ಕಾರವಾರ ನಗರಸಭೆಯ ವಿಶೇಷ ಸಾಮಾನ್ಯ ಸಭೆ
Special General Meeting of Karwar Municipal Council
ಕಾರವಾರ ನಗರಸಭೆಯ ವಿಶೇಷ ಸಾಮಾನ್ಯ ಸಭೆ
ಕಾರವಾರ, 15 : ನಗರಸಭೆಯ ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಗಿಯುತ್ತಾ ಬಂದಿದ್ದು, ಕೊನೆಯ ದಿನಗಳಲ್ಲಿ ಕೈಗೊಂಡ ಇಂಧೂರ್ ನಗರದ ಶೈಕ್ಷಣಿಕ ಪ್ರವಾಸದ ಅನುಭವಗಳನ್ನು ಸದಸ್ಯರು ಮತ್ತು ಅಧಿಕಾರಿಗಳು ಸೋಮವಾರ ನಗರಸಭೆಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಂಚಿಕೊಂಡರು. ಸ್ವಚ್ಚ ಭಾರತ ಮಿಷನ್ 2.0 ನಗರ ಯೋಜನೆ ಅಡಿ ಅಧ್ಯಯನ ಪ್ರವಾಸದಡಿ ತ್ಯಾಜ್ಯ ನಿರ್ವಹಣೆಯಲ್ಲಿ ಸಾಧನೆ ಮಾಡಿದ ಇಂಧೂರ್ ನಗರಕ್ಕೆ ಕಾರವಾರ ನಗರಸಭೆಯ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೌರಾಕಾರ್ಮಿಕರ ಅಧ್ಯಯನ ಪ್ರವಾಸವನ್ನು ಸೆ. 7ರಂದು ಕೈಗೊಂಡಿದ್ದರು.
ಈ ಅಧ್ಯಯನ ಪ್ರವಾಸದ ಅನುಭವಗಳನ್ನು ಸದಸ್ಯರು ಹಂಚಿಕೊಂಡರಲ್ಲದೆ, ಅಲ್ಲಿನ ಸುಧಾರಿತ ಪದ್ಧತಿಯನ್ನು ಕಾರವಾರದಲ್ಲಿ ಜಾರಿ ತರಲು ಒತ್ತಾಯಿಸಿದರು. ವಿರೋಧಿ ಬಣದ ಕಾಂಗ್ರೆಸ್ ಪಕ್ಷದ ಸದಸ್ಯ ಪಿ.ಪಿ. ನಾಯ್ಕ ಮಾತನಾಡಿ ಮನೆ ಮನೆ ಕಸ ಸಂಗ್ರಹಣೆ ವಿಚಾರದಲ್ಲಿ ಇಂಧೂರ್ ನಗರದಲ್ಲಿಎನ್ .ಜಿ.ಓ. ಸಂಸ್ಥೆಯೊಂದು ನಗರಸಭೆ ಜೊತೆ ಸಹಕರಿಸುವ ಪದ್ಧತಿ ಅಲ್ಲಿದೆ.ಅತೀ ದೊಡ್ಡ ಡಂಪಿಂಗ್ ಯಾರ್ಡ್ ಹೊಂದಿದೆ. ಸಂಗ್ರಹವಾದ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನೆ ಮಾಡಿ ವಾಹನ ಇಂಧನಕ್ಕೆ ಬಳಸುತ್ತಿದ್ದಾರೆ. ಅಲ್ಲಿನ ಸ್ಥಳೀಯ ಸಂಸ್ಥೆಯ ಕಸ ನಿರ್ವಹಣಾ ಸಿಬ್ಬಂದಿ ಸಂಖ್ಯೆ ಹೆಚ್ಚು ಎಂಬುದನ್ನು ಸಭೆಯ ಮುಂದೆ ಮಂಡಿಸಿದರು.
ಸದಸ್ಯ ಸಂದೀಪ ತಳೇಕರ್ ಮಾತನಾಡಿ, ಕಸ ಸಂಗ್ರಹಣೆ ವಾಹನದಲ್ಲಿ ಹಸಿ ಕಸ, ಒಣ ಕಸಕ್ಕೆ ಪ್ರತ್ಯೇಕ ಕ್ಯಾಬಿನ್ ಇದೆ. ವಾಹನಗಳ ಮೂವ್ ಮೆಂಟ್ ರಿಜಿಸ್ಟ್ರಾರ್ ಮೆಂಟೇನ್ ಮಾಡಲಾಗಿದೆ. ವಾಹನಕ್ಕೆ ಜಿಪಿಸ್ ಹಚ್ಚಲಾಗಿದೆ. ಸಿಸಿ ಟಿವಿ ಕ್ಯಾಮೆರಾ ಮೂಲಕ ಕೆಲಸದ ಮೇಲೆ ನಿಗಾ ಇಡಲಾಗಿದೆ. ಈ ವ್ಯವಸ್ಥೆಯ ಕಾರವಾರ ನಗರಸಭೆಯಲ್ಲಿ ಆಳವಡಿಸಬೇಕು ಎಂದರು.ಕಸ ದಿಂದ ಬಯೋಗ್ಯಾಸ್ ತಯಾರಿಸಿ, ಅಲ್ಲಿನ ಬಸ್ ಗಳಿಗೆ ಬಳಸಲಾಗುತ್ತಿದೆ ಎಂದರು.
ಮಾಲಾ ಹುಲಸ್ವಾರ್ ಮಾತನಾಡಿ ಇಂಧೂರ್ ನಗರದ ಎಲ್ಲಾ ಅಂಗಡಿಗಳಲ್ಲಿ ಸ್ವಚ್ಛತೆ ಕುರಿತು ಜಾಹಿರಾತುಗಳು ಜಾಸ್ತಿ ರಾರಾಜಿಸುತ್ತಿದ್ದವು. ದಂಡ ಹಾಕುವ ವ್ಯವಸ್ಥೆ ಕೂಡ ಇದೆ. ಅದಕ್ಕಾಗಿಯೇ ಪ್ರತ್ಯೇಕ ಶಾಖೆ ಇದೆ. ರಾತ್ರಿ ಕೂಡ ಸ್ವಚ್ಛತೆ ನಡೆಯುತ್ತದೆ ಎಂದರು.ಸ್ಥಳೀಯ ದೂರುಗಳ ಮೇಲೆ ಕಸ ಸಂಗ್ರಹಣೆಗೆ ಪ್ರತ್ಯೇಕ ವಾಹನ ಇದೆ ಎಂದರು.ಸದಸ್ಯ ನಿತಿನ್ ಪಿಕಳೆ ಮಾತನಾಡಿ ಯುವ ಸಮುದಾಯದಲ್ಲಿ ಸ್ವಚ್ಛತೆ ಜಾಗೃತಿ ಮಾಡಬೇಕು. ಪುಟ್ ಪಾತ್ ನಲ್ಲಿ ಗೂಡಂಗಡಿ ವ್ಯವಸ್ಥೆ ಬಗ್ಗೆ ಬದಲಾವಣೆ ತರಬೇಕು. ವ್ಯಾಪಾರಿಗಳಿಗೆ ತೊಂದರೆ ಯಾಗದಂತೆ ನಾಗರದಲ್ಲಿ ಗೂಡಂಗಡಿ ಹಾಗೂ ಪುಟ್ ಪಾತ್ ವ್ಯವಸ್ಥೆ ಸುಗಮಗೊಳಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಧ್ವನಿ ಗೂಡಿಸಿದ ಸದಸ್ಯ ಸಂದೀಪತಳೇಕರ ಸಂಚಾರಿ ಗೂಡಂಗಡಿ (ಮೊಬೈಲ್) ತರ ಇರಬೇಕು ಎಂದರು.
