ಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿದ ನೈಋತ್ಯ ರೈಲ್ವೆ ಸಿಬ್ಬಂದಿ

ಹುಬ್ಬಳ್ಳಿ, ಏ 8, ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್  ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ರೈಲ್ವೆ ವಾಣಿಜ್ಯ ವಿಭಾಗದ ಸಿಬ್ಬಂದಿ  ಕೂಲಿಗಳಿಗೆ, ಗುತ್ತಿಗೆ ಕಾರ್ಮಿಕರಿಗೆ 80 ರೇಷನ್ ಪೊಟ್ಟಣಗಳನ್ನು ವಿತರಿಸಿದರು. ಪ್ರತಿ ಪೊಟ್ಟಣದಲ್ಲಿ ಐದು ಕೆಜಿ ಅಕ್ಕಿ, ಒಂದು ಕೆಜಿ ಗೋದಿ, ಒಂದು ಲೀಟರ್ ಎಣ್ಣೆ, ಒಂದು ಕೆಜಿ ಉದ್ದು, ಒಂದು ಕೆಜಿ ಅವಲಕ್ಕಿ, ಒಂದು ಕೆಜಿ ರವೆ, ಒಂದು ಕೆಜಿ ಸಕ್ಕರೆ, 250 ಗ್ರಾಂ ಟೀ ಪುಡಿ, ಒಂದು ಕೆಜಿ ಈರುಳ್ಳಿ, 500 ಗ್ರಾಂ ಆಲೂಗೆಡ್ಡೆ, 100 ಗ್ರಾಂ ಅರಿಶಿನ, ಮೆಣಸು, ಧನಿಯಾ ಪುಡಿ ಇರಿಸಲಾಗಿದೆ. ಕಳೆದ ವಾರ ಈ ವಿಭಾಗದ ಸಿಬ್ಬಂದಿ ಹುಬ್ಬಳ್ಳಿಯ ರೈಲ್ ಸೌಧದಲ್ಲಿ ಕೂಡ ಮನೆಕೆಲಸದ ಸಿಬ್ಬಂದಿಗೆ ಆಹಾರ ಪೊಟ್ಟಣ ವಿತರಿಸಿದ್ದರು.