ಪಟ್ಟಣದ ಆರಾಧ್ಯ ದೈವ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೋತ್ಸವದ ಕೊನೆಯ ದಿನವಾದ ಸೋಮವಾರದಂದು ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಗಾಣಸಿರಿ ಸಮಾಜದ ವತಿಯಿಂದ ವಿಶೇಷ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರಸಾದ ಸೇವೆ ಆರಂಭಿಸುವ ಮುನ್ನ ಇತ್ತೀಚಿಗೆ ನಿಧನರಾದ ಸಮಾಜದ ಕ್ರಿಯಾಶೀಲ ಸದಸ್ಯ ಪರ್ಪ ಸಜ್ಜನ್ ಇವರ ಆತ್ಮಕ್ಕೆ ಶಾಂತಿ ಕೋರಿ ಸಮಾಜ ಬಾಂಧವರು ಮೌನ ಆಚರಣೆ ನಡೆಸಿದರು.
ನಂತರ ಪ್ರಸಾದ ಸೇವೆಗೆ ಸಮಾಜದ ಅಧ್ಯಕ್ಷರು ಉಪಾಧ್ಯಕ್ಷರು ಜೊತೆಗೂಡಿ ಸಮಾಜ ಬಾಂಧವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಪ್ರಕಾಶ ಸಜ್ಜನ ಮಾತನಾಡಿ ಕಳೆದ ಐದು ವರ್ಷಗಳಿಂದ ಅಜ್ಜನ ಜಾತ್ರೆಗೆ ಬರುವ ಸಾವಿರಾರು ಭಕ್ತಾದಿಗಳಿಗೆ ಪ್ರತಿ ವರ್ಷ ವಿಶೇಷ ಪ್ರಸಾದ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ ಈ ವರ್ಷ ವಿಶೇಷ ಗೋಧಿ ಹಾಲು ಹುಗ್ಗಿ ಹಾಗೂ ಪಲಾವ್ ಸಿದ್ಧಪಡಿಸಲಾಗಿದೆ ಭಕ್ತಾದಿಗಳು ಶಾಂತ ರೀತಿಯಿಂದ ಪ್ರಸಾದ ಸ್ವೀಕರಿಸಿ ಅಜ್ಜನ ಕೃಪೆಗೆ ಪಾತ್ರರಾಗಬೇಕು ಎಂದರು.
ಪ್ರಸಾದ ಸೇವೆಯಲ್ಲಿ ಸಮಾಜದ ಉಪಾಧ್ಯಕ್ಷ ತಿಪ್ಪಣ್ಣ ಸಜ್ಜನ್, ಪ್ರಮುಖರಾದ ಕಾಶಿನಾಥ್ ಸಜ್ಜನ ಬಿದರಕುಂದಿ, ಪ್ರಕಾಶ ಹಜೇರಿ, ರಾಜು ಸಜ್ಜನ, ಜಗದೀಶ ಬಿಳೇಭಾವಿ, ಬಂಡು ದಾಯಫುಲೆ, ಶರಣಪ್ಪ ಸಜ್ಜನ, ಸಂಗಪ್ಪ ಕಂದಗಲ್, ಮಲ್ಲಪ್ಪ ಅಸಂತಾಪೂರ, ಶಿಕ್ಷಕರಾದ ಈರಣ್ಣ ಸಜ್ಜನ, ಮುಖ್ಯ ಗುರುಗಳಾದ ಎಸ್ ಬಿ ಸಜ್ಜನ ಹಾಗೂ ವಿವಿಧ ಸಮಾಜಗಳ ಬಾಂಧವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 