ವಿಶೇಷ ಉಪನ್ಯಾಸ ಬ್ಯಾಂಕಿಂಗ್ ಉದ್ದಿಮೆಯಲ್ಲಾಗಿದೆ ಸಾಕಷ್ಟು ಪ್ರಗತಿ: ಅಶ್ರಫ್ ಅಲ್ಲಳ್ಳಿ

Special Lecture: There has been a lot of progress in the banking industry: Ashraf Allalli

ವಿಶೇಷ ಉಪನ್ಯಾಸ ಬ್ಯಾಂಕಿಂಗ್ ಉದ್ದಿಮೆಯಲ್ಲಾಗಿದೆ ಸಾಕಷ್ಟು ಪ್ರಗತಿ: ಅಶ್ರಫ್ ಅಲ್ಲಳ್ಳಿ      

 ಕೊಪ್ಪಳ 19 : ಹಣದ ವ್ಯವಹಾರಕ್ಕೆ ಮೊದಲು ಗ್ರಾಹಕ ಬ್ಯಾಂಕ್ಗೆ ತೆರಳಬೇಕಿತ್ತು. ಈಗ ಬ್ಯಾಂಕಿಂಗ್ ಉದ್ದಿಮೆಯಲ್ಲಿ ಸಾಕಷ್ಟು ಪ್ರಗತಿ ಕಾಣಬಹುದಾಗಿದೆ ಎಂದು ಗಂಗಾವತಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಶ್ರಫ್ ಅಲ್ಲಳ್ಳಿ ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಬಿಎ ವಿಭಾಗದಲ್ಲಿ ಬುಧವಾರ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ನುರ್ವಹಣಾಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ವಿದ್ಯಾರ್ಥಿಗಳಿಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು 1990-2000 ಕ್ಕಿಂತ ಮುಂಚೆ ಎಟಿಎಂಗಳಿರಲಿಲ್ಲ. ಮೊಬೈಲ್ಗಳಿರಲಿಲ್ಲ. ಆಗ ಹಣದ ವ್ಯವಹಾರಕ್ಕಾಗಿ ಬ್ಯಾಂಕ್ಗಳಿಗೆ ತೆರಳಬೇಕಿತ್ತು. ಆಧುನಿಕ ತಂತ್ರಜ್ಞಾನದ ಬೆಳವಣಿಗೆಗಳನ್ನು ಸಮರ​‍್ಕವಾಗಿ ಅಳವಡಿಸಿಕೊಂಡಿರುವ ಬ್ಯಾಂಕಿಂಗ್ ಕ್ಷೇತ್ರ ಇಂದು ಅಗಾಧ ಅಭಿವೃದ್ಧಿ ಸಾಧಿಸಿದೆ. ಬರುವ ದಿನಗಳಲ್ಲಿ ರೋಬೋಟ್ಗಳು ಈ ಉದ್ದಿಮೆಯಲ್ಲಿ ಕಾಣಸಿಗುವ ಕಾಲ ದೂರವಿಲ್ಲ ಎಂದರು. ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕರು ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಟಿ.ವಿ.ವಾರುಣಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂಥ ಕಾರ್ಯಕ್ರಮಗಳು ಉಪಯುಕ್ತವಾಗಿದ್ದು, ಪ್ರಯೋಜನ ಪಡೆಯುವಂತೆ ಕರೆ ನೀಡಿದರು. ಕಾಲೇಜಿನ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಿವನಾಥ ಈ.ಜಿ. ಅತಿಥಿ ಪರಿಚಯದ ಜೊತೆಗೆ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಎಚ್‌.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ನಿರ್ವಹಣಾಶಾಸ್ತ್ರ ವಿಭಾಗದ ಬೋಧಕ ಸಿಬ್ಬಂದಿ ಶಂಕರಾನಂದ, ಶಾಹಿನಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಸುಷ್ಮಿತಾ ಮತ್ತು ಪವಿತ್ರ ಪ್ರಾರ್ಥಿಸಿದರು. ಕವನಾ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಎಸ್‌.ಬಾಲಾಜಿ ಸ್ವಾಗತಿಸಿದರು. ಶಂಕರಾನಂದ ವೈ.ಎಂ. ವಂದಿಸಿದರು.