ಸೋಯಾಬಿನ್ ಬೆಳೆಗೆ ಪೀಡೆ ಸಮೀಕ್ಷೆ: ತಂಡ ಭೇಟಿ

ಸೋಯಾಬಿನ್ ಬೆಳೆಗೆ ಪೀಡೆ ಸಮೀಕ್ಷೆ: ತಂಡ ಭೇಟಿ  Soybean crop pest survey: Team visits

ಲೋಕದರ್ಶನ ವರದಿ 

ಬೆಳಗಾವಿ 16 : ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ಸೋಯಾ ಅವರೆ ಸುಮಾರು 6500 ಹೇಕ್ಟೆರ ಪ್ರದೇಶದಲ್ಲಿ ಬಿತ್ತನೆಆಗಿದ್ದು, ಈಗಾಗಲೇ ಸುಮಾರು15 ರಿಂದ 20 ದಿನಗಳ ಬೆಳೆ ಆಗಿದ್ದು ತಾಲೂಕಿನ ಕೆಲವು ಗ್ರಾಮಗಳಲ್ಲಿ ಮಂಗಳವಾರ ಜಂಟಿ ಕೃಷಿ ನಿರ್ದೇಶಕರು, ಬೆಳಗಾವಿ ಹೆಚ್‌.ಡಿ.ಕೋಳೆಕರ, ಉಪಕೃಷಿ ನಿರ್ದೇಶಕರು, ಬೆಳಗಾವಿ ಸಲೀಂ ಸಂಗತ್ರಾಸ,  ಕೃಷಿ ವಿಜ್ಞಾನ ಕೇಂದ್ರ, ಮತ್ತಿ ಕೊಪ್ಪವಿಜ್ಞಾನಿ ಎಸ್‌. ಎಸ್‌. ಹಿರೇಮಠ, ಸಹಾಯಕ ಕೃಷಿ ನಿರ್ದೇಶಕರು (ವಿಷಯತಜ್ಞ) ಸಿ.ಆಯ್‌. ಹೂಗಾರ, ಸಹಾಯಕ ಕೃಷಿ ನಿರ್ದೇಶಕರು, ಬೆಳಗಾವಿ ಮಂಗಳಾ ಎಸ್‌. ಬಿರಾದಾರ ಮತ್ತು ಕೃಷಿ ಅಧಿಕಾರಿಗಳನ್ನು ಒಳಗೊಂಡ ಸರ್ವೇಕ್ಷಣಾತಂಡವು ಭೇಟಿ ನೀಡಿ ಪೀಡೆ ಸರ್ವೇಕ್ಷಣೆ ಕೈಗೊಂಡಿತು.   

ಸೋಯಾ ಅವರೆಯಲ್ಲಿ ಅಲ್ಲಲ್ಲಿ ಕಾಂಡ ಕೊರಕ ಮತ್ತು ಹಸಿರು ಕಾಯಿ ಕೊರಕ/ ಹೆಲಿಕೊವರ​‍್ಾ ಕೀಟ ಭಾದೆ ಕಂಡು ಬಂದಿದ್ದು,ಇದನ್ನು ನಿರ್ವಹಿಸಲು ಮುಂಜಾಗ್ರತಾ ಕ್ರಮವಾಗಿ ರೈತ ಬಾಂಧವರು ಕೂಡಲೇ ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ ಬೆಳೆರಕ್ಷಣೆಗೆ ಮುಂದಾಗುವಂತೆ ಕೋರಿದೆ. ಹಸಿರುಕಾಯಿ ಕೊರಕ/ಹೆಲಿಕೊವರ​‍್ಾ ಕೀಟದ ಹತೋಟಿಗಾಗಿ ಕ್ಲೋರಾಂಟ್ರಿನಿಲಿ ಪ್ರೋಲ್18.5ಅ ಎಸ್‌.ಸಿ0.3 ಮಿ.ಲೀ.+ 13:0:45 ನೀರಿನಲ್ಲಿ ಕರಗುವ ರಸಗೊಬ್ಬರವನ್ನು 5 ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ 5 ರಿಂದ8 ಹೆಲಿಲ್ಯೂರ್ ಮೋಹಕ ಬಲೆಗಳನ್ನು ಕೀಟದ ಹತೋಟಿಗೆ ಬಳಸುವುದು.  

ಕಾಂಡ ಕೊರಕದ ಹತೋಟಿಗೆ ಥಿಯಾ ಮೆಥಾಕ್ಸಮ್ 12.6ಅ+ ಲ್ಯಾಂಬ್ಡಾ ಸೈಹಲೋಥ್ರಿನ್ 9.5ಅ  1ಮಿ.ಲೀ.ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು. ಕಾಂಡ ಕೊಳೆರೋಗ ಅಲ್ಲಲ್ಲಿ ಕಂಡುಬಂದಿದ್ದು, ಕಾರ್ಬಾಕ್ಸಿನ್ 37.5ಅ+ಥೈರಮ್ 37.5ಅ (ವಿಟಾವ್ಯಾಕ್ಸಪೌಡರ) 2 ಗ್ರಾಂ ಪ್ರತೀಲೀಟರ್ ನೀರಿಗೆ ಬೆರೆಸಿ ರೋಗ ಕಂಡು ಬಂದ ಗಿಡದ ಸುತ್ತಲಿನ ನೆಲವನ್ನು ಓಷಧಿಯಿಂದ ಒದ್ದೆ ಮಾಡಬೇಕು.  ಓಷದಿ ಸಿಂಪರಣೆ ಮಾಡುವಾಗ ರೈತರು ದಯವಿಟ್ಟು ಸೂಕ್ತ ಸುರಕ್ಷಾ ಕ್ರಮಗಳನ್ನು ಅನುಸರಿಸುವುದು ಹಾಗೂ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಸಿಂಪರಣೆ ಕೈಗೊಳ್ಳಬಾರದಂತೆ ಈ ಮೂಲಕ ಕೋರಲಾಗಿದೆ.  ಬೆಳೆಗಳಲ್ಲಿ ಕಳೆ ನಿಯಂತ್ರಣ ಮತ್ತು ಮಣ್ಣಿನ ತೇವಾಂಶ ರಕ್ಷಣೆಗಾಗಿ ಸೂಕ್ತಸಮಯದಲ್ಲಿ ಎಡೆಕುಂಟೆ ಕಾರ್ಯ ಕೈಗೊಳ್ಳುವುದು ಮತ್ತು ಸಾಧ್ಯವಾದ್ದಲ್ಲಿ ಬೆಳೆ ಒಣಗದಂತೆ ರಕ್ಷಿಸಲು ರಕ್ಷಣಾತ್ಮಕ ನೀರಾವರಿ ಒದಗಿಸಲು ತಿಳಿಸಲಾಗಿದೆ.