ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು

ಸಿಯೋಲ್, ಫೆ 28 :     ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿನ 256 ಹೊಸ ಪ್ರಕರಣಗಳು ದಾಖಲಾಗಿದ್ದು ಶುಕ್ರವಾರದ ವೇಳೆಗೆ ಒಟ್ಟು ಕೊರೊನಾ ಸೋಂಕು ಪೀಡಿತರ ಸಂಖ್ಯೆ 2022 ಕ್ಕೆ ಏರಿಕೆಯಾಗಿದೆ.  

 ಗ್ರೀನ್ ವಿಚ್ ಕಾಲಮಾನ 00.00 ಗಂಟೆಗೆ ಒಟ್ಟು ಕೊರೊನಾ ಸೋಂಕು ಪೀಡಿತರ ಸಂಖ್ಯೆ 2022 ರಷ್ಟಿದ್ದು ಈ ಸೋಂಕಿಗೆ ಬಲಿಯಾದವರ ಸಂಖ್ಯೆ 13 ರಷ್ಟಿತ್ತು.       

 ದಕ್ಷಿಣ ಕೊರೊಯಾ ರೋಗ ನಿಯಂತ್ರಣ ಕೇಂದ್ರ ದಿನಕ್ಕೆರಡು ಬಾರಿ ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆ ಮತ್ತು ಸಂಜೆ 5 ಗಂಟೆಗೆ ಇತ್ತೀಚಿನ ಮಾಹಿತಿಯನ್ನು ಪ್ರಕಟಿಸುತ್ತಿದೆ.  

 ಹೊಸ ರೋಗಿಗಳ ಪೈಕಿ 182 ಜನರು ದಿಯೋಗು ನಿವಾಸಿಗಳಾಗಿದ್ದು ಇದು ರಾಜಧಾನಿ ಸಿಯೋಲ್ ನಿಂದ 300 ಕಿಲೋಮೀಟರ್ ಆಗ್ನೇಯಕ್ಕಿದೆ. 49 ಸೋಂಕಿತರು ಸಮೀಪದ ಉತ್ತರ ಗಿಯೋಂಗ್ಸಾಂಗ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ. ಈ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ಕ್ರಮವಾಗಿ 1314 ಮತ್ತು 394 ಹೆಚ್ಚಳವಾಗಿದೆ.  

ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು ಫೆ 19 ರಿಂದ 27 ರ ಅವಧಯಲ್ಲಿ 1735 ಹೊಸ ಪ್ರಕರಣಗಳು ವರದಿಯಾಗಿದ್ದು ಭಾನುವಾರ ದಕ್ಷಿಣ ಕೊರಿಯಾದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು.