ರಾಜ್ಯದ ಕರಾವಳಿ ಭಾಗದಲ್ಲಿ ನೈಋತ್ಯ ಮುಂಗಾರು ದುರ್ಬಲ

ಬೆಂಗಳೂರು, ಸೆ.18    ರಾಜ್ಯದ ಕರಾವಳಿ ಭಾಗದಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದ್ದು, ಅನೇಕ ಸ್ಥಳಗಳಲ್ಲಿ ಮಳೆಯಾಗಿದೆ.   

ರಾಯಚೂರು 6. ಕಂಪ್ಲಿ 4, ಕೂಕನೂರು, ಹೊನ್ನಕೆರೆ, ಆನೇಕಲ್, ಗೌರಿಬಿದನೂರು, ಕುಡತಿನಿ ತಲಾ 3. ಸುಬ್ರಹ್ಮಣ್ಯ, ಹುಮ್ನಾಬಾದ್, ದೇವರಹಿಪ್ಪರಗಿ, ಮುದ್ದೇಬಿಹಾಳ, ಇಳಕಲ್, ಕೊಪ್ಪಳ, ಸೂಳೆಪೇಟೆ, ಕೆಂಬಾವಿ, ಕೊಟ್ಟಿಗೇಹಾರ, ಬೇಗೂರು, ತೊಂಡೆಬಾವಿ ತಲಾ 2. ಎಚ್.ಬಿ.ಹಳ್ಳಿ, ಮಣಿ, ಮಂಗಳೂರು, ಪಣಂಬೂರು, ಕಲುಬುರಗಿ , ಸೇಡಮ್, ಚಿಂಚೋಳಿ, ಕಮಲಾಪುರ, ನಾರಾಯಣಪುರ ಹನುಮಸಾಗರ, ಸೈದಾಪುರ, ಮುದ್ಗಲ್, ಮಸ್ಕಿ, ಬಾಗೇವಾಡಿ, ತಾಳಿಕೋಟೆ, ಕೆ.ಆರ್ ನಗರ, ಬರಗೂರು, ಭದ್ರಾವತಿ, ಆಗುಂಬೆ, ಮೂಡಿಗೆರೆ, ಸಂತೇಬೆನ್ನೂರು, ಕೃಷ್ಣರಾಜಪೇಟೆ, ಭಾಗಮಂಡಲ ತಲಾ 1 ಸೆ.ಮೀ ಮಳೆಯಾಗಿದೆ.    

 ಮುನ್ಸೂಚನೆಯಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. 

 ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗಲಿದೆ. ಗರಿಷ್ಠ  27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.