ಮದ್ರಿಡ್, ಜ 24 : ಕೊರೆಯುವ ಚಳಿಯೊಂದಿಗೆ ಬೀಸುತ್ತಿರುವ ಭಾರಿ ಗಾಳಿಯಿಂದಾಗಿ ಸ್ಪೇನ್‌ನಲ್ಲಿ ಮೃತಪಟ್ಟವರ ಸಂಖ್ಯೆ 13 ಕ್ಕೆ ಏರಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ
ಸ್ಪೇನ್ ಪ್ರಸ್ತುತ ಬಲವಾದ ಗಾಳಿ, ಭಾರಿ ಹಿಮಪಾತ ಮತ್ತು ಕಡಿಮೆ ತಾಪಮಾನದಿಂದ ಬಳಲುತ್ತಿದೆ. ಸ್ಪ್ಯಾನಿಷ್ ಸಿವಿಲ್ ಗಾರ್ಡ್ ಪ್ರಕಾರ, ಬಂಡೆಗಳ ನಡುವೆ ಮೀನುಗಾರಿಕೆಯಲ್ಲಿ ನಿರತನಾಗಿದ್ದ ಕ್ಯಾಟಲೊನಿಯಾದ 50 ವರ್ಷದ ವ್ಯಕ್ತಿಯೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದಾರೆ.
ಪ್ರತಿಕೂಲ ಹವಾಮಾನದ ಪರಿಣಾಮ ಈಗಾಗಲೇ, ವೇಲೆನ್ಸಿಯಾದಲ್ಲಿ ಐದು ಜನರು, ಕ್ಯಾಟಲೊನಿಯಾದಲ್ಲಿ ನಾಲ್ಕು, ಆಂಡಲೂಸಿಯಾದಲ್ಲಿ ಇಬ್ಬರು, ಕ್ಯಾಸ್ಟೈಲ್ ಮತ್ತು ಲಿಯಾನ್‌ನಲ್ಲಿ ಒಬ್ಬರು ಮತ್ತು ಅಸ್ತೂರಿಯಸ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಹಲವಾರು ಜನರು ಕಾಣೆಯಾಗಿದ್ದಾರೆ.
ಕೆಟಲಾನ್ ಸರ್ಕಾರದ ಪ್ರತಿನಿಧಿಯೊಬ್ಬರು ಪ್ರತಿಕೂಲ ಹವಾಮಾನದ ಬಗ್ಗೆ ಎಚ್ಚರಿಕೆ ವಹಿಸುವಂತೆ ಜನರಿಗೆ ಕರೆ ನೀಡಿದ್ದಾರೆ. ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಗುರುವಾರ ಕ್ಯಾಟಲೊನಿಯಾ ಮತ್ತು ಬಾಲೆರಿಕ್ ದ್ವೀಪಗಳಲ್ಲಿ ಪ್ರಾಕೃತಿಕ ವಿಕೋಪಕ್ಕೆ ಈಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದರು.