ಬಾಗಲಕೋಟೆ: ಗಭರ್ಿಣಿ ಹಾಗೂ ಬಾಣಂತಿಯರ ಆಧಾರ ಕಾರ್ಡನಲ್ಲಿರುವ ಹೆಸರು, ವಿಳಾಸ ಹಾಗೂ ಜನ್ಮ ದಿನಾಂಕಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ವಿಶೇಷ ಆಧಾರ ನೊಂದಣಿ ಅಭಿಯಾನ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಪ್ರಧಾನಮಂತ್ರಿ ಮಾತೃ ವಂದನಾ ಹಾಗೂ ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯ ಫಲಾನುಭವಿಗಳಿಗೆ ಸಹಾಯಧನವನ್ನು ನೇರವಾರಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದ್ದು, ಸದರಿ ಫಲಾನುಭವಿಗಳ ಆಧಾರ ಕಾರ್ಡನಲ್ಲಿರುವ ನೂನ್ಯತೆಗಳಿಂದ ಜಿಲ್ಲೆಯಲ್ಲಿ ಯೋಜನೆಗಳ ಅನುಷ್ಠಾನ ಕುಂಟಿತಗೊಂಡಿರುವದನ್ನು ಮನಗಂಡ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಅವರು ಈ ಕುರಿತು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡು ವಿಶೇಷ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಜಿಲ್ಲೆಯಲ್ಲಿ ಮಾತೃ ವಂದನಾ ಹಾಗೂ ಮಾತೃಶ್ರೀ ಯೋಜನೆಯ 428 ಫಲಾನುಭವಿಗಳ ಆಧಾರ ಕಾರ್ಡಗಳಲ್ಲಿ ತಪ್ಪಾಗಿ ಮುದ್ರಗೊಂಡಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿರುವ 18 ಅಟಲ್ಜೀ ಜನಸ್ನೇಹಿ ಕೇಂದ್ರ ಹಾಗೂ ಇ-ಆಡಳಿತದ 2 ಆಧಾರ ನೊಂದಣಿ ಕಿಟ್ಗಳ ಮೂಲಕ ಎರಡು ದಿನಗಳ ಕಾಲ ವಿಶೇಷ ನೊಂದಣಿ ಅಭಿಯಾನ ಮೂಲಕ 80 ಫಲಾನುಭವಿಗಳ ಆಧಾರ ಕಾರ್ಡನಲ್ಲಿರುವ ನೂನ್ಯತೆಗಳನ್ನು ಸರಿಪಡಿಸಲಾಗಿದೆ. ಈ ಅಭಿಯಾನ ನಿರಂತರವಾಗಿದ್ದು, ಗಭರ್ಿಣಿ ಮತ್ತು ಬಾಣಂತಿಯರಿಗೆ ಪ್ರಥಮ ಆಧ್ಯತೆ ಮೇರೆಗೆ ಆಧಾರ ಕಾರ್ಡನಲ್ಲಿರುವ ನೂನ್ಯತೆಗಳನ್ನು ಸರಿಪಡಿಸಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಜಿ.ಪಂ ಸಿಇಓ ತಿಳಿಸಿದ್ದಾರೆ.