ಶ್ರೀಹರಿಕೋಟ, ಡಿ೨೬, ಕೇಂದ್ರ ಸರ್ಕಾರ ಇಸ್ರೊ ಹಿರಿಯ ವಿಜ್ಞಾನಿಗಳಿಗೆ ಪದೋನ್ನತಿಯಾಗಿ
ನೀಡುವ ಕ್ಯಾಬಿನೆಟ್ ಕಾರ್ಯದರ್ಶಿ ದರ್ಜೆ
ಸ್ಥಾನಮಾನವನ್ನು ತಿರುವನಂತಪುರದ ವಿಎಸ್ ಎಸ್ ಸಿ ನಿರ್ದೇಶಕ ಎಸ್. ಸೋಮನಾಥ್ ಅವರಿಗೆ ಕಲ್ಪಿಸಿದೆ. ಕೇಂದ್ರ ಕ್ಯಾಬಿನೆಟ್
ಸಮಿತಿ ಸೋಮನಾಥ್ ಅವರಿಗೆ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ
ಹುದ್ದೆಯ ಸ್ಥಾನಮಾನಕ್ಕೆ ಆಯ್ಕೆ ಮಾಡಿದೆ. ಈ ನೇಮಕಾತಿಯೊಂದಿಗೆ ಸೋಮನಾಥ್ ಅವರನ್ನು ೧೬ ರಿಂದ ೧೭ನೇ
ಪಮಾಟ್ರಿಕ್ಸ್‌ಗೆ ಉನ್ನತೀಕರಿಸಲಾಗಿದೆ. ಸೋಮನಾಥ್ ಪದೋನ್ನತಿ ೨೦೨೦ ಜನವರಿ ೧ ರಿಂದ ಜಾರಿಗೆ ಬರಲಿದೆ. ಇಸ್ರೋದ ಹಾಲಿ ಅಧ್ಯಕ್ಷ ಡಾ ಕೆ.ಶಿವನ್ ಈ ಹಿಂದೆ ಇದೇ ಸ್ಥಾನದಲ್ಲಿದ್ದರು. ೨೦೧೮ ರ ಜನವರಿಯಲ್ಲಿ ಇಸ್ರೋ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಜನವರಿ ೨೦೨೧ಕ್ಕೆ ಶಿವನ್ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಮುಂದಿನ ಇಸ್ರೊ ಅಧ್ಯಕ್ಷರಾಗುವ ಸೋಮನಾಥ್
ನೇಮಕಗೊಳ್ಳುವ ನಿರೀಕ್ಷೆಯಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಇ)
ಯ ಹಳೆಯ ವಿದ್ಯಾರ್ಥಿ ಯಾಗಿರುವ ಸೋಮನಾಥ್ ೧೯೮೫ ರಲ್ಲಿ ಇಸ್ರೋಗೆ ಸೇರಿದ್ದರು. ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಮತ್ತು ರಾಕೆಟ್‌ಗಳ ಅಭಿವೃದ್ಧಿಯ
ಬಗ್ಗೆ ವಿಶೇಷ ಸಂಶೋಧನೆ ನಡೆಸಿದ್ದಾರೆ. ೨೦೧೫ ರಲ್ಲಿ ಸೋಮನಾಥ್ ಅವರನ್ನು
ಇಸ್ರೋ ಎಲ್‌ಪಿಎಸ್‌ಸಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ೨೦೧೮ ರಲ್ಲಿ ವಿಎಸ್‌ಎಸ್ಸಿ ಅಧ್ಯಕ್ಷರಾಗಿದ್ದ ಡಾ. ಕೆ.
ಶಿವನ್ ಇಸ್ರೋ ಅಧ್ಯಕ್ಷರಾಗಿ ನೇಮಕೊಂಡ ನಂತರ, ಸೋಮನಾಥ್ ಅವರ
ಸ್ಥಾನದಲ್ಲಿ ವಿಎಸ್‌ಎಸ್ಸಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