ಬೀದಿಯಲ್ಲಿ ದನ ಮತ್ತು ನಾಯಿಗಳು ಕಾಣಲಿಲ್ಲ :ಸ್ಥಾಯಿ ಸಮಿತಿ ಅಧ್ಯಕ್ಷೆಮಾಲಾ ಹುಲಸ್ವಾರ ಮಾತನಾಡಿ ಇಂಧೂರ್ ನಲ್ಲ ಬೀದಿ ನಾಯಿಗಳು, ದನಗಳು ಕಂಡು ಬರಲಿಲ್ಲ. ಎಲ್ಲಾ ಕಡೆ ಹಸಿರು ಇರುವುದು ಗಮನಿಸಿದೆ. ಆದರೆ ಬೃಹತ್ ಮರಗಳ ಸಮಸ್ಯೆ ಅಲ್ಲಿ ಕಾಣಲಿಲ್ಲ.ಪ್ರವಾಸೋದ್ಯಮಕ್ಕೆ ಉತ್ತಮ ಉತ್ತೇಜನ ಕೊಟ್ಟಿದ್ದಾರೆ. ಪೊಲೀಸ್ ವ್ಯವಸ್ಥೆ ಉತ್ತಮ ವಾಗಿದೆ ಎಂದರು.ಎರಡು ಶಿಫ್ಟ್ ನಲ್ಲಿ ಕಸ ಸಂಗ್ರಹ:ನಗರಸಭೆಯ ಪೌರಾಯುಕ್ತಜಗದೀಶ ಹುಲಿಗಜ್ಜಿ ಮಾತನಾಡಿ ಇಂಧೂರ್ ನಗರದ ಜನಸಂಖ್ಯೆ 35 ಲಕ್ಷ. ಕಾರವಾರ ಜನಸಂಖ್ಯೆ 1 ಲಕ್ಷ ಇದೆ. ಇಂಧೂರ್ ನಗರದ ಕಸ 700 ಟನ್. ನಮ್ಮದು 27 ಟನ್ ಕಸ ಇದೆ ಎಂದರು.
ಅಲ್ಲಿಮೂರು ಶಿಫ್ಟ್ ನಲ್ಲಿ ಕೆಲಸ ನಿರ್ವಹಣೆ ಮಾಡಲಾಗುತ್ತಿದೆ. ನಮ್ಮ ಕಾರವಾರದಲ್ಲಿಮುಂಜಾನೆ ಹಾಗೂ ಸಂಜೆ ಎರಡು ಶಿಫ್ಟ್ ನಲ್ಲಿ ಕಸ ಸಂಗ್ರಹ ಮಾಡಬಹುದು. ಈ ಬದಲಾವಣೆ ಸಾಧ್ಯ ಎಂದರು.ಇಂಧೂರ್ ನಲ್ಲಿ ಜನರೇ ವಾಹನಗಳಿಗೆ ಕಸ ಹಾಕುವಂತೆ ವ್ಯವಸ್ಥೆ ಇದೆ. ಇದನ್ನು ನಮ್ಮಲ್ಲಿ ಮಾಡುವ ಅಗತ್ಯ ಇದೆ. ಜಿಪಿಎಸ್ ಟ್ಯಾಕರ್ ನಿಂದ ವಾಹನಗಳ ಮೇಲೆ ನಿಗಾ ವಹಿಸಲು, ಲಿವ್ ಮೂವ್ ಮೆಂಟ್ ಮೇಲೆ ಕಣ್ಣಿಡಲು, ನಗರಸಭೆಯಲ್ಲಿ ಪ್ರತ್ಯೇಕ ನಿಯಂತ್ರಣ ಕೊಠಡಿ ಮಾಡಲಾಗುವುದು.ಸ್ವಚ್ಛತೆ ಉಲ್ಲಂಘನೆ ಬಗ್ಗೆ ಸಾರ್ವಜನಿಕರಿಂದಲೇ ನಗರಸಭೆಗೆ ದೂರು ಬರುತೆ ಮಾಡಬೇಕು.ಸಂಗ್ರಹಣೆಯಾದ ಕಸದಿಂದ ಬಯೋ ಗ್ಯಾಸ್ ತಯಾರಿಸಿ, ಇಂಧೂರ್ ನಲ್ಲಿ ಸುಮಾರು 400 ಬಸ್ ಗಳು ಓಡುತ್ತಿವೆ. ಅವರು ಕಸದಿಂದ ಆದಾಯ ಮೂಲ ಹುಡುಕಿಕೊಂಡಿದ್ದಾರೆ.ವಾಣಿಜ್ಯ ಅಂಗಡಿಗಳ ಕಸ ಸಂಗ್ರಹನೆಗೆ ಒಂದು ಸಮಯ ನಿಗದಿಪಡಿಸಲಾಗಿದೆ.ಫುಡ್ ಕೋರ್ಟ್ ಪ್ರತ್ಯೇಕ ಇದೆ. ರಾತ್ರಿ ನಿಗದಿತ ಸಮಾದೊಳಗೆ ಅಂಗಡಿ ಮುಚ್ಚಿದಿದ್ದರೆ, ದಂಡವಿಧಿಸುವ ಪದ್ಧತಿ ಇದೆ. ಮನೆ ಕಸವನ್ನು ಮನೆಯವರೇ ಗೊಬ್ಬರ ಮಾಡಿಕೊಳ್ಳುವ ವ್ಯವಸ್ಥೆ ಸಹ ಇದೆ. ಹಾಗೆ ಮಾಡಿದವರಿಗೆ ಪ್ರಮಾಣ ಪತ್ರ ಕೊಡುತ್ತಾರೆ. ಒಣ ಕಸಕ್ಕೆ ಮಾತ್ರ ತೆರಿಗೆ ಹಾಕಲಾಗಿತ್ತಿದೆ.ತಿಂಗಳಿಗೆ ಪ್ರತಿ ಮನೆಗೆ ರೂ. 90 ಕರ ಇದೆ. ಕಾರವಾರದಲ್ಲಿ ವರ್ಷಕ್ಕೆ 300 ಕರ ಇದೆ. ಒಂದೇ ಕಡೆ ನೆಲೆಸಿರುವ ತಾಲ್ಲೂಗಡಿಗಳಿಗೆ ಕೆಲ ಸಮಯ ನೀಡಿ, ಮೊಬೈಲ ಗಾಡಿಗಳನ್ನು ಮಾಡಿ, ಕಸ ಸಂಗ್ರಹಿಸಲು ಸೂಚನೆ ನೀಡಬಹುದು.12 ರೂಟ್ ಗಳಲ್ಲಿ ವೆಹಿಕಲ್ ಓಡೊಸಬಹುದು. 12 ಕಮ್ಯುನಿಟಿ ಮೊಬೈಲ್ ಮೂಲಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬಹುದು ಎಂದರು.
ನಗರಸಭೆಯ ಅಧ್ಯಕ್ಷ ರವಿರಾಜ ಮಾತನಾಡಿ, ವಾಹನಗಳು ಹೋಗದ ಸ್ಥಳದಲ್ಲಿ ಕಸ ಸಂಗ್ರಹನೆಗೆ ಕೈ ಗಾಡಿ ನೀಡಬೇಕು. ಬಂದ್ ಆಗಿರುವ ಗೂಡಂಗಡಿ ಲಿಸ್ಟ್ ಮಾಡಿ, ಸ್ಥಳ ತೋರಿಸಬೇಕು. ಗೂಡಂಗಡಿ ಬೇಕಿದ್ದರೆ ಅವರಯ ತೆಗೆದುಕೊಳ್ಳುವರು .ಇಲ್ಲವೇ ರಸ್ತೆ ಜಾಗ ಖುಲ್ಲಾ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆ ,ಪುಟ್ ಪಾತ್ ಅತಿಕ್ರಮಿಸಿದ ಗೂಡಂಗಡಿವರಿಗೆರಾಜಕೀಯ ಬೆಂಬಲ ಬಂದರೂ, ಗಮನಿಸದೆ, ಖುಲ್ಲಾ ಮಾಡಿ ಜನರಿಗೆ ಅನುಕೂಲ ಮಾಡಿ ಎಂದರು.
4.5 ಕೋಟಿ ನಗರಸಭೆಗೆ ಮಂಜೂರು:ಪೌರಾಯುಕ್ತರಾದಜಗದೀಶ ಮಾತನಾಡಿ, ಕಾರವಾರ ನಗರದ ಯುಜಿಡಿ ಸುವ್ಯವಸ್ಥೆಗೆಗೆ 4.5 ಕೋಟಿ ನಗರಸಭೆಗೆ ರಾಜಗಯ ಸರ್ಕಾರ ಮಂಜೂರು ಮಾಡಿದೆ ಎಂದರು.
ಕಸ ನಿರ್ವಹಣೆಗೆನಿಯಂತ್ರಣ ಕೊಠಡಿ, ಅನಧಿಕೃತ ಗೂಡಂಗಡಿ ತೆರವು, ಸಂಡೆ ಮಾರುಕಟ್ಟೆಯ ಕಸ ನಿರ್ವಹಣೆಗೆ ವ್ಯವಸ್ಥೆ ಮಾಡುತ್ತೇವೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 